Home Loan: ಒಂದಕ್ಕಿಂತ ಹೆಚ್ಚಿನ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ಇದೆಯೇ? ಗೃಹ ಸಾಲದ ಪ್ರಯೋಜನಗಳೇನು? ಇಲ್ಲಿದೆ ವಿವರ

ಗೃಹ ಸಾಲ ಪಡೆಯುವಾಗ ವಿವಿಧ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿ ದರ, ಷರತ್ತುಗಳು ಮತ್ತು ನಿಬಂಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಅಗತ್ಯ. ವಿವಿಧ ಗೃಹ ಸಾಲ ಆಫರ್​ಗಳು, ಅವುಗಳಲ್ಲಿ ದೊರೆಯುವ ತೆರಿಗೆ ಪ್ರಯೋಜನಗಳನ್ನು ಹೋಲಿಸಿ ನೋಡಿಯೇ ಸಾಲ ಪಡೆಯಲು ಮುಂದಾಗುವುದು ಒಳ್ಳೆಯದು ಎಂದಿದ್ದಾರೆ ಹಣಕಾಸು ತಜ್ಞರು.

Home Loan: ಒಂದಕ್ಕಿಂತ ಹೆಚ್ಚಿನ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ಇದೆಯೇ? ಗೃಹ ಸಾಲದ ಪ್ರಯೋಜನಗಳೇನು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Dec 17, 2022 | 10:31 AM

ಮನೆ ನಿರ್ಮಾಣಕ್ಕೆ ಹೆಚ್ಚು ಖರ್ಚಾಗುತ್ತದೆ, ದೊಡ್ಡ ಮೊತ್ತದ ಹಣ ಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಗೃಹ ಸಾಲ (Home Loan) ಪಡೆಯುವುದಿಲ್ಲ. ಬದಲಾಗಿ, ಸಾಲದ ಬಡ್ಡಿ ಹಾಗೂ ಅಸಲಿನ ಮರುಪಾವತಿ ಮೇಲೆ ದೊರೆಯುವ ತೆರಿಗೆ ಪ್ರಯೋಜನಗಳು (Tax Benifits) ಹಾಗೂ ಇತರ ಪ್ರಯೋಜನಗಳನ್ನೂ ಗಮನದಲ್ಲಿಟ್ಟುಕೊಂಡು ಸಾಲ ಪಡೆಯುತ್ತಾರೆ. ಗೃಹ ಸಾಲ ಪಡೆಯುವಾಗ ವಿವಿಧ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿ ದರ, ಷರತ್ತುಗಳು ಮತ್ತು ನಿಬಂಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಅಗತ್ಯ. ವಿವಿಧ ಗೃಹ ಸಾಲ ಆಫರ್​ಗಳು, ಅವುಗಳಲ್ಲಿ ದೊರೆಯುವ ತೆರಿಗೆ ಪ್ರಯೋಜನಗಳನ್ನು ಹೋಲಿಸಿ ನೋಡಿಯೇ ಸಾಲ ಪಡೆಯಲು ಮುಂದಾಗುವುದು ಒಳ್ಳೆಯದು ಎಂದಿದ್ದಾರೆ ಹಣಕಾಸು ತಜ್ಞರು.

ಗೃಹ ಸಾಲದ ಪ್ರಯೋಜನಗಳು

ಗೃಹ ಸಾಲ ಪಡೆಯುವುದರ ಮುಖ್ಯ ಉಪಯೋಗವೆಂದರೆ ತೆರಿಗೆ ಪ್ರಯೋಜನ. ಸ್ವಂತಕ್ಕಾಗಿ ಮನೆ ಖರೀದಿಸುವುದಕ್ಕೆ ಪಡೆಯುವ ಸಾಲದ ಮೇಲೆ ಆದಾಯ ತರಿಗೆ ಕಾಯ್ದೆ ಸೆಕ್ಷನ್ 24ರ ಅಡಿ ಹಣಕಾಸು ವರ್ಷವೊಂದರಲ್ಲಿ 2 ಲಕ್ಷ ರೂ.ವರೆಗೆ ತೆರಿಗೆ ಪ್ರಯೋಜನ ಪಡೆಯಬಹುದು. ಇದಲ್ಲದೆ, 80ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ಅಸಲಿನ ಮರುಪಾವತಿ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: ರಿಯಾಯಿತಿ ದರದಲ್ಲಿ ಗೃಹ ಸಾಲವನ್ನು ನೀಡುತ್ತಿರುವ ಬ್ಯಾಂಕುಗಳು

ಇದಲ್ಲದೆ ಗೃಹ ಸಾಲದಿಂದ ಇನ್ನೂ ಕೆಲವು ಪ್ರಯೋಜನಗಳಿವೆ. ತಮ್ಮದೇ ನಗರ ಅಥವಾ ಪಟ್ಟಣದಲ್ಲಿ ಜನರು ಮನೆ ಖರೀದಿಸಲೆಂದು ಪ್ರೋತ್ಸಾಹಿಸುವುದಕ್ಕಾಗಿಯೇ ಸರ್ಕಾರ ಅಸಲು ಮರು ಪಾವತಿ ಮತ್ತು ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ನೀಡುತ್ತದೆ ಎಂದು ‘ಪೇಮಿ’ ಸ್ಥಾಪಕ, ಸಿಇಒ ಮಹೇಶ್ ಶುಕ್ಲಾ ತಿಳಿಸಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಒಂದಕ್ಕಿಂತ ಹೆಚ್ಚಿನ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ಇದೆಯೇ?

ಒಂದಕ್ಕಿಂತ ಹೆಚ್ಚು ಮನೆಯನ್ನು ಒಬ್ಬ ವ್ಯಕ್ತಿ ಖರೀದಿಸಿದಲ್ಲಿ ಅದನ್ನು ಬಾಡಿಗೆ ಉದ್ದೇಶಕ್ಕೆ ನಿರ್ಮಿಸಿದ್ದು ಅಥವಾ ಖರೀದಿಸಿದ್ದೆಂದು ಆದಾಯ ತೆರಿಗೆ ನಿಯಮದಡಿ ಪರಿಗಣಿಸಲಾಗುತ್ತದೆ. ಹೀಗಾಗಿ ಒಂದಕ್ಕಿಂತ ಹೆಚ್ಚು ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಪಡೆಯುವ ಗೃಹ ಸಾಲದ ಮೇಲಿನ ತೆರಿಗೆ ಪ್ರಯೋನಗಳು ವ್ಯತ್ಯಸ್ತವಾಗಿರುತ್ತವೆ.

ಇದನ್ನೂ ಓದಿ: Cheaper Home Loan: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಎರಡನೇ ಮನೆಗಾಗಿ ಪಡೆಯುವ ಸಾಲದ ಒಟ್ಟು ಬಡ್ಡಿಯ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24ಬಿ ಅಡಿ ಅವಕಾಶವಿದೆ. ಮರುಪಾವತಿ ಶುಲ್ಕ ವಿನಾಯಿತಿ, ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ ಸೇರಿದಂತೆ ಇನ್ನೂ ಕೆಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

ಇಎಂಐಯನ್ನು ಸಕಾಲದಲ್ಲಿ ಪಾವತಿಸಿ

ಗೃಹ ಸಾಲ ಪಡೆದಾಗ ಸಕಾಲದಲ್ಲಿ ಇಎಂಐ ಪಾವತಿ ಮಾಡುವ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಗೃಹ ಸಾಲದ ಅಸಲು ಮತ್ತು ಬಡ್ಡಿಯನ್ನು ಒಟ್ಟು ಸೇರಿಸಿ ತಿಂಗಳಿಗೊಮ್ಮೆ ಪಾವತಿಸಲು ನಿಗದಿಪಡಿಸುವ ಮೊತ್ತವೇ ಇಎಂಐ ಅಥವಾ ತಿಂಗಳ ಕಂತು. ಹೀಗೆ ನಿರ್ದಿಷ್ಟ ವರ್ಷಗಳ ಕಾಲ ಪಾವತಿ ಮಾಡಿದಾಗ ಅಸಲು ಮತ್ತು ಬಡ್ಡಿ ಪಾವತಿ ಪೂರ್ಣಗೊಳ್ಳುವಂತೆ ಇಎಂಐ ಯೋಜನೆ ರೂಪಿಸಲಾಗುತ್ತದೆ. ಗೃಹ ಸಾಲ ಪಡೆಯಲು ಮುಂದಾಗುವಾಗ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಲು ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ. ವಿವಿಧ ಬ್ಯಾಂಕ್​ಗಳ ಬಡ್ಡಿ ದರ, ಇತರ ಪ್ರಯೋಜನಗಳು ಎಲ್ಲವನ್ನೂ ಹೋಲಿಕೆ ಮಾಡಿ ನೋಡಿ ಕಡಿಮೆ ಇಎಂಐ ಬರುವ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮವಾಗಿದೆ. ಇದರಿಂದ ಸಕಾಲಕ್ಕೆ ಇಎಂಐ ಪಾವತಿಸುವುದೂ ಸುಲಭವಾಗಲಿದೆ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ