Gold Silver Price in Bangalore | ಬೆಂಗಳೂರು: ಹಿಂದಿನ ದಿನ ಭಾರೀ ಕುಸಿತ ಕಂಡಿದ್ದ ಬೆಳ್ಳಿ ಹಾಗೂ ಚಿನ್ನದ ದರ ಇಂದೂ ಅದೇ ಹಾದಿಯಲ್ಲಿ ಮುಂದುವರಿದಿವೆ. ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಎರಡೂ ಲೋಹಗಳ ದರ ಸತತ ಎರಡನೇ ದಿನ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿಯ ಬೆಲೆ 1,000 ರೂ. ಇಳಿಕೆಯಾದರೆ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 290 ರೂ. ಇಳಿಕೆಯಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಬೆಳ್ಳಿ ಬೆಲೆ 1,700 ರೂ. ಕುಸಿದಿದ್ದರೆ ಚಿನ್ನದ ದರ 310 ರೂ. ಇಳಿಕೆಯಾಗಿತ್ತು. ಆದಾಗ್ಯೂ, ದೇಶೀಯ ಮಾರುಕಟ್ಟೆಗೂ ವಿವಿಧ ರಾಜ್ಯಗಳ ನಗರಗಳ ಚಿನ್ನ, ಬೆಳ್ಳಿ ದರಕ್ಕೂ ತುಸು ವ್ಯತ್ಯಾಸ ಇರುತ್ತದೆ. ‘ಪಿಟಿಐ’ ಸುದ್ದಿಸಂಸ್ಥೆ ವರದಿಯ ಪ್ರಕಾರ, ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 107 ರೂ. ಹೆಚ್ಚಾಗಿ 54,222 ರೂ. ಆಗಿದೆ. ಬೆಳ್ಳಿಯ ದರ ಕೆಜಿಗೆ 120 ರೂ. ಇಳಿಕೆಯಾಗಿ 68,001 ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 290 ರೂ. ಇಳಿಕೆಯಾಗಿ 49,700 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 310 ರೂ. ಕುಸಿದು 54,220 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 1,000 ರೂ. ಕುಸಿತವಾಗಿ 69,500 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಬೆಳ್ಳಿ ಬೆಲೆ ಭಾರೀ ಕುಸಿತ, ಚಿನ್ನದ ದರವೂ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ?
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ