Gold Silver Rate Today | ಬೆಂಗಳೂರು: ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಇಂದು ( ಆಗಸ್ಟ್ 20, ಶುಕ್ರವಾರ) ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ಮುತ್ತೈದೆಯರಿಗೆ ಇದು ಶೇಷ್ಠ ದಿನ. ಮಹಿಳೆಯರೆಲ್ಲಾ ಸುಂದರವಾಗಿ ಅಲಂಕಾರಗೊಂಡು ಲಕ್ಷ್ಮಿ ದೇವತೆಯ ಮೊರೆ ಹೋಗುತ್ತಾರೆ. ಈ ದಿನದ ವಿಶೇಷವಾಗಿ ಕೈಲಾದಷ್ಟು ದಾನ ಧರ್ಮ ನೀಡುವ ಸಂಪ್ರದಾಯವೂ ಆಚರಣೆಯಲ್ಲಿದೆ. ಹೀಗಿರುವಾಗ ಚಿನ್ನಾಭರಣವನ್ನು (Gold Price) ದಾನ ಕೊಡಬೇಕು ಅಂದುಕೊಂಡಿದ್ದರೆ ಅಥವಾ ಪೂಜೆ ವಿಶೇಷವಾಗಿ ಚಿನ್ನ ಖರೀದಿಸಬೇಕು ಅಂದುಕೊಂಡಿದ್ದರೆ ನಿಮಗೆ ಸಂತಸದ ಸುದ್ದಿಯೊಂದಿದೆ. ಇಂದು ಎಲ್ಲೆಡೆ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ (Silver Price) ಇಳಿಕೆ ಕಂಡಿದೆ. ನಿಮ್ಮೂರಿನಲ್ಲಿ ಎಷ್ಟಿದೆ ಬೆಲೆ ಎಂಬುದನ್ನು ತಿಳಿಯಿರಿ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,100 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,41,000 ರೂಪಾಯಿಗೆ ಇಳಿದಿದೆ. ಸುಮಾರು 2,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,100 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನದ ದರ 4,81,000 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,300 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 62,500 ರೂಪಾಯಿ ನಿಗದಿಯಾಗಿದೆ. ಸುಮಾರು 1,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ಕಳೆದ ಐದಾರು ದಿನಗಳಿಂದ ಚಿನ್ನದ ಬೆಲೆ ಏರುತ್ತಲೇ ಇತ್ತು. ಇದು ಗ್ರಾಹಕರಿಗೆ ಕೊಂಚ ಬೇಸರ ತಂದಿತ್ತು. ಆದರೆ ಶುಕ್ರವಾರಂದು ಚಿನ್ನದ ದರ ಇಳಿಕೆ ಕಂಡಿರುವುದು ಚಿನ್ನಾಭರಣ ಪ್ರಿಯರಿಗೆ ಖುಷಿ ನೀಡುವ ವಿಚಾರ. ಅದರಲ್ಲಿಯೂ ವರಮಹಾಲಕ್ಷ್ಮೀ ದಿನದಂದು ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,490 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,44,900 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,540 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,85,400 ರೂಪಾಯಿಗೆ ಇಳಿದಿದೆ. ಸುಮಾರು 1,600 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು, 800 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿಗೆ 67,400 ರೂಪಾಯಿ ನಿಗದಿಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,250 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,62,500 ರೂಪಾಯಿಗೆ ಇಳಿದಿದೆ. ಸುಮಾರು 2,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,450 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,04,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದಲ್ಲಿ 1,000 ರೂಪಾಯಿ ಬಳಿಕ ಕೆಜಿ ಬೆಳ್ಳಿಗೆ 62,500 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಚೆನ್ನೈ, ಜೈಪುರ, ಕೇರಳ, ಮೈಸೂರು ಹೀಗೆ ಪ್ರಮುಖ ಎಲ್ಲಾ ನಗರಗಳಲ್ಲಿಯೂ ಇಂದು ಚಿನ್ನ ಮತ್ತು ಬೆಳ್ಲಿ ಬೆಲೆ ಇಳಿಕೆ ಕಂಡಿದೆ. ಅದೆಷ್ಟೋ ವರ್ಷಗಳಿಂದ ಚಿನ್ನಾಭರಣ ಖರೀದಿಸಬೇಕು ಅಂದುಕೊಂಡು ಹಣ ಕೂಡಿಡುತ್ತಾ ಬಂದಿದ್ದರೆ ಇಂದು ಶುಭ ಶುಕ್ರವಾರ ಜತೆಗೆ ವರಮಹಾಲಕ್ಷ್ಮೀ ದಿನದ ಶುಭ ದಿನದಂದು ಆಭರಣ ಖರೀದಿಸುವ ಕುರಿತಾಗಿ ಯೋಚಿಸಬಹುದು.
ಇದನ್ನೂ ಓದಿ:
Gold Rate Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿನ ಆಭರಣ ದರ ವಿವರ ಮಾಹಿತಿ ಇಲ್ಲಿದೆ
Published On - 8:40 am, Fri, 20 August 21