ಇ100 ಇಂಧನ ಚಾಲಿತ ವಾಹನಗಳಿಗೆ ಗ್ರೀನ್ ಸಿಗ್ನಲ್; ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಸರ್ಕಾರದ ತಿದ್ದುಪಡಿ

ಸಂಪೂರ್ಣ ಎಥೆನಾಲ್ (E100) ಇಂಧನದಿಂದ ಚಲಿಸುವ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಫ್ಲೆಕ್ಸ್-ಫ್ಯುಯೆಲ್ ವಾಹನಗಳ ತಯಾರಿಕೆಗೆ ದಾರಿ ಮಾಡಿಕೊಡಲಾಗಿದೆ. ಇ100 ಇಂಧನದಲ್ಲಿ ಪೆಟ್ರೋಲ್ ಮಿಶ್ರಣ ನಗಣ್ಯವಿರುತ್ತದೆ. ಇದರಿಂದ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.

ಇ100 ಇಂಧನ ಚಾಲಿತ ವಾಹನಗಳಿಗೆ ಗ್ರೀನ್ ಸಿಗ್ನಲ್; ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಸರ್ಕಾರದ ತಿದ್ದುಪಡಿ
ಎಥನಾಲ್ ಇಂಧನ
Image Credit source: Getty Images

Updated on: Oct 26, 2026 | 6:09 PM

ನವದೆಹಲಿ, ಅಕ್ಟೋಬರ್ 26: ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸುವ ಮತ್ತು ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಶೇ. 20 ಮೇಲ್ಪಟ್ಟ ಎಥೆನಾಲ್ ಮಿಶ್ರಣ ಇರುವ ಇಂಧನದಿಂದ ಚಲಿಸುವ ವಾಹನಗಳಿಗೆ ಉತ್ತೇಜಿಸಲು ಕೇಂದ್ರ ಮೋಟಾರು ವಾಹನ ನಿಯಮಗಳಿಗೆ (Central Motor Vehicles Rules) ಅಧಿಕೃತ ತಿದ್ದುಪಡಿ ತರಲಾಗಿದೆ.

E100 ಮತ್ತು E85 ಇಂಧನ ಬಳಕೆಗೆ ಅಧಿಕೃತ ಅನುಮೋದನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) 1989ರ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ವಾಹನಗಳ ಹೊರಸೂಸುವಿಕೆ ಮಾನದಂಡಗಳು ಮತ್ತು ಇಂಧನ ವಿಶೇಷತೆಗಳ ಪಟ್ಟಿಯಲ್ಲಿ E100 ಮತ್ತು E85 ಇಂಧನಗಳನ್ನು ಅಧಿಕೃತವಾಗಿ ಸೇರಿಸಿದೆ. ಇದರೊಂದಿಗೆ ತಯಾರಕರು ಸಂಪೂರ್ಣ ಎಥೆನಾಲ್ ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸಲು ಕಾನೂನುಬದ್ಧ ಅವಕಾಶ ದೊರೆತಿದೆ.

ಇದನ್ನೂ ಓದಿ: ಬೆಲೆ ಪರಿಷ್ಕರಣೆ, ಕಡ್ಡಾಯ ಇಕೆವೈಸಿ ಸೇರಿದಂತೆ ನವೆಂಬರ್ 1ರಿಂದ ಹೊಸ ಎಲ್​ಪಿಜಿ ನಿಯಮಗಳು

ಸಾಮಾನ್ಯ ಪೆಟ್ರೋಲ್ ಕಾರುಗಳು E100 ಬಳಸಲು ಆಗುವುದಿಲ್ಲ. ಈ ವಿಶೇಷ ಇಂಧನಗಳು ಕೇವಲ ಈ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಮತ್ತು ಪ್ರಮಾಣೀಕರಿಸಲ್ಪಟ್ಟ ‘ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ’ (Flex-fuel vehicles) ಮಾತ್ರ ಅನ್ವಯಿಸುತ್ತವೆ. ಪ್ರಸ್ತುತ ಚಾತಿಯಲ್ಲಿರುವ ಅಥವಾ E20 ಪೆಟ್ರೋಲ್‌ಗಾಗಿ ತಯಾರಿಸಲಾದ ಸಾಮಾನ್ಯ ಪೆಟ್ರೋಲ್ ಕಾರುಗಳಲ್ಲಿ ನೇರವಾಗಿ E100 ಅಥವಾ E85 ಇಂಧನ ಬಳಸಲು ಅವಕಾಶವಿರುವುದಿಲ್ಲ.

ವಾಹನ ತಯಾರಿಕಾ ರಂಗದ ಸಿದ್ಧತೆ

ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಈಗಾಗಲೇ ಫ್ಲೆಕ್ಸ್-ಫ್ಯುಯೆಲ್ ವಾಹನಗಳ ಮಾಡಲ್​ಗಳನ್ನು ಪರಿಚಯಿಸುತ್ತಿವೆ. ಮಾರುತಿ ಸುಜುಕಿ ಈಗಾಗಲೇ ವ್ಯಾಗನ್ ಆರ್ ಫ್ಲೆಕ್ಸ್ ಫ್ಯುಯೆಲ್ ಮಾದರಿ ಕಾರನ್ನು ಬಿಡುಗಡೆ ಮಾಡಿದೆ. ಇದು ಇ100 ಇಂಧನದಿಂದಲೂ ಕೆಲಸ ಮಾಡುತ್ತದೆ. ಟೊಯೊಟಾ ಹೈಕ್ರಾಸ್, ಹ್ಯೂಂಡಾಯ್ ಕ್ರೆಟಾ, ಟಾಟಾ ಪಂಚ್, ಮಾರುತಿ ಫ್ರಾಂಕ್ಸ್ ಇತ್ಯಾದಿ ಮಾಡಲ್​ಗಳಲ್ಲೂ ಫ್ಲೆಕ್ಸ್ ಫುಯೆಲ್ ವೆರಿಯೆಂಟ್​ಗಳನ್ನು ತಯಾರಿಸಲಾಗುತ್ತಿದೆ.

ಇದನ್ನೂ ಓದಿ: 2028, ಅಕ್ಟೋಬರ್ 23ಕ್ಕೆ ಬರಲಿದೆ ಅಪ್ಪಟ ಭಾರತೀಯ ಸ್ಮಾರ್ಟ್​ಫೋನ್; ಸಚಿವ ಎ ವೈಷ್ಣವ್ ಡೆಡ್​ಲೈನ್

ಈ ಹೊಸ ನಿಯಮದಿಂದ ಇಂತಹ ಹಸಿರು ತಂತ್ರಜ್ಞಾನದ ವಾಹನಗಳ ಉತ್ಪಾದನೆಗೆ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ವೇಗ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us