AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inflation: ಬೆಲೆ ನಿಯಂತ್ರಣಕ್ಕೆ ಲಗಾಮ್ ಹಾಕಲು ಆರ್​ಬಿಐ ವಿಫಲ; ಹಣದುಬ್ಬರ 7.41ಕ್ಕೆ ಏರಿಕೆ

ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಗಮನಾರ್ಹವಾಗಿ ಹೆಚ್ಚಾಗಿದೆ. ಕೇವಲ ಒಂದು ತಿಂಗಳಲ್ಲಿ ಹಣದುಬ್ಬರವು 7 ರಿಂದ 7.41 ಕ್ಕೆ ಜಿಗಿದಿದೆ.

Inflation: ಬೆಲೆ ನಿಯಂತ್ರಣಕ್ಕೆ ಲಗಾಮ್ ಹಾಕಲು ಆರ್​ಬಿಐ ವಿಫಲ; ಹಣದುಬ್ಬರ 7.41ಕ್ಕೆ ಏರಿಕೆ
ಹಣದುಬ್ಬರ 7.41ಕ್ಕೆ ಏರಿಕೆ (ಸಾಂದರ್ಭಿಕ ಚಿತ್ರ)Image Credit source: Getty Images
TV9 Web
| Updated By: Rakesh Nayak Manchi|

Updated on:Oct 13, 2022 | 3:42 PM

Share

ಬೆಲೆ ನಿಯಂತ್ರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಮ್ಮೆ ವಿಫಲವಾಗಿದೆ. ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಗಮನಾರ್ಹವಾಗಿ ಹೆಚ್ಚಾಗಿದೆ. ಕೇವಲ ಒಂದು ತಿಂಗಳಲ್ಲಿ ಹಣದುಬ್ಬರವು 7 ರಿಂದ 7.41 ಕ್ಕೆ ಜಿಗಿದಿದೆ. ಆಹಾರ ಸೂಚ್ಯಂಕ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಹಾರ ಬೆಲೆ ಸೂಚ್ಯಂಕವು 7.62 ರಿಂದ 8.6 ರಷ್ಟು ಹೆಚ್ಚಾಗಿದೆ. ಅದರೊಂದಿಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ಅಂಕಿಅಂಶ ಸಚಿವಾಲಯ ಪ್ರಕಟಿಸಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ತರಕಾರಿಗಳ ಬೆಲೆಗಳು ಶೇಕಡಾ 2.6 ರಿಂದ 18.05 ರಷ್ಟು ಹೆಚ್ಚಾಗಿದೆ. ಮಾಂಸಾಹಾರ ದರವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾಂಸದ ಬೆಲೆ ಶೇ.1.3ರಿಂದ ಶೇ.2.55ರಷ್ಟು ಏರಿಕೆಯಾಗಿದೆ. ಅಲ್ಲದೆ ಬಟ್ಟೆಗಳ ಬೆಲೆಗಳು ಶೇಕಡಾ 0.8 ರಷ್ಟು ಹೆಚ್ಚಾಗಿದೆ. 0.4ರಷ್ಟು ಏರಿಕೆಯೊಂದಿಗೆ ಇಂಧನ ಬೆಲೆ ಶೇ.10.39ಕ್ಕೆ ಜಿಗಿದಿದೆ ಎಂದು ಕೇಂದ್ರ ಪ್ರಕಟಿಸಿದೆ.

ವಸತಿ ಕ್ಷೇತ್ರ ಕೂಡ ಅದೇ ಹಾದಿಯಲ್ಲಿದೆ. ವಸತಿ ಸೂಚ್ಯಂಕವು 0.3 ಶೇಕಡಾ ಹೆಚ್ಚಳದೊಂದಿಗೆ 4.57 ಶೇಕಡಾವನ್ನು ತಲುಪಿತು. ಒಟ್ಟಿನಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಅಲ್ಲದೆ ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Thu, 13 October 22