AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax Saving: ಇವಿ ವಾಹನದಿಂದ 1.5 ಲಕ್ಷ ರೂ ತೆರಿಗೆ ಉಳಿಸಲು ಸಾಧ್ಯ; ಹೇಗೆ ತಿಳಿಯಿರಿ

Electric Vehicle Helps In Saving Tax: ಇನ್ಷೂರೆನ್ಸ್, ಪಿಪಿಎಫ್, ಎನ್​ಪಿಎಸ್ ಮೊದಲಾದ ಯೋಜನೆಗಳ ಮೂಲಕ ಲಕ್ಷಾಂತರ ರೂ ಮೊತ್ತದ ತೆರಿಗೆ ರಿಯಾಯಿತಿ ಪಡೆಯಬಹುದು. ಇದರಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಮೂಲಕವೂ ಒಂದಷ್ಟು ತೆರಿಗೆ ಉಳಿಸಬಹುದು. ಈ ಬಗ್ಗೆ ಒಂದು ಮಾಹಿತಿ.

Tax Saving: ಇವಿ ವಾಹನದಿಂದ 1.5 ಲಕ್ಷ ರೂ ತೆರಿಗೆ ಉಳಿಸಲು ಸಾಧ್ಯ; ಹೇಗೆ ತಿಳಿಯಿರಿ
ಎಲೆಕ್ಟ್ರಿಕ್ ವಾಹನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2023 | 4:55 PM

Share

ನವದೆಹಲಿ: ಸರ್ಕಾರ ವಿಧಿಸಿರುವ ವಿವಿಧ ಆದಾಯ ತೆರಿಗೆ ಸ್ಲ್ಯಾಬ್, ವಿಧಾನಗಳು (IT Tax Regimes) ಬಹಳ ಮಂದಿಗೆ ಗೊಂದಲಕ್ಕೆ ಕೆಡವಿರುವುದು ಹೌದು. ಹೊಸ ತೆರಿಗೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕೋ, ಹಳೆಯ ತೆರಿಗೆ ವ್ಯವಸ್ಥೆಯಲ್ಲೇ ಮುಂದುವರಿಯಬೇಕೋ ಎಂಬುದು ಈಗಲೂ ಕೆಲವರಿಗೆ ಯಕ್ಷಪ್ರಶ್ನೆಯಾಗಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಟ್ಯಾಕ್ಸ್ ಸ್ಲ್ಯಾಬ್​ಗಳು ಹೆಚ್ಚಾಗಿವೆ. ಹೆಚ್ಚು ಆದಾಯ ಗುಂಪಿನ ಜನರಿಗೆ ತೆರಿಗೆ ಹೊರೆ ತಕ್ಕಮಟ್ಟಿಗೆ ಕಡಿಮೆ ಆಗಿದೆ. ಇನ್ನು, ಹಳೆಯ ತೆರಿಗೆ ವ್ಯವಸ್ಥೆ ಮುಂದುವರಿಸಬೇಕೆನ್ನುವವರು ವಿವಿಧ ರೀತಿಯ ತೆರಿಗೆ ರಿಯಾಯಿತಿ, ತೆರಿಗೆ ವಿನಾಯಿತಿಗಳ ಬಗ್ಗೆ ತಿಳಿದುಕೊಂಡಿರುವುದು ಉತ್ತಮ.

ಇನ್ಷೂರೆನ್ಸ್, ಪಿಪಿಎಫ್, ಎನ್​ಪಿಎಸ್ ಮೊದಲಾದ ಯೋಜನೆಗಳ ಮೂಲಕ ಲಕ್ಷಾಂತರ ರೂ ಮೊತ್ತದ ತೆರಿಗೆ ರಿಯಾಯಿತಿ ಪಡೆಯಬಹುದು. ಇದರಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ಮೂಲಕವೂ ಒಂದಷ್ಟು ತೆರಿಗೆ ಉಳಿಸಬಹುದು. ಸೆಕ್ಷನ್ 80ಇಇಬಿ ಅಡಿಯಲ್ಲಿ ಇವಿ ವಾಹನ ಸಾಲದ ಮೇಲಿನ ಬಡ್ಡಿ ಪಾವತಿಯಲ್ಲಿ ಸುಮಾರು ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಲು ಸಾಧ್ಯ ಇದೆ. ಸದ್ಯ ಇರುವ ಆಫರ್ ಪ್ರಕಾರ ನೀವು ಇವಿ ಸಾಲವನ್ನು 2019 ಏಪ್ರಿಲ್ 1ರಿಂದ 2023 ಮಾರ್ಚ್ 31ರ ಅವಧಿಯಲ್ಲಿ ಪಡೆದಿರಬೇಕು. ಅಂದರೆ ತೆರಿಗೆ ಉಳಿಸಲು ಎಲೆಕ್ಟ್ರಿಕ್ ವಾಹನ ಖರೀದಿಗೆ ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ. 2019-20ರ ಬಜೆಟ್​ನಲ್ಲಿ ಸರ್ಕಾರ ಈ ಟ್ಯಾಕ್ಸ್ ಡಿಡಕ್ಷನ್ ಸ್ಕೀಮ್ ಅನ್ನು ಪ್ರಕಟಿಸಿತ್ತು.

ಈ ಬಜೆಟ್​ನಲ್ಲಿ ಇವಿಗೆ ಭಾರೀ ಪುಷ್ಟಿ

ಈ ಬಾರಿಯ ಬಜೆಟ್​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಹಲವು ಕ್ರಮಗಳನ್ನು ಘೋಷಿಸಿದ್ದಾರೆ. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಅತ್ಯಗತ್ಯವಾದ ಲಿಥಿಯಮ್ ಬ್ಯಾಟರಿಗಳ ಮೇಲಿನ ಕಸ್ಟಂ ಡ್ಯೂಟಿಯನ್ನು ಶೇ. 21ರಿಂದ ಶೇ. 13ಕ್ಕೆ ಇಳಿಸಿದ್ದಾರೆ. ಲಿಥಿಯಮ್ ಮತ್ತು ಅಯಾನ್ ಸೆಲ್​ಗಳಿಗೆ ಬೇಕಾದ ಇತರ ಪೂರಕ ಪರಿಕರಗಳ ಆಮದಿಗೆ ಕಸ್ಟಂ ಡ್ಯೂಟಿಯೇ ಇರುವುದಿಲ್ಲ. ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಇನ್ನಷ್ಟು ಕಡಿಮೆ ಬೆಲೆಗೆ ತಯಾರಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Inflation: ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರದಿಂದ ಹಲವು ಕ್ರಮ: ನಿರ್ಮಲಾ ಸೀತಾರಾಮನ್

ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ಈ ಕ್ಷೇತ್ರದ ಉದ್ಯಮಿ ಸೋಹಿಂದರ್ ಗಿಲ್, ಕಳೆದ ಎರಡು ವರ್ಷದಿಂದ ಭಾರತದಲ್ಲಿ ತಯಾರಾದ ಇವಿ ಪರಿಕರಗಳ ಗುಣಮಟ್ಟ ಕಡಿಮೆ ಇತ್ತು. ಈಗ ಸ್ಥಳೀಯವಾಗಿ ಸಪ್ಲೈ ಚೈನ್ ಒಂದು ಉತ್ತಮ ರೂಪ ಪಡೆಯುತ್ತಿದೆ. ಸರ್ಕಾರದ ಕೆಲ ಕ್ರಮಗಳು ಸ್ಥಳೀಯ ಇವಿ ಕಾಂಪೊನೆಂಟ್ ಸರಬರಾಜುದಾರರಿಗೆ ಉತ್ತೇಜನ ಕೊಡುವಂತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಬಜೆಟ್ ಬಗ್ಗೆ ಆಟೊಮೊಬೈಲ್ ಉದ್ಯಮ ಖುಷಿಯಿಂದಿದೆ. ಈ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಶೇ. 33ರಷ್ಟು ಅನುದಾನ ಹೆಚ್ಚಿಸಿದೆ. 1.37 ಲಕ್ಷ ಕೋಟಿ ರೂ ಅನುದಾನದಿಂದ ಈ ಉದ್ಯಮ ಬೆಳೆದು ಆರ್ಥಿಕತೆಗೆ ಬಲಕೊಡುತ್ತದೆ. ಇನ್​ಫ್ರಾಸ್ಟ್ರಕ್ಚರ್ ಮೇಲೆ 10 ಲಕ್ಷ ಕೋಟಿ ರೂ ತೊಡಗಿಸಿರುವುದರಿಂದ ದೇಶದಲ್ಲಿ ಕಮರ್ಷಿಯಲ್ ವಾಹನಗಳ ಮಾರಾಟಕ್ಕೆ ಪುಷ್ಟಿ ಸಿಗಬಹುದು ಎಂದು ವಾಹನ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು