
ಪತಂಜಲಿ ಆಯುರ್ವೇದ ಕಂಪನಿಯು (Patanjali Ayurveda) ಸ್ವಾಸ್ಥ್ಯ ಸಮಾಜ ಮತ್ತು ಸ್ವಾಸ್ಥ್ಯ ದೇಶ ನಿರ್ಮಾಣದತ್ತ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಆಯುರ್ವೇದ ಉತ್ಪನ್ನಗಳ ಮೂಲಕ ಜನರ ಸ್ವಾಸ್ಥ್ಯಕ್ಕೆ ನೆರವಾಗುತ್ತಿದೆ. ಹಾಗೆಯೇ, ಆರ್ಗ್ಯಾನಿಕ್ ಫಾರ್ಮಿಂಗ್ (ಸಾವಯವ ಕೃಷಿ), ಸೌರಶಕ್ತಿ (solar energy) ಮತ್ತು ತ್ಯಾಜ್ಯ ನಿರ್ವಹಣೆ (ವೇಸ್ಟ್ ಮ್ಯಾನೇಜ್ಮೆಂಟ್) ಮೂಲಕ ಪರಿಸರ ಸಂರಕ್ಷಣೆಯತ್ತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಾವಯವ ಗೊಬ್ಬರಗಳನ್ನು ನಿರ್ಮಿಸುವುದು, ಸೌರಶಕ್ತಿಯನ್ನು ಉತ್ತೇಜಿಸುವುದು ಮತ್ತು ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವಲ್ಲಿ ಕಂಪನಿಯು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಪತಂಜಲಿ ಆಯುರ್ವೇದವು ತನ್ನ ಪರಿಸರ ಉಪಕ್ರಮಗಳ ಮೂಲಕ ಪರಿಸರ ಸಂರಕ್ಷಣೆಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದೆ. ಬಾಬಾ ರಾಮದೇವ್ ಅವರ ನೇತೃತ್ವದಲ್ಲಿ, ಕಂಪನಿಯು ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸುವುದಲ್ಲದೆ, ಸುಸ್ಥಿರ ಕೃಷಿ, ನವೀಕರಿಸಬಹುದಾದ ಇಂಧನ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಹಲವಾರು ಹೊಸ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪತಂಜಲಿ ಹೇಳಿಕೊಂಡಿದೆ. ಈ ಉಪಕ್ರಮಗಳು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಮತ್ತು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.
ಸಾವಯವ ಕೃಷಿಯನ್ನು ಉತ್ತೇಜಿಸಲು ಕಂಪನಿಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಪತಂಜಲಿ ಸಾವಯವ ಸಂಶೋಧನಾ ಸಂಸ್ಥೆ (PORI) ಮೂಲಕ, ಕಂಪನಿಯು ಸಾವಯವ ಗೊಬ್ಬರಗಳು ಮತ್ತು ಸಾವಯವ ಕೀಟನಾಶಕಗಳನ್ನು ಅಭಿವೃದ್ಧಿಪಡಿಸಿದೆ. ಇದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ಉತ್ಪನ್ನಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಬೆಳೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. PORI ಎಂಟು ರಾಜ್ಯಗಳಲ್ಲಿ 8,413 ರೈತರಿಗೆ ತರಬೇತಿ ನೀಡಿದೆ ಮತ್ತು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಿದೆ. ಇದು ಮಣ್ಣು, ನೀರು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಿದೆ ಮತ್ತು ಜೀವವೈವಿಧ್ಯತೆಯನ್ನೂ ಉತ್ತೇಜಿಸಿದೆ.
ಇದನ್ನೂ ಓದಿ: ಗ್ರಾಮೀಣ ಆರ್ಥಿಕತೆಗೆ ಬಲ ತುಂಬುತ್ತಿರುವ ಪತಂಜಲಿ ಕಿಸಾನ್ ಸಮೃದ್ಧಿ ಯೋಜನೆ
ಪತಂಜಲಿ ಸಂಸ್ಥೆ ಸೋಲಾರ್ ಎನರ್ಜಿ ಸೆಕ್ಟರ್ನಲ್ಲೂ ಸಕ್ರಿಯವಾಗಿದೆ. ಸೌರಶಕ್ತಿ, ಇನ್ವರ್ಟರ್‌ಗಳು ಮತ್ತು ಬ್ಯಾಟರಿಗಳಂತಹ ಉತ್ಪನ್ನಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ, ಗ್ರಾಮೀಣ ಪ್ರದೇಶಗಳಲ್ಲಿ ಕ್ಲೀನ್ ಎನರ್ಜಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿಕೊಂಡಿದೆ. ಪ್ರತಿ ಹಳ್ಳಿ ಮತ್ತು ಪಟ್ಟಣದಲ್ಲಿ ‘ಪತಂಜಲಿ ಎನರ್ಜಿ ಸೆಂಟರ್’ಗಳನ್ನು ಸ್ಥಾಪಿಸುವುದು ಬಾಬಾ ರಾಮದೇವ್ ಅವರ ದೂರದೃಷ್ಟಿ ಯೋಜನೆಯಾಗಿದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಉಪಕ್ರಮವು ಪರಿಸರಕ್ಕೆ ಪ್ರಯೋಜನವನ್ನು ನೀಡುವುದಲ್ಲದೆ ಗ್ರಾಮೀಣ ಸಮುದಾಯಗಳಿಗೆ ಕೈಗೆಟುಕುವ ವಿದ್ಯುತ್ ಅನ್ನು ಒದಗಿಸುತ್ತದೆ.
ಪತಂಜಲಿ ವಿಶ್ವವಿದ್ಯಾಲಯವು ಒಣ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಮತ್ತು ಹಸುವಿನ ಸಗಣಿಯಿಂದ ಯಾಗ ಸಾಮಗ್ರಿಗಳನ್ನು ತಯಾರಿಸುವ ವಿಶಿಷ್ಟ ತ್ಯಾಜ್ಯ ನಿರ್ವಹಣಾ ಉಪಕ್ರಮವನ್ನು ಪ್ರಾರಂಭಿಸಿದೆ ಎಂದು ಈ ಸಂಸ್ಥೆ ಹೇಳಿದೆ. ಇದು ಪ್ರಾಚೀನ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ವಿಶಿಷ್ಟ ಮಿಶ್ರಣವಾಗಿದ್ದು, ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ವಸ್ತುಗಳನ್ನು ರಚಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮವು ಪರಿಸರವನ್ನು ಸ್ವಚ್ಛವಾಗಿಡುವುದಲ್ಲದೆ ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: ಥೈರಾಯ್ಡ್ ಸಮಸ್ಯೆಗಳಿಗೆ ಸೂಕ್ತವಾಗುವ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ
ಜಲ ಸಂರಕ್ಷಣೆ ಮತ್ತು ಸಸಿ ನೆಡುವಂತಹ ಉಪಕ್ರಮಗಳಿಗೂ ಪತಂಜಲಿ ಕಂಪನಿ ಆದ್ಯತೆ ನೀಡಿದೆ. ಕಂಪನಿಯು ನೀರು ಉಳಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ ಮತ್ತು ದೊಡ್ಡ ಪ್ರಮಾಣದ ಮರ ನೆಡುವ ಅಭಿಯಾನಗಳನ್ನು ಪ್ರಾರಂಭಿಸಿದೆ. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಈ ಕಾರ್ಯ ಬಹಳ ಮುಖ್ಯ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ