G20 FMCBG Meeting: ಗಾಂಧಿನಗರದಲ್ಲಿ 3ನೇ ಜಿ20 ಎಫ್​ಎಂಸಿಬಿಜಿ ಸಭೆ: ಅಭಿವೃದ್ಧಿಪರ ಹವಾಮಾನ ಕ್ರಮಗಳ ಸಾಧ್ಯತೆ ಕುರಿತು ವಿಚಾರಸಂಕಿರಣ

Seminar On Achieving Growth-friendly Climate Action: ಗಾಂಧಿನಗರದಲ್ಲಿ ನಡೆಯಲಿರುವ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ ಮೂರನೇ ಸಭೆಯ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ಪರಿಸರಸ್ನೇಹಿ ಮತ್ತು ಅಭಿವೃದ್ಧಿಸ್ನೇಹಿ ಪ್ರಗತಿಯ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸಲು ವಿಚಾರಸಂಕಿರಣ ನಡೆಯಿತು.

G20 FMCBG Meeting: ಗಾಂಧಿನಗರದಲ್ಲಿ 3ನೇ ಜಿ20 ಎಫ್​ಎಂಸಿಬಿಜಿ ಸಭೆ: ಅಭಿವೃದ್ಧಿಪರ ಹವಾಮಾನ ಕ್ರಮಗಳ ಸಾಧ್ಯತೆ ಕುರಿತು ವಿಚಾರಸಂಕಿರಣ
ಇಂಡೋನೇಷ್ಯಾದ ಹಣಕಾಸು ಸಚಿವೆ ಶ್ರೀ ಮುಲ್ಯಾನಿ ಇಂದ್ರವತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 16, 2023 | 7:22 PM

ಅಹ್ಮದಾಬಾದ್: ಜುಲೈ 17ರಿಂದ ಎರಡು ದಿನಗಳ ಕಾಲ ಗುಜರಾತ್​ನ ಗಾಂಧಿನಗರದಲ್ಲಿ ನಡೆಯಲಿರುವ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ ಮೂರನೇ ಸಭೆಯ (3rd G20 FMCBG Meeting) ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ಪರಿಸರಸ್ನೇಹಿ ಮತ್ತು ಅಭಿವೃದ್ಧಿಸ್ನೇಹಿ ಪ್ರಗತಿಯ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸಲು ವಿಚಾರಸಂಕಿರಣ ನಡೆಯಿತು. ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು ಪ್ರಗತಿಪರವಾದ ಹವಾಮಾನ ಕ್ರಮಗಳು ಹಾಗೂ ವಿತ್ತ ಸಂಪನ್ಮೂಲ ಹೇಗೆ ಕ್ರೋಢೀಕರಿಸುವುದು ಎಂಬ ವಿಚಾರದ ಬಗ್ಗೆ ಗಣ್ಯರು ಈ ಸೆಮಿನಾರ್​ನಲ್ಲಿ ಮಾತನಾಡಿದರು.

ಇಂಡೋನೇಷ್ಯಾದ ಹಣಕಾಸು ಸಚಿವೆ ಶ್ರೀ ಮುಲ್ಯಾನಿ ಇಂದ್ರವತಿ ಅವರು ಆರಂಭಿಕ ಅವಧಿಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ ಅನಂತ ನಾಗೇಶ್ವರನ್, ಬ್ರೆಜಿಲ್​ನ ಅಂತಾರಾಷ್ಟ್ರೀಯ ವ್ಯವಹಾರಗಳ ಕಾರ್ಯದರ್ಶಿ ಟಾಟಿಯಾನ ರೋಸಿಟೋ, ಚೀನಾ ಪೀಪಲ್ಸ್ ಬ್ಯಾಂಕ್​ನ ಡೆಪ್ಯುಟಿ ಗವರ್ನರ್ ಶುವಾನ್ ಚ್ಯಾಂಗ್​​ನೆಂಗ್, ಫಿಸ್ಕಲ್ ಅಫೇರ್ಸ್ ಇಲಾಖೆಯ ನಿರ್ದೇಶಕ ವೈಟರ್ ಗಾಸ್ಪರ್, ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಮೊದಲಾದವರು ಈ ಸೆಮಿನಾರ್​ನಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಪ್ರಸ್ತುತಪಡಿಸಿದರು.

ಇದನ್ನೂ ಓದಿeRupee: ಇರುಪಾಯಿಗೆ ಮೊದಲ ಬಾರಿಗೆ ನೊಂದಾಯಿಸುವುದು ಹೇಗೆ? ಅದರ ಆ್ಯಪ್, ವಹಿವಾಟು ಇತ್ಯಾದಿ ವಿವರ

ಭಾರತ ಇಂಡೋನೇಷ್ಯಾ ಆರ್ಥಿಕ ಮತ್ತು ಹಣಕಾಸು ಸಂವಾದ

ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಸಭೆ ಅಂಗವಾಗಿ ಭಾರತ ಮತ್ತು ಇಂಡೋನೇಷ್ಯಾ ಮಧ್ಯೆ ಆರ್ಥಿಕ ಮತ್ತು ಹಣಕಾಸು ಸಂವಾದವನ್ನು ಆರಂಭಿಸಲಾಯಿತು. ಪರಿಸ್ಪರ ಕಲಿಕೆ ಮತ್ತು ನೀತಿ ಸಮನ್ವಯತೆ ಸಾಧಿಸುವ ಅವಕಾಶ ಒದಗಿಸಲು ಮತ್ತು ಜಾಗತಿಕ ವಿಚಾರಗಳನ್ನು ಅರಿಯಲು ಎರಡೂ ದೇಶಗಳ ಮಧ್ಯೆ ಸಹಕಾರ ಏರ್ಪಡಿಸುವುದು ಈ ಸಂವಾದದ ಉದ್ದೇಶ ಎನ್ನಲಾಗಿದೆ.

ಜಿ20 ದೇಶಗಳ ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್​ಗಳ ಉಪ ಮುಖ್ಯಸ್ಥರ ಸಭೆ ಜುಲೈ 14 ಮತ್ತು 15ರಂದು ನಡೆದಿತ್ತು. ಅದಾದ ಬೆನ್ನಲ್ಲೇ ಜುಲೈ 17 ಮತ್ತು 18ರಂದು ಗಾಂಧಿನಗರದಲ್ಲಿ ಜಿ20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ ಸಭೆ ನಡೆಯಲಿದೆ. ನವದೆಹಲಿಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ದೇಶಾದ್ಯಂತ ನಡೆಯುತ್ತಾ ಬಂದಿರುವ ವಿವಿಧ ಸಭೆಗಳ ಭಾಗವಾಗಿ ಈ ಕಾರ್ಯಕ್ರಮಗಳು ನಡೆಯುತ್ತಿವೆ. ಹಲವು ಅಡೆತಡೆ ಮತ್ತು ಸಮಸ್ಯೆಗಳಿಗೆ ಒಮ್ಮತದ ಪರಿಹಾರ ಕಂಡುಕೊಳ್ಳುವುದು ಈ ಸಭೆಗಳ ಉದ್ದೇಶ.

ಅಮೆರಿಕದ ಹಣಕಾಸು ಸಚಿವೆ ಜನೆಟ್ ಯೆಲೆನ್ ಅಪಾರ ನಿರೀಕ್ಷೆ

ಜಿ20 ಎಫ್​ಎಂಸಿಬಿಜಿ ಸಭೆಯಲ್ಲಿ ಪಾಲ್ಗೊಳ್ಳಲು ಗಾಂಧಿನಗರಕ್ಕೆ ಆಗಮಿಸಿರುವ ಅಮೆರಿಕದ ಹಣಕಾಸು ಸಚಿವೆ (ಟ್ರೆಷರಿ ಸೆಕ್ರೆಟರಿ) ಜನೆಟ್ ಯೆಲೆನ್ ಭಾನುವಾರ (ಜುಲೈ 16) ಮಾಧ್ಯಮಗಳೊಂದಿಗೆ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಬಗ್ಗೆ ಅಭಿಪ್ರಾಯ ನೀಡಿದರು.

ಇದನ್ನೂ ಓದಿTax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಡೀರಿಸ್ಕ್ ಮತ್ತು ಫ್ರೆಂಡ್ ಶೋರಿಂಗ್ ಅಮೆರಿಕಕ್ಕೆ ಪ್ರಮುಖ ಆದ್ಯತೆಗಳಾಗಿವೆ ಎಂದು ಯೆಲೆನ್ ಹೇಳಿದರು. ಫ್ರೆಂಡ್ ಶೋರಿಂಗ್ ಎಂಬುದು ತನ್ನ ಮೌಲ್ಯಕ್ಕೆ ನಿಕಟವಾಗಿರುವ ದೇಶದಿಂದ ಕಚ್ಛಾ ವಸ್ತು ಇತ್ಯಾದಿ ಸರಕುಗಳನ್ನು ಪಡೆಯುವ ಒಂದು ಬದ್ಧತೆ. ಆ್ಯಪಲ್ ಸೇರಿದಂತೆ ಅಮೆರಿಕದ ಹಲವು ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುವ ಕಾರ್ಯ ವಿಸ್ತರಿಸುತ್ತಾ ಹೋಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Sun, 16 July 23

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?