Gold Price Today: ಚಿನ್ನದ ಬೆಲೆ ಇಂದು 270 ರೂ. ಕುಸಿತ; ಬೆಳ್ಳಿ ದರ 400 ರೂ. ಇಳಿಕೆ
Silver Price Today: ಬೆಳ್ಳಿ ದರ ಇಂದು 400 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,900 ರೂ. ಇದ್ದುದು ಇಂದು 58,500 ರೂ. ಆಗಿದೆ.
Gold Price on 13th October 2022 | ಬೆಂಗಳೂರು: ಭಾರತದಲ್ಲಿ 3 ದಿನಗಳಿಂದ ಚಿನ್ನದ ಬೆಲೆ (Gold Rate) ಕುಸಿತವಾಗುತ್ತಲೇ ಇದೆ. ಇಂದು ಚಿನ್ನದ ದರ 270 ರೂ. ಇಳಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಇಂದು 400 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,900 ರೂ. ಇದ್ದುದು ಇಂದು 46,650 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,160 ರೂ. ಇದ್ದುದು 50,890 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,300 ರೂ. ಮುಂಬೈ- 46,650 ರೂ, ದೆಹಲಿ- 46,800 ರೂ, ಕೊಲ್ಕತ್ತಾ- 46,650 ರೂ, ಬೆಂಗಳೂರು- 46,700 ರೂ, ಹೈದರಾಬಾದ್- 46,650 ರೂ, ಕೇರಳ- 46,650 ರೂ, ಪುಣೆ- 46,680 ರೂ, ಮಂಗಳೂರು- 46,700 ರೂ, ಮೈಸೂರು- 46,700 ರೂ. ಆಗಿದೆ.
ಇದನ್ನೂ ಓದಿ: Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಕುಸಿತ; ಒಂದೇ ದಿನದಲ್ಲಿ ಬೆಳ್ಳಿ ದರ 1,300 ರೂ. ಇಳಿಕೆ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 51,600 ರೂ, ಮುಂಬೈ- 50,890 ರೂ, ದೆಹಲಿ- 51,050 ರೂ, ಕೊಲ್ಕತ್ತಾ- 50,890 ರೂ, ಬೆಂಗಳೂರು- 50,950 ರೂ, ಹೈದರಾಬಾದ್- 50,890 ರೂ, ಕೇರಳ- 50,890 ರೂ, ಪುಣೆ- 50,920 ರೂ, ಮಂಗಳೂರು- 50,950 ರೂ, ಮೈಸೂರು- 50,950 ರೂ. ಆಗಿದೆ.
ಇಂದಿನ ಬೆಳ್ಳಿಯ ದರ: ಬೆಳ್ಳಿ ದರ ಇಂದು 400 ರೂ. ಕುಸಿತವಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,900 ರೂ. ಇದ್ದುದು ಇಂದು 58,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 58,500 ರೂ, ಚೆನ್ನೈ- 63,000 ರೂ, ದೆಹಲಿ- 58,500 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 58,500 ರೂ. ಆಗಿದೆ.