Gold Silver Price on 4 November 2022 | ಬೆಂಗಳೂರು: ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳ, ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ, ದೇಶೀಯ ಷೇರುಪೇಟೆಗಳಲ್ಲಿ ವಹಿವಾಟು ಕುಸಿತವು ದೇಶದ ಬುಲಿಯನ್ ಮಾರುಕಟ್ಟೆ (Bullion Market) ಮೇಲೂ ಪರಿಣಾಮ ಬೀರಿದೆ. ಚಿನ್ನ (Gold Price) ಹಾಗೂ ಬೆಳ್ಳಿ (Silver Price) ದರಗಳಲ್ಲಿ ಇಳಿಕೆಯಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನದ ದರ ತುಸು ಏರಿಕೆಯಾಗಿದ್ದರೆ, ಬೆಳ್ಳಿಯ ದರ ಕುಸಿತವಾಗಿತ್ತು. ಆದರೆ ಇಂದು ಉಭಯ ಲೋಹಗಳ ಬೆಲೆ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 150 ರೂ. ಇಳಿಕೆಯಾಗಿ 46,700 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 160 ರೂ. ಇಳಿಕೆಯಾಗಿ 50,950 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂ. ಇಳಿಕೆಯಾಗಿ 58,100 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಏರಿದ ಚಿನ್ನ, ಕುಸಿದ ಬೆಳ್ಳಿ; ಪ್ರಮುಖ ನಗರಗಳಲ್ಲಿ ಎಷ್ಟಿದೆ ದರ? ಇಲ್ಲಿದೆ ವಿವರ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,150 ರೂ. ಮುಂಬೈ- 46,700 ರೂ, ದೆಹಲಿ- 46,850 ರೂ, ಕೊಲ್ಕತ್ತಾ- 46,700 ರೂ, ಬೆಂಗಳೂರು- 46,750 ರೂ, ಹೈದರಾಬಾದ್- 46,700 ರೂ, ಕೇರಳ- 46,700 ರೂ, ಪುಣೆ- 46,730 ರೂ, ಮಂಗಳೂರು- 46,750 ರೂ, ಮೈಸೂರು- 46,750 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,440 ರೂ, ಮುಂಬೈ- 50,950 ರೂ, ದೆಹಲಿ- 51,100 ರೂ, ಕೊಲ್ಕತ್ತಾ- 50,950 ರೂ, ಬೆಂಗಳೂರು- 51,000 ರೂ, ಹೈದರಾಬಾದ್- 50,950 ರೂ, ಕೇರಳ- 50,950 ರೂ, ಪುಣೆ- 50,980 ರೂ, ಮಂಗಳೂರು- 51,000 ರೂ, ಮೈಸೂರು- 51,000 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 64,000 ರೂ, ಮೈಸೂರು- 64,000 ರೂ., ಮಂಗಳೂರು- 64,000 ರೂ., ಮುಂಬೈ- 58,100 ರೂ, ಚೆನ್ನೈ- 64,000 ರೂ, ದೆಹಲಿ- 58,100 ರೂ, ಹೈದರಾಬಾದ್- 64,000 ರೂ, ಕೊಲ್ಕತ್ತಾ- 58,100 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ