Gold Price Today: ಬೆಂಗಳೂರು, ಮುಂಬೈ ಸೇರಿ ಹಲವೆಡೆ ಚಿನ್ನದ ಬೆಲೆ ಭಾರೀ ಏರಿಕೆ; ಬೆಳ್ಳಿ ದರ 400 ರೂ. ಹೆಚ್ಚಳ

Gold Price Today: ಬೆಂಗಳೂರು, ಮುಂಬೈ ಸೇರಿ ಹಲವೆಡೆ ಚಿನ್ನದ ಬೆಲೆ ಭಾರೀ ಏರಿಕೆ; ಬೆಳ್ಳಿ ದರ 400 ರೂ. ಹೆಚ್ಚಳ
ಚಿನ್ನದ ಬೆಲೆ

Silver Price Today: ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,750 ರೂ. ಇದ್ದುದು 47,200 ರೂ. ಆಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,400 ರೂ. ಇದ್ದುದು ಇಂದು 60,800 ರೂ. ಆಗಿದೆ.

TV9kannada Web Team

| Edited By: Sushma Chakre

May 13, 2022 | 6:04 AM

ಬೆಂಗಳೂರು: ಭಾರತದಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಇಂದು ಚಿನ್ನದ ದರ (Gold Price) 10 ಗ್ರಾಂಗೆ 490 ರೂ. ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 400 ರೂ. ಏರಿಕೆ ಕಂಡಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,750 ರೂ. ಇದ್ದುದು 47,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,000 ರೂ. ಇದ್ದುದು 51,490 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,350 ರೂ. ಮುಂಬೈ- 47,200 ರೂ, ದೆಹಲಿ- 47,200 ರೂ, ಕೊಲ್ಕತ್ತಾ- 47,200 ರೂ, ಬೆಂಗಳೂರು- 47,200 ರೂ, ಹೈದರಾಬಾದ್- 47,200 ರೂ, ಕೇರಳ- 47,200 ರೂ, ಪುಣೆ- 47,300 ರೂ, ಮಂಗಳೂರು- 47,200 ರೂ, ಮೈಸೂರು- 47,200 ರೂ. ಇದೆ. (Source)

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,750 ರೂ, ಮುಂಬೈ- 51,490 ರೂ, ದೆಹಲಿ- 51,490 ರೂ, ಕೊಲ್ಕತ್ತಾ- 51,490 ರೂ, ಬೆಂಗಳೂರು- 51,490 ರೂ, ಹೈದರಾಬಾದ್- 51,490 ರೂ, ಕೇರಳ- 51,490 ರೂ, ಪುಣೆ- 51,590 ರೂ, ಮಂಗಳೂರು- 51,490 ರೂ, ಮೈಸೂರು- 51,490 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಇಂದು ದಾಖಲೆಯ 400 ರೂ. ಹೆಚ್ಚಳ ಕಂಡಿದೆ.

ಇಂದಿನ ಬೆಳ್ಳಿಯ ದರ: ಇಂದು ಕೂಡ ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,400 ರೂ. ಇದ್ದುದು ಇಂದು 60,800 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,000 ರೂ, ಮೈಸೂರು- 65,000 ರೂ., ಮಂಗಳೂರು- 65,000 ರೂ., ಮುಂಬೈ- 60,800 ರೂ, ಚೆನ್ನೈ- 65,000 ರೂ, ದೆಹಲಿ- 60,800 ರೂ, ಹೈದರಾಬಾದ್- 65,000 ರೂ, ಕೊಲ್ಕತ್ತಾ- 60,800 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada