ಭಾರತ ಆಸ್ಟ್ರೇಲಿಯಾ ಮೊದಲ ಎಐಇಎಸ್​ಸಿ ಸಭೆ; ಧರ್ಮೇಂದ್ರ ಪ್ರಧಾನ್ ಜೊತೆ ಆಸ್ಟ್ರೇಲಿಯಾ ಸಚಿವರ ಭೇಟಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Nov 06, 2023 | 2:35 PM

AIESC Meeting in Gujarat: ಆಸ್ಟ್ರೇಲಿಯಾ ಭಾರತ ಶಿಕ್ಷಣ ಮತ್ತು ಕೌಶಲ ಮಂಡಳಿಯ (ಎಐಇಎಸ್​ಸಿ) ಮೊದಲ ಸಭೆ ಗುಜರಾತ್​ನ ಗಾಂಧಿನಗರ್​ನಲ್ಲಿ ನವೆಂಬರ್ 6ಕ್ಕೆ ಆರಂಭಗೊಂಡಿದೆ. ಭಾರತದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್, ಅಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್, ಕೌಶಲ್ಯ ಮತ್ತು ಅಲ್ಲಿನ ತರಬೇತಿ ಸಚಿವ ಬ್ರೆಂಡಾನ್ ಓಕಾನಾರ್ ಅವರು ಈ ಸಭೆ ಸಹ-ಅಧ್ಯಕ್ಷರಾಗಿದ್ದಾರೆ. ಶಿಕ್ಷಣ ಮತ್ತು ಕೌಶಲ್ಯ ಎರಡೂ ಒಂದೇ ಸಾಂಸ್ಥಿಕ ರಚನೆಯಲ್ಲಿರುವುದು ಇದೇ ಮೊದಲು.

ಭಾರತ ಆಸ್ಟ್ರೇಲಿಯಾ ಮೊದಲ ಎಐಇಎಸ್​ಸಿ ಸಭೆ; ಧರ್ಮೇಂದ್ರ ಪ್ರಧಾನ್ ಜೊತೆ ಆಸ್ಟ್ರೇಲಿಯಾ ಸಚಿವರ ಭೇಟಿ
ಆಸ್ಟ್ರೇಲಿಯಾ ಭಾರತ ಶಿಕ್ಷಣ ಮತ್ತು ಕೌಶಲ ಮಂಡಳಿಯ ಸಭೆ
Follow us on

ಗಾಂಧಿನಗರ್, ನವೆಂಬರ್ 6: ಆಸ್ಟ್ರೇಲಿಯಾ ಭಾರತ ಶಿಕ್ಷಣ ಮತ್ತು ಕೌಶಲ ಮಂಡಳಿಯ (AIESC) ಮೊದಲ ಸಭೆ ಗುಜರಾತ್​ನ ಗಾಂಧಿನಗರ್​ನಲ್ಲಿ ಇಂದು ಸೋಮವಾರ ಆರಂಭಗೊಂಡಿತು. ಭಾರತದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ (Minister of Eduction and Skill Development and entrepreneurship) ಅವರು ಈ ಸಭೆಯ ಸಹ-ಅಧ್ಯಕ್ಷರಾಗಿದ್ದರು. ಅಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ (Jason Clare), ಕೌಶಲ್ಯ ಮತ್ತು ತರಬೇತಿ ಸಚಿವ ಬ್ರೆಂಡಾನ್ ಓಕಾನಾರ್ (Brendon O’Connor) ಅವರೂ ಕೂಡ ಈ ಕಾರ್ಯಕ್ರಮದ ಸಹ-ಅಧ್ಯಕ್ಷರಾಗಿದ್ದರು.

ಶಿಕ್ಷಣ ಮತ್ತು ಕೌಶಲ್ಯಗಳನ್ನು ಸಾಂಸ್ಥಿಕ ರಚನೆಯಲ್ಲಿ ಸೇರಿಸಿರುವುದು ಇದೇ ಮೊದಲ ಬಾರಿಗೆ. ಈ ಸಭೆಯಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ಸಂಯೋಗ ಸಾಧಿಸುವ ಅವಕಾಶಗಳನ್ನು ಹುಡುಕುವ ಪ್ರಯತ್ನವಾಗುತ್ತಿದೆ. ಭವಿಷ್ಯದ ಕೆಲಸಗಳು, ಶಿಕ್ಷಣದಲ್ಲಿ ಸಾಂಸ್ಥಿಕ ಜೊತೆಗಾರಿಕೆ, ಸಂಶೋಧನೆಯ ಪರಿಣಾಮ ಈ ಮೂರು ಅಂಶಗಳ ಬಗ್ಗೆ ಈ ಸಭೆಯಲ್ಲಿ ಅವಲೋಕನ ನಡೆಸಲಾಗುತ್ತಿದೆ.

ಇದನ್ನೂ ಓದಿ: ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ

ಈ ಸಭೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಶಿಕ್ಷಣ ಮತ್ತು ಕೌಶಲ್ಯಗಳ ಸಚಿವರಷ್ಟೇ ಅಲ್ಲದೇ ಎರಡೂ ದೇಶಗಳ ಈ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಸಾಂಸ್ಥಿಕ ಸಹಯೋಗ ಸಾಧಿಸುವ ಸಾಧ್ಯತೆಗಳನ್ನು ಅವಲೋಕಿಸಲು ಸಚಿವರು ವಿವಿಧ ಉನ್ನತ ವ್ಯಾಸಂಗ ಸಂಸ್ಥೆಗಳಿಗೆ ಭೇಟಿ ಕೊಡಲಿದ್ದಾರೆ. ಗಾಂಧಿನಗರದಲ್ಲೇ ಇರುವ ಐಐಟಿ, ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿ (ಪಿಡಿಡಿಯು), ವಿದ್ಯಾ ಸಮೀಕ್ಷಾ ಕೇಂದ್ರಗಳಿಗೆ (ವಿಎಸ್​ಕೆ) ಇವರುಗಳು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ: PM Kisan 15th Installment: ಪಿಎಂ ಕಿಸಾನ್ ಯೋಜನೆ, ಹೊಸ ಕಂತು ಬಿಡುಗಡೆಗೆ ದಿನಗಣನೆ; ಫಲಾನುಭವಿಗಳ ಪಟ್ಟಿ ಇಲ್ಲಿದೆ

ಎಐಇಎಸ್​ಸಿ ಸಮಾವೇಶ ಎರಡು ದಿನಗಳದ್ದಿರಲಿದೆ. ನಾಳೆಯೂ ಸಚಿವರು ಮತ್ತು ಅಧಿಕಾರಿಗಳು ವಿವಿಧ ಕ್ಯಾಂಪಸ್​ಗಳಿಗೆ ಭೇಟಿ ಕೊಡುವುದಿದೆ. ಗಿಫ್ಟ್ ಸಿಟಿಯಲ್ಲಿ ನಿರ್ಮಿಸಲಾಗುತ್ತಿರುವ ಆಸ್ಟ್ರೇಲಿಯಾದ ಡೀಕಿನ್ ಯೂನಿವರ್ಸಿಟಿ ಮತ್ತು ವಾಲೋಂಗೋಂಗ್ ಯೂನಿವರ್ಸಿಟಿಯ ಕ್ಯಾಂಪಸ್​ಗಳಿಗೂ ಅವರು ಭೇಟಿ ಮಾಡಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ