ಇದು ವಿದ್ಯುತ್ ಕ್ರಾಂತಿ..! ವೈಫೈ ಇಂಟರ್ನೆಟ್ ರೀತಿ ವೈರ್ಲೆಸ್ ಎಲೆಕ್ಟ್ರಿಸಿಟಿ ರವಾನಿಸಿದ ಫಿನ್​ಲ್ಯಾಂಡ್ ವಿಜ್ಞಾನಿಗಳು

Scientists transfer power wirelessly: ಫಿನ್​ಲ್ಯಾಂಡ್ ದೇಶದ ವಿಜ್ಞಾನಿಗಳು ವೈರ್ಲೆಸ್ ಆಗಿ ವಿದ್ಯುತ್ ಪ್ರವಹಿಸುವಂತಹ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಮತ್ತು ರಿಸೋನೆಂಟ್ ಕಪ್ಲಿಂಗ್ ಟೆಕ್ನಿಕ್ಸ್ ಬಳಸಿ ಗಾಳಿ ಮೂಲಕ ವಿದ್ಯುತ್ ಹರಿಯಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಅಮೆರಿಕದ ದರ್ಪ್ ಸಂಸ್ಥೆ ಕೂಡ ವೈರ್ಲೆಸ್ ಆಗಿ ವಿದ್ಯುತ್ ಹರಿಯಿಸುವ ಪ್ರಯೋಗಗಳನ್ನು ಮಾಡುತ್ತಿದೆ.

ಇದು ವಿದ್ಯುತ್ ಕ್ರಾಂತಿ..! ವೈಫೈ ಇಂಟರ್ನೆಟ್ ರೀತಿ ವೈರ್ಲೆಸ್ ಎಲೆಕ್ಟ್ರಿಸಿಟಿ ರವಾನಿಸಿದ ಫಿನ್​ಲ್ಯಾಂಡ್ ವಿಜ್ಞಾನಿಗಳು
ವೈರ್ಲೆಸ್ ವಿದ್ಯುತ್ ಪ್ರಸರಣ

Updated on: Jan 19, 2026 | 5:01 PM

ಹೆಲ್ಸಿಂಕಿ, ಜನವರಿ 19: ಡಾಟಾ ಸೆಂಟರ್​ಗಳ ಸಿಸ್ಟಂಗಳಿಂದ ಸೃಷ್ಟಿಯಾಗುವ ಶಾಖ ಬಳಸಿ ವಿದ್ಯುತ್ ಉತ್ಪಾದಿಸುವ ಆವಿಷ್ಕಾರ ಮಾಡಿರುವ ಫಿನ್​ಲ್ಯಾಂಡ್ ಸಂಶೋಧಕರು ಇದೀಗ ಕೇಬಲ್ ವೈರ್ ಇಲ್ಲದೆಯೇ ವಿದ್ಯುತ್ ಹರಿಯಿಸುವ ಪ್ರಯೋಗ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ದಿ ಆಗುತ್ತಿದ್ದು ಇತ್ತೀಚಿನ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿವೆ. ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಬಳಸುವ ರೀತಿಯಲ್ಲಿ ವಿದ್ಯುತ್ ಬಳಸುವ ಒಂದು ಟೆಕ್ನಾಲಜಿ ಬರುವ ಸಾಧ್ಯತೆ ದಟ್ಟವಾಗಿದೆ.

ವೈರ್ಲೆಸ್ ವಿದ್ಯುತ್ ಹೇಗೆ ಸಾಧ್ಯ?

ವೈಫೈ ಮೂಲಕ ಡಾಟಾ ವರ್ಗಾವಣೆ ಸಾಧ್ಯವಾಗುವಂತೆ, ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ (ವಿದ್ಯುದ್ಕಾಂತೀಯ) ಮತ್ತು ರಿಸೋನೆಂಟ್ ಕಪ್ಲಿಂಗ್ ಟೆಕ್ನಿಕ್ (ಪ್ರತಿಧ್ವನಿಸುವ) ಉಪಯೋಗಿಸಿ ಗಾಳಿ ಮೂಲಕ ವಿದ್ಯುತ್ ಅನ್ನು ಪ್ರವಹಿಸಬಹುದು ಎಂಬುದನ್ನು ಫಿನ್ನಿಶ್ ಸಂಶೋಧಕರು ತಮ್ಮ ಪ್ರಯೋಗಗಳಿಂದ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಸಖತ್ ಫೀಚರ್ಸ್; ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳೂ ಕಠಿಣ

ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಟ್ರಾನ್ಸ್​ಮಿಟ್ಟರ್ ಮತ್ತು ರಿಸೀವರ್ ನಡುವೆ ಯಾವುದೇ ಕೇಬಲ್ ಕನೆಕ್ಷನ್ ಇಲ್ಲದೆಯೇ, ರೇಡಿಯೋ ಫ್ರೀಕ್ವೆಸ್ಸಿ ಹೊಂದಾಣಿಕೆ ಮೂಲಕ ವಿದ್ಯುತ್ ಅನ್ನು ಸಾಗಿಸಲು ಸಾಧ್ಯ. ಅದನ್ನು ಸಾಧ್ಯವಾಗಿಸುವಂತಹ ತಂತ್ರಜ್ಞಾನದ ಆವಿಷ್ಕಾರಕ್ಕೆ ಪ್ರಯೋಗಗಳು ನಡೆಯುತ್ತಿವೆ. ಫಿನ್​ಲ್ಯಾಂಡ್ ವಿಜ್ಞಾನಿಗಳು ಒಂದು ಹಂತಕ್ಕೆ ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸದ್ಯ ಬಹಳ ಕಿರು ಅಂತರಕ್ಕೆ ಮಾತ್ರ ಈ ವಿದ್ಯುತ್ ವರ್ಗಾವಣೆ ಮಾಡಲು ಸಾಧ್ಯ.

ಅಮೆರಿಕದ ‘ದರ್ಪ’ದಿಂದಲೂ ಇಂಥದ್ದೊಂದು ಪ್ರಯೋಗ

ಅಮೆರಿಕದ ಡಿಫೆನ್ಸ್ ರಿಸರ್ಚ್ ಸಂಸ್ಥೆಯಾದ ದರ್ಪ (DARPA) ಕೂಡ ವೈರ್ಲೆಸ್ ಎಲೆಕ್ಟ್ರಿಸಿಟಿ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದೆ. ಲೇಸರ್ ಮೂಲಕ ವೈರ್ಲೆಸ್ ಆಗಿ ಸುಮಾರು 8-9 ಕಿಮೀ ದೂರ ವಿದ್ಯುತ್ ಅನ್ನು ಹರಿಯಿಸಲು ಯಶಸ್ವಿಯಾಗಿದೆ. ಪರ್ಸಿಸ್ಟೆಂಟ್ ಆಪ್ಟಿಕಲ್ ವೈರ್ಲೆಸ್ ಎನರ್ಜಿ ರಿಲೇ ಯೋಜನೆ ಭಾಗವಾಗಿ ನಡೆದ ಇತ್ತೀಚಿನ ಪ್ರಯೋಗದಲ್ಲಿ 8.6 ಕಿಮೀ ದೂರಕ್ಕೆ 800 ವ್ಯಾಟ್​ನಷ್ಟು ವಿದ್ಯುತ್ ಅನ್ನು ರವಾನಿಸುವಲ್ಲಿ ಯಶಸ್ವಿ ಆಗಿದೆ. ಈ ಹಿಂದೆ ಇದೇ ಸಂಸ್ಥೆಯು 1.7 ಕಿಮೀ ದೂರ 25 ಸೆಕೆಂಡುಗಳ ಕಾಲ 230 ವ್ಯಾಟ್ ವಿದ್ಯುತ್ ಅನ್ನು ಹರಿಸಿತ್ತು.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

ವೈರ್ಲೆಸ್ ವಿದ್ಯುತ್ ರವಾನೆ ತತ್ವ ಹೊಸದೇನಲ್ಲ. ಇದರ ಪ್ರಯೋಗ ಆರಂಭಕ್ಕೆ ಶತಮಾನಕ್ಕೂ ಹೆಚ್ಚಿನ ಇತಿಹಾಸ ಇದೆ. ಇತ್ತೀಚೆಗೆ ಈ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೆಚ್ಚುತ್ತಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಶಕ್ತಿ ಬಳಸಿ ವಿದ್ಯುತ್ ತಯಾರಿಸಿ ಭೂಮಿಗೆ ಹರಿಯಿಸುವ ತಂತ್ರಜ್ಞಾನದ ಆವಿಷ್ಕಾರಕ್ಕೂ ಪ್ರಯೋಗಗಳು ನಡೆಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ