Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿ ದರ 700 ರೂ. ಹೆಚ್ಚಳ

Silver Price Today: ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,450 ರೂ. ಇದ್ದುದು 46,250 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,670 ರೂ. ಇದ್ದುದು 50,450 ರೂ. ಆಗಿದೆ. ಇಂದು ಬೆಳ್ಳಿ ಬೆಲೆ ಮತ್ತೆ ಹೆಚ್ಚಳವಾಗಿದೆ.

Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿ ದರ 700 ರೂ. ಹೆಚ್ಚಳ
ಚಿನ್ನದ ಬೆಲೆ
Edited By:

Updated on: May 15, 2022 | 6:03 AM

ಬೆಂಗಳೂರು: ಭಾರತದಲ್ಲಿ ನಿನ್ನೆಯಿಂದ ಮತ್ತೆ ಚಿನ್ನದ ಬೆಲೆ ಕುಸಿತವಾಗುತ್ತಿದೆ. ಇಂದು ಕೂಡ ಚಿನ್ನದ ದರ (Gold Price) 10 ಗ್ರಾಂಗೆ 220 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆ ನಿನ್ನೆ (Silver Price) ದಾಖಲೆಯ 2,100 ರೂ. ಕುಸಿತ ಕಂಡಿತ್ತು. ಆದರೆ, ಇಂದು 700 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,450 ರೂ. ಇದ್ದುದು 46,250 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,670 ರೂ. ಇದ್ದುದು 50,450 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,370 ರೂ. ಮುಂಬೈ- 46,250 ರೂ, ದೆಹಲಿ- 46,250 ರೂ, ಕೊಲ್ಕತ್ತಾ- 46,250 ರೂ, ಬೆಂಗಳೂರು- 46,250 ರೂ, ಹೈದರಾಬಾದ್- 46,250 ರೂ, ಕೇರಳ- 46,250 ರೂ, ಪುಣೆ- 46,320 ರೂ, ಮಂಗಳೂರು- 46,250 ರೂ, ಮೈಸೂರು- 46,250 ರೂ. ಇದೆ. (Source)

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,670 ರೂ, ಮುಂಬೈ- 50,450 ರೂ, ದೆಹಲಿ- 50,450 ರೂ, ಕೊಲ್ಕತ್ತಾ- 50,450 ರೂ, ಬೆಂಗಳೂರು- 50,450 ರೂ, ಹೈದರಾಬಾದ್- 50,450 ರೂ, ಕೇರಳ- 50,450 ರೂ, ಪುಣೆ- 50,520 ರೂ, ಮಂಗಳೂರು- 50,450 ರೂ, ಮೈಸೂರು- 50,450 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಇಂದು 700 ರೂ. ಏರಿಕೆ ಕಂಡಿದೆ.

ಇಂದಿನ ಬೆಳ್ಳಿಯ ದರ:
ಇಂದು ಬೆಳ್ಳಿ ಬೆಲೆ ಮತ್ತೆ ಹೆಚ್ಚಳವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 58,700 ರೂ. ಇದ್ದುದು ಇಂದು 59,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,700 ರೂ, ಮೈಸೂರು- 63,700 ರೂ., ಮಂಗಳೂರು- 63,700 ರೂ., ಮುಂಬೈ- 59,400 ರೂ, ಚೆನ್ನೈ- 63,700 ರೂ, ದೆಹಲಿ- 59,400 ರೂ, ಹೈದರಾಬಾದ್- 63,700 ರೂ, ಕೊಲ್ಕತ್ತಾ- 63,700 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us