AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Go First: ಮೇ 28ರವರೆಗೂ ಗೋ ಫಸ್ಟ್ ವಿಮಾನಗಳ ಸೇವೆ ರದ್ದು; ಒಂದು ತಿಂಗಳಲ್ಲಿ ಪ್ಲಾನ್ ತಿಳಿಸುವಂತೆ ಡಿಜಿಸಿಎ ಸೂಚನೆ

No Go First Flight Till May 28th: ಗೋ ಫಸ್ಟ್ ಏರ್​ಲೈನ್ ಸಂಸ್ಥೆ ಮೇ 28ರವರೆಗೂ ತನ್ನ ಎಲ್ಲಾ ವಿಮಾನ ಹಾರಾಟ ಸೇವೆಯನ್ನು ನಿಲ್ಲಿಸಿದೆ. ಈ ಮೊದಲು ಮೇ 26ರವರೆಗೆ ಫ್ಲೈಟ್ ಹಾರಾಟ ಇರುವುದಿಲ್ಲ ಎಂದು ಹೇಳಿತ್ತು. ಈಗ ಇನ್ನೂ ಎರಡು ದಿನ ಅದನ್ನು ವಿಸ್ತರಿಸಿದೆ.

Go First: ಮೇ 28ರವರೆಗೂ ಗೋ ಫಸ್ಟ್ ವಿಮಾನಗಳ ಸೇವೆ ರದ್ದು; ಒಂದು ತಿಂಗಳಲ್ಲಿ ಪ್ಲಾನ್ ತಿಳಿಸುವಂತೆ ಡಿಜಿಸಿಎ ಸೂಚನೆ
ಗೋ ಫಸ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2023 | 3:35 PM

ನವದೆಹಲಿ: ದಿವಾಳಿ ಅಂಚಿಗೆ ಹೋಗಿ ಬೀಸೋ ದೊಣ್ಣೆಯಿಂದ ಸದ್ಯ ಪಾರಾಗಿರುವ ಗೋ ಫಸ್ಟ್ ಏರ್​ಲೈನ್ ಸಂಸ್ಥೆ (Go First Airline) ಈಗ ತನ್ನ ಪುನಶ್ಚೇತನ ಯಾವ ರೀತಿ ಆಗಬೇಕು ಎಂಬ ಯೋಜನೆಯನ್ನು ತ್ವರಿತವಾಗಿ ರೂಪಿಸಬೇಕಿದೆ. 30 ದಿನದೊಳಗೆ ಗೋ ಫಸ್ಟ್ ತನ್ನ ಪ್ಲಾನ್ ಸಲ್ಲಿಸಬೇಕು ಎಂದು ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ. ಇದರ ಬೆನ್ನಲ್ಲೇ ಗೋ ಫಸ್ಟ್ ಏರ್​ಲೈನ್ ಸಂಸ್ಥೆ ಮೇ 28ರವರೆಗೂ ತನ್ನ ಎಲ್ಲಾ ವಿಮಾನ ಹಾರಾಟ ಸೇವೆಯನ್ನು ನಿಲ್ಲಿಸಿದೆ. ಈ ಮೊದಲು ಮೇ 26ರವರೆಗೆ ಫ್ಲೈಟ್ ಹಾರಾಟ ಇರುವುದಿಲ್ಲ ಎಂದು ಹೇಳಿತ್ತು. ಈಗ ಇನ್ನೂ ಎರಡು ದಿನ ಅದನ್ನು ವಿಸ್ತರಿಸಿದೆ. ಕಾರ್ಯಾಚರಣೆ ಸಮಸ್ಯೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೇ 28ರವರೆಗಿನ ದಿನಗಳಲ್ಲಿ ಗೋ ಫಸ್ಟ್ ಫ್ಲೈಟ್ ಬುಕ್ ಮಾಡಿದ ಎಲ್ಲಾ ಗ್ರಾಹಕರಿಗೂ ಅವರ ಹಣ ಮರಳಿಸಲಾಗುವುದು ಎಂದು ವಿಮಾನ ಸಂಸ್ಥೆ ತಿಳಿಸಿದೆ. ಅಲ್ಲದೇ, ವಿಮಾನ ಟಿಕೆಟ್ ಬುಕ್ ಮಾಡಿದವರಿಗೆ ಅವರ ಪ್ರಯಾಣ ಯೋಜನೆಗಳಲ್ಲಿ ವ್ಯತ್ಯಯವಾಗುವುದು ತಮಗೆ ಅರಿವಿದೆ. ಸಾಧ್ಯವಾಗಿರುವ ಎಲ್ಲಾ ನೆರವನ್ನೂ ಒದಗಿಸಲು ಬದ್ಧರಾಗಿದ್ದೇವೆ ಎಂದು ಹೇಳಿರುವ ಸಂಸ್ಥೆ, ತಾನು ಆರ್ಥಿಕ ಪುನಶ್ಚೇತನಕ್ಕೆ ಇನ್ಸಾಲ್ವೆನ್ಸಿ ಅರ್ಜಿ ಹಾಕಿದ್ದು, ಸಾಧ್ಯವಾದಷ್ಟು ಬೇಗ ಬುಕಿಂಗ್ ಸ್ವೀಕರಿಸಲು ಸಾಧ್ಯವಾಗಬಹುದು ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿUS Indians: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರು ಎಷ್ಟು? 2 ತಿಂಗಳೊಳಗೆ ಬೇರೆ ಕೆಲಸ ಗಿಟ್ಟಿಸಿಕೊಳ್ಳದಿದ್ದರೆ ಗತಿ ಏನು?

30 ದಿನದಲ್ಲಿ ರಿವೈವಲ್ ಪ್ಲಾನ್ ಕೊಡಿ ಎಂದ ಡಿಜಿಸಿಎ

ಇನ್ಸಾಲ್ವೆನ್ಸಿ ಪ್ರಕ್ರಿಯೆ ಸಂಬಂಧ ಗೋ ಫಸ್ಟ್ ಸಂಸ್ಥೆಗೆ ಸಹಾಯ ಮಾಡಲು ವಿಮಾನಯಾನ ಮಹಾನಿರ್ದೇಶನಾಲಯ ಮುಂದಾಗಿದೆ. ವಿಮಾನಗಳು, ಪೈಲಟ್, ಮೈಂಟೆನೆನ್ಸ್ ಸೇರಿದಂತೆ ವಿಮಾನ ಸಂಸ್ಥೆ ಮತ್ತೆ ಚೇತರಿಸಿಕೊಳ್ಳಲು ಏನೇನು ಮಾಡಬಹುದು ಎಂಬುದರ ಪ್ಲಾನ್ ಅನ್ನು 30 ದಿನದೊಳಗೆ ತನಗೆ ಸಲ್ಲಿಸುವಂತೆ ಡಿಜಿಸಿಎ ಸೂಚಿಸಿದೆ.

ಮೇ 3ರಂದು ಗೋ ಫಸ್ಟ್ ಏರ್​ಲೈನ್ ಸಂಸ್ಥೆ ದಿಢೀರ್ ಆಗಿ ತನ್ನ ಫ್ಲೈಟ್ ಬುಕಿಂಗ್ ನಿಲ್ಲಿಸಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತು. ಅರ್ಧದಷ್ಟು ವಿಮಾನಗಳು ಎಂಜಿನ್ ವೈಫಲ್ಯದಿಂದ ಕೆಟ್ಟು ನಿಂತಿವೆ. ಇದರಿಂದ ತಮಗೆ ಭಾರೀ ನಷ್ಟವಾಗಿದೆ. ತನಗೆ ವಿಮಾನಗಳನ್ನು ಗುತ್ತಿಗೆ ಕೊಟ್ಟಿರುವ ಸಂಸ್ಥೆಗಳು ಸಹಾಯ ಮಾಡುತ್ತಿಲ್ಲ. ಕಂಪನಿ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡಿ ಎಂದು ಗೋ ಫಸ್ಟ್ ತನ್ನ ಇನ್ಸಾಲ್ವೆನ್ಸಿ ಅರ್ಜಿಯಲ್ಲಿ ಮನವಿ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ