ನವದೆಹಲಿ, ಅಕ್ಟೋಬರ್ 20: ಭಾರತದ ಸ್ಟಾರ್ಟಪ್ ಜಗತ್ತಿಗೆ ಈ ವಾರ ಒಳ್ಳೆಯ ಸುಗ್ಗಿ ಕಾಲ ಎನಿಸಿದೆ. 39 ಸ್ಟಾರ್ಟಪ್ಗಳು ಒಟ್ಟಾರೆ 449 ಮಿಲಿಯನ್ ಡಾಲರ್ನಷ್ಟು ಬಂಡವಾಳ ಪಡೆಯಲು ಯಶಸ್ವಿಯಾಗಿವೆ. ಹಿಂದಿನ ವಾರದಲ್ಲಿ ಸ್ಟಾರ್ಟಪ್ಗಳು ಸಂಗ್ರಹಿಸಿದ ಫಂಡಿಂಗ್ ಮೊತ್ತ 135 ಮಿಲಿಯನ್ ಮಾತ್ರ. ಅದಕ್ಕೆ ಹೋಲಿಸಿದರೆ ಈ ವಾರ ಮೂರು ಪಟ್ಟು ಹೆಚ್ಚು ಫಂಡಿಂಗ್ ಗಿಟ್ಟಿಸಿವೆ.
ಇಲ್ಲಿ ಸೀಡ್ ಫಂಡಿಂಗ್ ಅಥವಾ ಆರಂಭಿಕ ಬಂಡವಾಳ ಸಂಗ್ರಹ ಈ ವಾರ 26.5 ಮಿಲಿಯನ್ ಡಾಲರ್ ಇದೆ. ಹಿಂದಿನ ವಾರ ಗಳಿಸಿದ 17.8 ಮಿಲಿಯನ್ ಡಾಲರ್ಗೆ ಹೋಲಿಸಿದರೆ ಸೀಡ್ ಫಂಡಿಂಗ್ನಲ್ಲಿ ಶೇ. 48.8ರಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಹೂಡಿಕೆ ಚುರುಕುಗೊಂಡಿರುವ ದ್ಯೋತಕ ಇದಾಗಿದೆ.
ಇದನ್ನೂ ಓದಿ: ಅಂಬಾನಿ ವರ್ಸಸ್ ಮಸ್ಕ್; ಭಾರತೀಯ ಸೆಟಿಲೈಟ್ ಇಂಟರ್ನೆಟ್ ಯುದ್ಧದಲ್ಲಿ ಗೆಲ್ಲೋದ್ಯಾರು?
ಶಿಕ್ಷಣ ತಂತ್ರಜ್ಞಾನದ ಕಂಪನಿಯಾದ ಎರುಡಿಟಸ್ 150 ಮಿಲಿಯನ್ ಡಾಲರ್ ಫಂಡಿಂಗ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಟಿಪಿಜಿ, ಸಾಫ್ಟ್ಬ್ಯಾಂಕ್, ಲೀಡ್ಸ್ ಇಲ್ಲೂಮಿನೇಟ್, ಆಕ್ಸಲ್, ಸಿಪಿಪಿ ಇನ್ವೆಸ್ಟ್ಮೆಂಟ್ಸ್, ಚಾನ್ ಜುಕರ್ಬರ್ಗ್ ಅವರು ಭಾರತದ ಎರುಡಿಟಸ್ ಸ್ಟಾರ್ಟಪ್ಗೆ ಫಂಡಿಂಗ್ ಒದಗಿಸಿವೆ.
ಪರ್ಫ್ಯೂಮ್, ಸ್ಕಿನ್ಕೇರ್ ಇತ್ಯಾದಿ ಸೌಂದರ್ಯವರ್ಧಕಗಳ ಪ್ಲಾಟ್ಫಾರ್ಮ್ ಆಗಿರುವ ಪರ್ಪಲ್ (Purplle) ಕಂಪನಿ 500 ಕೋಟಿ ರೂ ಫಂಡಿಂಗ್ ಪಡೆದಿದೆ. ಇದರೊಂದಿಗೆ ಅದರ ಒಟ್ಟಾರೆ ಬಂಡವಾಳ ಸಂಗ್ರಹ 1,500 ಕೋಟಿ ರೂ ಆದಂತಾಗಿದೆ. ಅಬುಭಾದಿ ಇನ್ವೆಸ್ಟ್ಮೆಂಟ್ ಅಥಾರಿಟಿ, ಪ್ರೇಮ್ಜಿ ಇನ್ವೆಸ್ಟ್, ಬ್ಲೂಮ್ ವೆಂಚರ್ಸ್ ಕಂಪನಿಗಳು ಪರ್ಪಲ್ಗೆ ಫಂಡಿಂಗ್ ನೀಡಿವೆ.
ಜಿವಾ ಜ್ಯೂವೆಲರಿ, ಸಾಸ್ ಮೊದಲಾದ ಸ್ಟಾರ್ಟಪ್ಗಳು ವಿವಿಧೆಡೆಯಿಂದ ಫಂಡಿಂಗ್ ಪಡೆದಿವೆ.
ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಫಿನ್ಟೆಕ್ ಸ್ಟಾರ್ಟಪ್ಗಳು 778 ಮಿಲಿಯನ್ ಡಾಲರ್ ಮೊತ್ತದ ಫಂಡಿಂಗ್ ಪಡೆದಿವೆ. ಅಮೆರಿಕ ಬಿಟ್ಟರೆ ಭಾರತದ ಫಿನ್ಟೆಕ್ ಕಂಪನಿಗಳೇ ಈ ಅವಧಿಯಲ್ಲಿ ಅತಿಹೆಚ್ಚು ಬಂಡವಾಳ ಕಲೆಹಾಕಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ