ಫಿಕ್ಸೆಡ್ ಡೆಪಾಸಿಟ್ ಇಡುವಾಗ ಈ ಟ್ರಿಕ್ಸ್ ಪಾಲಿಸಿದ್ರೆ ಲಾಭ ಅಧಿಕ
ಸ್ಥಿರ ಠೇವಣಿಯೂ ಸುರಕ್ಷಿತ ಹಾಗೂ ಅಪಾಯವಿಲ್ಲದ ಹೂಡಿಕೆಯಾಗಿದೆ. ಆದರೆ ಈ ಎಫ್ ಡಿಯಲ್ಲಿ ಲಾಭ ಪಡೆಯಲು ಹಣವನ್ನು ಒಂದೇ ಎಫ್‌ಡಿಯಲ್ಲಿ ಇಡುವ ಬದಲು, ಅದನ್ನು ಬೇರೆ ಬೇರೆ ಅವಧಿಗಳಿಗೆ ವಿಂಗಡಿಸಿ ಹೂಡಿಕೆ ಮಾಡುವುದು ಉತ್ತಮ. ಅವಧಿಗಳ ಆಯ್ಕೆ, ಬ್ಯಾಂಕ್ ಗಳಲ್ಲಿ ಎಫ್ ಡಿ ಮೇಲಿನ ಬಡ್ಡಿದರ ಈ ಎಲ್ಲಾ ಅಂಶಗಳ ಮೇಲೆ ಗಮನ ಹರಿಸಿದರೆ ಹೆಚ್ಚಿನ ಬಡ್ಡಿ ಹಾಗೂ ಲಾಭ ಪಡೆಯಲು ಸಾಧ್ಯ.

ಮುಖ್ಯಾಂಶಗಳು
- ಹೆಚ್ಚಿನವರು ಹಣವನ್ನು ಚಿನ್ನ, ಸೇರಿದಂತೆ ವಿವಿಧ ಹಣಕಾಸು ಯೋಜನೆಗಳಿಗೆ ಹೂಡಿಕೆ ಮಾಡುತ್ತಾರೆ
- ಸ್ಥಿರ ಠೇವಣಿ ಸುರಕ್ಷಿತ ಹಾಗೂ ಅಪಾಯವಿಲ್ಲದೇ ಹೂಡಿಕೆ
- ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಲ್ಯಾಡರಿಂಗ್ ತಂತ್ರ ಅಳವಡಿಸಿದರೆ ಲಾಭ ಅಧಿಕ
ಹೆಚ್ಚಿನವರು ತಾವು ದುಡಿದ ಹಣವನ್ನು ಚಿನ್ನ, ಸೇರಿದಂತೆ ವಿವಿಧ ಹಣಕಾಸು ಯೋಜನೆಗಳಿಗೆ (Financial Planning) ಹೂಡಿಕೆ ಮಾಡುತ್ತಾರೆ. ಆದರೆ ಈ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮತ್ತೊಂದು ತಂತ್ರಗಳಲ್ಲಿ ಒಂದು. ಈ ಇನ್ವೆಸ್ಟ್ಮೆಂಟ್ ಸುರಕ್ಷಿತವಾಗಿದ್ದು ಯಾವುದೇ ಅಪಾಯವಿಲ್ಲ. ಆದ್ರೆ ನೀವೇನಾದ್ರೂ ಸ್ಥಿರ ಠೇವಣಿ ಮಾಡುತ್ತೀರಿ ಅಂತಾದ್ರೆ ಈ ಕೆಲವು ವಿಷ್ಯಗಳತ್ತ ಗಮನ ಕೊಡುವುದು ಸೂಕ್ತ. ಬಡ್ಡಿದರಗಳು ಹಾಗೂ ಎಫ್ ಡಿ ಅವಧಿಗಳು, ಲ್ಯಾಡರಿಂಗ್ ತಂತ್ರ, ತೆರಿಗೆ ನಿಯಮಗಳು ಹಾಗೂ ಅವಧಿ ಮುನ್ನವೇ ಹಣ ಹಿಂಪಡೆಯುವಿಕೆ ಈ ಕೆಲವು ಅಂಶಗಳ ಮೇಲೆ ಗಮನ ಹರಿಸಿದರೆ ಇದು ನಿಮಗೆ ಉತ್ತಮ ಲಾಭ ತಂದು ಕೊಡುತ್ತವೆ.
ಸ್ಥಿರ ಠೇವಣಿ ಇಡುವಾಗ ಈ ಸಲಹೆಗಳನ್ನು ಪಾಲಿಸಿ
- ಎಲ್ಲಾ ಬ್ಯಾಂಕುಗಳಲ್ಲಿ ಬಡ್ಡಿ ದರ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ನೀವು ಎಫ್ ಡಿ ಇಡುತ್ತಿದ್ದರೆ ವಿವಿಧ ಬ್ಯಾಂಕ್ ಗಳ ಬಡ್ಡಿದರಗಳನ್ನು ಒಮ್ಮೆ ಪರಿಶೀಲಿಸಿ.
- ಹಿರಿಯ ನಾಗರಿಕರಿಗೆ ಸಾಮಾನ್ಯರಿಗಿಂತ ಶೇ. 0.50 ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಹೀಗಾಗಿ ಅವರ ಹೆಸರಿನಲ್ಲಿ ಎಫ್ ಡಿ ಹಣ ಹೂಡಿಕೆ ಮಾಡುವುದು ಉತ್ತಮ.
- ಸ್ಥಿರ ಠೇವಣಿಯಲ್ಲಿ ಬಡ್ಡಿದರವನ್ನು ಗಮನಿಸಿ ಅವಧಿಯನ್ನು ಆಯ್ಕೆ ಮಾಡಿ. ಎಷ್ಟು ವರ್ಷಗಳ ಕಾಲ ಇಟ್ಟರೆ ಗರಿಷ್ಠ ಬಡ್ಡಿ ಸಿಗುತ್ತದೆ ಎಂಬುವುದರತ್ತ ಗಮನ ಹರಿಸಿ.
- ಅವಧಿ ಪೂರ್ಣಗೊಳ್ಳುವ ಮೊದಲೇ ಎಫ್‌ಡಿ ಹಣವನ್ನು ಹಿಂಪಡೆದರೆ ಬ್ಯಾಂಕುಗಳು ಶೇ 0.5 ರಿಂದ ಶೇ. 1 ರವರೆಗೆ ದಂಡ ವಿಧಿಸುತ್ತವೆ. ಹೀಗಾಗಿ ನೀವು ಎಫ್ ಡಿ ಇಡುವ ಬ್ಯಾಂಕ್ ಗಳಲ್ಲಿ ದಂಡ ವಿಧಿಸಲಾಗುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.
- ಸ್ಥಿರ ಠೇವಣಿ ಇಡುವಾಗ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಎಫ್‌ಡಿ ಅವಧಿಯನ್ನು ನಿಗದಿಪಡಿಸಿಕೊಳ್ಳಿ.
- ಫಿಕ್ಸೆಡ್ ಡೆಪಾಸಿಟ್ ನಲ್ಲಿ ಲ್ಯಾಡರಿಂಗ್ ತಂತ್ರ ಅಳವಡಿಸಿಕೊಳ್ಳುವುದನ್ನು ಮರೆಯದಿರಿ.
- ಈ ತಂತ್ರದಡಿಯಲ್ಲಿ ನಿಮ್ಮ ಎಲ್ಲಾ ಹಣವನ್ನು ಒಂದೇ ಎಫ್‌ಡಿಯಲ್ಲಿ ಇಡುಬೇಡಿ. 2, 3 ಅಥವಾ 4 ಭಾಗಗಳಾಗಿ ವಿಂಗಡಿಸಿ ಆ ಮೊತ್ತವನ್ನು ಬೇರೆ ಬೇರೆ ಅವಧಿಗೆ ಡೆಪಾಸಿಟ್ ಇಡುವುದು ಲಾಭದ ದೃಷ್ಟಿಯಿಂದ ತುಂಬಾನೇ ಉತ್ತಮ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ
- ನಿಮ್ಮ ಒಟ್ಟು ಆದಾಯ ತೆರಿಗೆ ಮಿತಿಗಿಂತ ಕಡಿಮೆಯಿದ್ದರೆ, ಟಿಡಿಎಸ್ ಕಡಿತಗೊಳಿಸದಂತೆ ತಡೆಯಲು ನೀವು ಫಾರ್ಮ್ 15ಜಿ ಅಥವಾ ಫಾರ್ಮ್ 15ಹೆಚ್ ಬ್ಯಾಂಕಿಗೆ ಸಲ್ಲಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Thu, 29 October 26




