AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ ಬೆಳ್ಳಿ ದರ ಮತ್ತೆ ಇಳಿಕೆ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ ಬೆಳ್ಳಿ ದರ ಮತ್ತೆ ಇಳಿಕೆ
ಚಿನ್ನದ ದರ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Nov 22, 2022 | 5:30 AM

Share

Gold Silver Price on 22 November 2022 | ಬೆಂಗಳೂರು: ವಿದೇಶಿ ಮಾರುಕಟ್ಟೆಗಳ ಅನಿಶ್ಚಿತತೆ, ದೇಶೀಯ ಷೇರುಪೇಟೆಗಳ ವಹಿವಾಟು ಕುಸಿತ, ರೂಪಾಯಿ ಮೌಲ್ಯದಲ್ಲಿ ಕುಸಿತದ ಟ್ರೆಂಡ್ ಮುಂದುವರಿದಿದೆ. ಚಿನ್ನವನ್ನು ಪ್ರಮುಖ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ ಮಾರುಕಟ್ಟೆ ಅನಿಶ್ಚಿತತೆಯು ದೇಶೀಯ ಬುಲಿಯನ್ ಮಾರುಕಟ್ಟೆ (Bullion Market) ಮೇಲೂ ಪ್ರಭಾವ ಬೀರಿದೆ. ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಮತ್ತೆ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಉತ್ತಮ ಅವಕಾಶ ಒದಗಿಸಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿಯೂ ಉಭಯ ಲೋಹಗಳ ದರ ಇಳಿಕೆಯಾಗಿತ್ತು. ಇಂದೂ ಸಹ ಚಿನ್ನ, ಬೆಳ್ಳಿ ದರ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ 100 ರೂ. ಇಳಿಕೆಯಾಗಿ 48,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ರೂ. ಇಳಿಕೆಯಾಗಿ 52,920 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 60,600 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ; ಪ್ರಮುಖ ನಗರಗಳಲ್ಲಿನ ಬೆಲೆ ವಿವರ ಇಲ್ಲಿದೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,200 ರೂ. ಮುಂಬೈ- 48,500 ರೂ, ದೆಹಲಿ- 48,700 ರೂ, ಕೊಲ್ಕತ್ತಾ- 48,500 ರೂ, ಬೆಂಗಳೂರು- 48,550 ರೂ, ಹೈದರಾಬಾದ್- 48,500 ರೂ, ಕೇರಳ- 48,500 ರೂ, ಪುಣೆ- 48,500 ರೂ, ಮಂಗಳೂರು- 48,550 ರೂ, ಮೈಸೂರು- 48,550 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:

ಚೆನ್ನೈ- 53,670 ರೂ, ಮುಂಬೈ- 52,920 ರೂ, ದೆಹಲಿ- 53,070 ರೂ, ಕೊಲ್ಕತ್ತಾ- 52,920 ರೂ, ಬೆಂಗಳೂರು- 52,970 ರೂ, ಹೈದರಾಬಾದ್- 52,920 ರೂ, ಕೇರಳ- 52,920 ರೂ, ಪುಣೆ- 52,920 ರೂ, ಮಂಗಳೂರು- 52,970 ರೂ, ಮೈಸೂರು- 52,970 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 66,500 ರೂ, ಮೈಸೂರು- 66,500 ರೂ., ಮಂಗಳೂರು- 66,500 ರೂ., ಮುಂಬೈ- 60,600 ರೂ, ಚೆನ್ನೈ- 66,500 ರೂ, ದೆಹಲಿ- 60,600 ರೂ, ಹೈದರಾಬಾದ್- 66,500 ರೂ, ಕೊಲ್ಕತ್ತಾ- 60,600 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ