Gold Price Today: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 73 ಸಾವಿರದ ಗಡಿ ತಲುಪಿದ ಬೆಳ್ಳಿ ದರ

Silver Price: ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ ಇಂದು 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ.

Gold Price Today: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 73 ಸಾವಿರದ ಗಡಿ ತಲುಪಿದ ಬೆಳ್ಳಿ ದರ
ಚಿನ್ನದ ಬೆಲೆ
Edited By:

Updated on: Mar 25, 2022 | 5:50 AM

ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಚಿನ್ನ ಖರೀದಿಸುವವರು ಕಂಗಾಲಾಗಿದ್ದಾರೆ. ಇಂದು ಕೂಡ ಮತ್ತೆ ಬಂಗಾರದ ದರ ಏರಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ (Gold Rate) 640 ರೂ. ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,350 ರೂ. ಇದ್ದುದು 47,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,670 ರೂ. ಇದ್ದುದು 52,310 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,310 ರೂ. ಮುಂಬೈ- 47,950 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,950 ರೂ, ಬೆಂಗಳೂರು- 47,950 ರೂ, ಹೈದರಾಬಾದ್- 47,950 ರೂ, ಕೇರಳ- 47,950 ರೂ, ಪುಣೆ- 48,050 ರೂ, ಮಂಗಳೂರು- 47,950 ರೂ, ಮೈಸೂರು- 47,950 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,700 ರೂ, ಮುಂಬೈ- 52,310 ರೂ, ದೆಹಲಿ- 52,310 ರೂ, ಕೊಲ್ಕತ್ತಾ- 52,310 ರೂ, ಬೆಂಗಳೂರು- 52,310 ರೂ, ಹೈದರಾಬಾದ್- 52,310 ರೂ, ಕೇರಳ- 52,310 ರೂ, ಪುಣೆ- 52,350 ರೂ, ಮಂಗಳೂರು- 52,310 ರೂ, ಮೈಸೂರು- 52,310 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.

ಇಂದಿನ ಬೆಳ್ಳಿಯ ದರ:
ನಿನ್ನೆ ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಇಂದು ಭಾರೀ ಏರಿಕೆ ಕಂಡಿದೆ. ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 900 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 67,600 ರೂ. ಇದ್ದುದು ಇಂದು 68,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 72,800 ರೂ, ಮೈಸೂರು- 72,800 ರೂ., ಮಂಗಳೂರು- 72,800 ರೂ., ಮುಂಬೈ- 68,500 ರೂ, ಚೆನ್ನೈ- 72,800 ರೂ, ದೆಹಲಿ- 68,500 ರೂ, ಹೈದರಾಬಾದ್- 72,800 ರೂ, ಕೊಲ್ಕತ್ತಾ- 68,500 ರೂ. ಇದೆ.

ಇದನ್ನೂ ಓದಿ: Gold Price Today: 2 ದಿನಗಳ ಬಳಿಕ ಕುಸಿತ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 1,300 ರೂ. ಇಳಿಕೆ

Web contact

TV9 Kannada

Read More
Follow Us