Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಖರೀದಿಸಲು ಸುಸಮಯ

| Updated By: shruti hegde

Updated on: Sep 03, 2021 | 8:03 AM

ಅಷ್ಟೊಂದು ದುಬಾರಿಯ ವಸ್ತು ಕೊಳ್ಳಬೇಕಿದ್ದಾಗ ಗುಣಮಟ್ಟದ ಜತೆಗೆ ಹಣವನ್ನೂ ಯೋಚಿಸುವುದು ಮಾಮೂಲಿ. ಹಾಗಾಗಿಯೇ ಪ್ರತಿನಿತ್ಯ ಚಿನ್ನಾಭರಣದ ಬೆಲೆ ಎಷ್ಟಿದೆ? ಎಂಬ ಕುತೂಹಲ ಕೆರಳುವುದು.

Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಖರೀದಿಸಲು ಸುಸಮಯ
ಸಾಂದರ್ಭಿಕ ಚಿತ್ರ
Follow us on

Gold Silver Price Today | ಬೆಂಗಳೂರು: ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಏತನ್ಮಧ್ಯೆ, ಆಭರಣಗಳ ದರ ಇಳಿಕೆ ಆಗಿರಬೇಕು ಎಂಬ ಅಸೆ ಇರುವುದೂ ತಪ್ಪಲ್ಲ. ಅಷ್ಟೊಂದು ದುಬಾರಿಯ ವಸ್ತು ಕೊಳ್ಳಬೇಕಿದ್ದಾಗ ಗುಣಮಟ್ಟದ ಜತೆಗೆ ಹಣವನ್ನೂ ಯೋಚಿಸುವುದು ಮಾಮೂಲಿ. ಹಾಗಾಗಿಯೇ ಪ್ರತಿನಿತ್ಯ ಚಿನ್ನಾಭರಣದ (Gold Price) ಬೆಲೆ ಎಷ್ಟಿದೆ? ಎಂಬ ಕುತೂಹಲ ಕೆರಳುವುದು. ಇಂದು ( ಸೆಪ್ಟೆಂಬರ್ 3, ಶುಕ್ರವಾರ) ಚಿನ್ನಾಭರಣಗಳ ಬೆಲೆ ಇಳಿಕೆ ಆಗಿದೆ. ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಬಹುದು.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,200 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,42,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,000 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೆ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,230 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,82,300 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಆಗಿದ್ದು ಕೆಜಿ ಬೆಳ್ಳಿ ಬೆಲೆ 500 ರೂಪಾಯಿ ಏರಿಕೆ ಬಳಿಕ 63,500 ರೂಪಾಯಿ ನಿಗದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಚಿನ್ನಾಭರಣದ ಬೆಲೆ ಇಳಿಕೆ ಕಾಣುತ್ತಿದೆ. ಮದುವೆ ಸಮಾರಂಭಗಳಿಗೆ, ವಿಶೇಷ ಪೂಜೆಯ ನಿಮಿತ್ತ ಆಭೃನ ಕೊಳ್ಳುವ ಆಸೆ ಇದ್ದವರು ಈ ಕುರಿತಂತೆ ಯೋಚಿಸಬಹುದು. ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ, ಬೆಳ್ಳಿ ದರ ಹಾವು ಏಣಿ ಆಟ ಆಡುತ್ತಿರುವುದು ಸರ್ವೇಸಾಮಾನ್ಯ. ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ದರ ಇಳಿಕೆ ಕಾಣುತ್ತಿರುವುದು ಬಂಗಾರದ ಪ್ರಿಯರಿಗೆ ಖುಷಿ ನೀಡುವ ವಿಚಾರ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,45,100 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 500 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,560 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,85,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಆಗಿದ್ದು, ಕೆಜಿ ಬೆಳ್ಳಿಗೆ 68,400 ರೂಪಾಯಿ ಇಳಿಕೆಯಾಗಿದೆ. ನಿನ್ನೆಯ ದರಕ್ಕಿಂತ ಸುಮಾರು 300 ರೂಪಾಯಿ ಇಳಿಕೆ ಕಂಡಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,350 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,500 ರೂಪಾಯಿ ನಿಗದಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,580 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,800 ರೂಪಾಯಿ ನಿಗದಿ ಆಗಿದೆ ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಆಗಿದ್ದು, 500 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿಗೆ 63,500 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ:

Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Gold Rate Today: ಸತತ 2 ದಿನಗಳಿಂದ ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ ಗೊತ್ತಾ?

(Gold Price decrease today 2021 september 3 check silver price in bangalore delhi mumbai and major city)

Published On - 7:48 am, Fri, 3 September 21