Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 200 ರೂ. ಕುಸಿತ

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಬೆಳ್ಳಿ ಬೆಲೆ ನಿನ್ನೆ 1 ಕೆಜಿ ಬೆಳ್ಳಿಯ ದರ 60,000 ರೂ. ಇದ್ದುದು ಇಂದು 59,800 ರೂ. ಆಗಿದೆ.

Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 200 ರೂ. ಕುಸಿತ
ಚಿನ್ನದ ಬೆಲೆ
Edited By:

Updated on: Jun 26, 2022 | 6:16 AM

ಬೆಂಗಳೂರು: ಚಿನ್ನ- ಬೆಳ್ಳಿಯ ಬೆಲೆಯ ಹಾವು-ಏಣಿ ಆಟ ನಡೆಯುತ್ತಲೇ ಇದೆ. ಭಾರತದಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು 110 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 1 ಕೆಜಿಗೆ 200 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,450 ರೂ. ಇದ್ದುದು 47,550 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,760 ರೂ. ಇದ್ದುದು 51,870 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,600 ರೂ. ಮುಂಬೈ- 47,550 ರೂ, ದೆಹಲಿ- 47,550 ರೂ, ಕೊಲ್ಕತ್ತಾ- 47,550 ರೂ, ಬೆಂಗಳೂರು- 47,550 ರೂ, ಹೈದರಾಬಾದ್- 47,550 ರೂ, ಕೇರಳ- 47,550 ರೂ, ಪುಣೆ- 47,580 ರೂ, ಮಂಗಳೂರು- 47,550 ರೂ, ಮೈಸೂರು- 47,550 ರೂ. ಇದೆ.

ಇದನ್ನೂ ಓದಿ: Gold Price Today: ಬೆಂಗಳೂರು, ಚೆನ್ನೈ ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 300 ರೂ. ಕುಸಿತ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,850 ರೂ, ಮುಂಬೈ- 51,760 ರೂ, ದೆಹಲಿ- 51,760 ರೂ, ಕೊಲ್ಕತ್ತಾ- 51,760 ರೂ, ಬೆಂಗಳೂರು- 51,870 ರೂ, ಹೈದರಾಬಾದ್- 51,870 ರೂ, ಕೇರಳ- 51,870 ರೂ, ಪುಣೆ- 51,900 ರೂ, ಮಂಗಳೂರು- 51,870 ರೂ, ಮೈಸೂರು- 51,870 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 200 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,000 ರೂ. ಇದ್ದುದು ಇಂದು 59,800 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 65,700 ರೂ, ಮೈಸೂರು- 65,700 ರೂ., ಮಂಗಳೂರು- 65,700 ರೂ., ಮುಂಬೈ- 59,800 ರೂ, ಚೆನ್ನೈ- 65,700 ರೂ, ದೆಹಲಿ- 59,800 ರೂ, ಹೈದರಾಬಾದ್- 65,700 ರೂ, ಕೊಲ್ಕತ್ತಾ- 59,800 ರೂ. ಆಗಿದೆ.

TV9 Web

TV9 Kannada

Read More
Loading...
Unable to load recommendations.
Follow Us