Gold Rate: ಚಿನ್ನದ ಬೆಲೆ 100 ರೂ ಇಳಿಕೆ; ಬೆಳ್ಳಿ ದರವೂ ಕಡಿಮೆ; ದುಬೈ, ಅಮೆರಿಕದಲ್ಲೆಷ್ಟಿದೆ ರೇಟು?

Gold And Silver Prices Come Down: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 10 ರೂ ಕಡಿಮೆಯಾಗಿದೆ.

Gold Rate: ಚಿನ್ನದ ಬೆಲೆ 100 ರೂ ಇಳಿಕೆ; ಬೆಳ್ಳಿ ದರವೂ ಕಡಿಮೆ; ದುಬೈ, ಅಮೆರಿಕದಲ್ಲೆಷ್ಟಿದೆ ರೇಟು?
ಚಿನ್ನದ ದರ (ಸಾಂದರ್ಭಿಕ ಚಿತ್ರ)

Updated on: Feb 21, 2023 | 5:00 AM

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and Silver Prices) ಇಳಿಕೆ ಹಾದಿ ಮುಂದುವರಿದಿದೆ. ವಿಶ್ಲೇಷಕರ ಪ್ರಕಾರ, ಅಮೆರಿಕದ ಆರ್ಥಿಕತೆ ತುಸು ಉತ್ತಮಗೊಳ್ಳುತ್ತಿರುವುದರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲಾಗುತ್ತಿದೆ. ಚಿನ್ನದ ದರಗಳು ಇಳಿಕೆ ಕಾಣುತ್ತಿವೆ. ಭಾರತದಲ್ಲಿ ಇಂದು ಮಂಗಳವಾರ 22 ಕ್ಯಾರಟ್​ನ ಚಿನ್ನದ ಬೆಲೆ ಪ್ರತೀ ಗ್ರಾಂಗೆ 10 ರೂನಷ್ಟು ಇಳಿಕೆಯಾಗಿದೆ. 10 ಗ್ರಾಂಗೆ 100 ರೂ ಕಡಿಮೆ ಆಗಿದೆ. ನಿನ್ನೆ 10 ಗ್ರಾಂಗೆ 52,200ರೂ ಇದ್ದ ಚಿನ್ನದ ಬೆಲೆ ಇಂದು 52,100 ರೂ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 10 ರೂನಷ್ಟು ಕಡಿಮೆ ಆಗಿದೆ.

24 ಕ್ಯಾರಟ್ ಚಿನ್ನದ ವಿಚಾರಕ್ಕೆ ಬಂದರೆ 10 ಗ್ರಾಂಗೆ 120 ರೂನಷ್ಟು ಬೆಲೆ ಇಳಿಕೆಯಾಗಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಈಗ 56,830 ರೂ ಇದೆ. 24 ಕ್ಯಾರಟ್ ಚಿನ್ನ ಎಂದರೆ ಅಪರಂಜಿ ಚಿನ್ನ ಅಥವಾ ಶುದ್ಧ ಚಿನ್ನ. 22 ಕ್ಯಾರಟ್ ಚಿನ್ನ ಆಭರಣಕ್ಕೆ ಬಳಸುವ ಚಿನ್ನವಾಗಿದೆ. ಇದು ತುಸು ಬೇರೆ ವಸ್ತುಗಳ ಬೆರಕೆಯಾಗಿರುತ್ತದೆ.

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಇಂದು 10 ಗ್ರಾಂಗೆ 52,159 ರೂ ಇದ್ದರೆ 22 ಕ್ಯಾರಟ್ ಚಿನ್ನದ ಬೆಲೆ 56,890 ರೂ ಇದೆ. ದುಬೈನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 2,070 ರೂ ಇದೆ.

ಇನ್ನು ಬೆಳ್ಳಿ ಬೆಲೆ 100 ಗ್ರಾಮ್​ಗೆ 6,850 ರೂ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ದರ 7,170 ರೂ ಇದೆ.

2022 ಫೆಬ್ರುವರಿ 21ರ ಬೆಲೆ:

22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

ಚೆನ್ನೈ: 52,800 ರೂ

ಮುಂಬೈ: 52,100 ರೂ

ದೆಹಲಿ: 52,250 ರೂ

ಕೋಲ್ಕತಾ: 52,100

ಬೆಂಗಳೂರು: 52,150

ಹೈದರಾಬಾದ್: 52,100

ಕೇರಳ: 52,100 ರೂ

ಪುಣೆ: 52,100 ರೂ

ಅಹ್ಮದಾಬಾದ್: 52,150 ರೂ

ಜೈಪುರ್: 52,250 ರೂ

ಲಕ್ನೋ: 52,250 ರೂ

 

ಇದನ್ನೂ ಓದಿ: Tax Saving: ಇವಿ ವಾಹನದಿಂದ 1.5 ಲಕ್ಷ ರೂ ತೆರಿಗೆ ಉಳಿಸಲು ಸಾಧ್ಯ; ಹೇಗೆ ತಿಳಿಯಿರಿ

24 ಕ್ಯಾರಟ್ ಚಿನ್ನದ ಬೆಲೆ:

ಚೆನ್ನೈ: 57,600 ರೂ

ಮುಂಬೈ: 56,830 ರೂ

ದೆಹಲಿ: 57,000 ರೂ

ಕೋಲ್ಕತಾ: 56,830 ರೂ

ಬೆಂಗಳೂರು: 56,890 ರೂ

ಹೈದರಾಬಾದ್: 56,830 ರೂ

ಕೇರಳ: 56,830 ರೂ

ಪುಣೆ: 56,830 ರೂ

ಅಹ್ಮದಾಬಾದ್: 56,890 ರೂ

ಜೈಪುರ್: 57,000 ರೂ

ಲಕ್ನೋ: 57,000 ರೂ

 

ಬೇರೆ ದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:

ದುಬೈ: 2070 ಅರಬ್ ದಿನಾರ್ (ಸುಮಾರು 46,612 ರೂಪಾಯಿ)

ಸಿಂಗಾಪುರ: 766 ಸಿಂಗಾಪುರ ಡಾಲರ್ (ಸುಮಾರು 47,435 ರೂ)

ಅಮೆರಿಕ: 566 ಡಾಲರ್ (46,817 ರೂ)

ಮಲೇಷ್ಯಾ: 2,600 ರಿಂಗಿಟ್ (48,538 ರೂ)

ಕುವೇತ್: 176 ಕುವೇತ್ ದಿನಾರ್ (47,514 ರೂ)

 

ಬೆಳ್ಳಿ ಬೆಲೆ 100 ಗ್ರಾಂಗೆ:

ಚೆನ್ನೈ: 7,170 ರೂ

ಮುಂಬೈ: 6,850 ರೂ

ದೆಹಲಿ: 6,830 ರೂ

ಕೋಲ್ಕತಾ: 6,850 ರೂ

ಬೆಂಗಳೂರು: 7,170 ರೂ

ಹೈದರಾಬಾದ್: 7,170 ರೂ

ಕೇರಳ: 7,170 ರೂ

ಪುಣೆ: 6,850 ರೂ

ಅಹ್ಮದಾಬಾದ್: 6,850 ರೂ

ಜೈಪುರ್: 6,850 ರೂ

ಲಕ್ನೋ: 6,850 ರೂ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us