AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಮತ್ತೆ ಚೇತರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 71 ಸಾವಿರ ರೂ. ದಾಟಿದ ಬೆಳ್ಳಿ ದರ

Silver price on April 2: ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು 48,100 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇದ್ದುದು 52,470 ರೂ. ಆಗಿದೆ.

Gold Price Today: ಮತ್ತೆ ಚೇತರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 71 ಸಾವಿರ ರೂ. ದಾಟಿದ ಬೆಳ್ಳಿ ದರ
ಚಿನ್ನದ ಬೆಲೆ
TV9 Web
| Edited By: |

Updated on: Apr 02, 2022 | 5:50 AM

Share

ಬೆಂಗಳೂರು: ಎರಡು ದಿನಗಳಿಂದ ಒಂದೇ ಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗಿರಲಿಲ್ಲ. ಭಾರತದಲ್ಲಿ ಚಿನ್ನದ ದರ (Gold Rate) ಇಂದು 10 ಗ್ರಾಂಗೆ 450 ರೂ. ಏರಿಕೆಯಾಗಿದೆ. ನಿನ್ನೆ ದಾಖಲೆಯ ಕುಸಿತ ಕಂಡಿದ್ದ ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 800 ರೂ. ಏರಿಕೆ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು 48,100 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇದ್ದುದು 52,470 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,340 ರೂ. ಮುಂಬೈ- 48,100 ರೂ, ದೆಹಲಿ- 48,100 ರೂ, ಕೊಲ್ಕತ್ತಾ- 48,100 ರೂ, ಬೆಂಗಳೂರು- 48,100 ರೂ, ಹೈದರಾಬಾದ್- 48,100 ರೂ, ಕೇರಳ- 48,100 ರೂ, ಪುಣೆ- 48,180 ರೂ, ಮಂಗಳೂರು- 48,100 ರೂ, ಮೈಸೂರು- 48,100 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,730 ರೂ, ಮುಂಬೈ- 52,470 ರೂ, ದೆಹಲಿ- 52,470 ರೂ, ಕೊಲ್ಕತ್ತಾ- 52,470 ರೂ, ಬೆಂಗಳೂರು- 52,470 ರೂ, ಹೈದರಾಬಾದ್- 52,470 ರೂ, ಕೇರಳ- 52,470 ರೂ, ಪುಣೆ- 52,550 ರೂ, ಮಂಗಳೂರು- 52,470 ರೂ, ಮೈಸೂರು- 52,470 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಹೆಚ್ಚಳವಾಗಿದ್ದು, ಬೆಳ್ಳಿ ಬೆಲೆ (Silver Price) ಕೂಡ ಏರಿಕೆಯಾಗುತ್ತಿದೆ.

ಇಂದಿನ ಬೆಳ್ಳಿಯ ದರ: ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 800 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 66,800 ರೂ. ಇದ್ದುದು ಇಂದು 67,600 ರೂ.ಗೆ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,700 ರೂ, ಮೈಸೂರು- 71,700 ರೂ., ಮಂಗಳೂರು- 71,700 ರೂ., ಮುಂಬೈ- 67,600 ರೂ, ಚೆನ್ನೈ- 71,700 ರೂ, ದೆಹಲಿ- 67,600 ರೂ, ಹೈದರಾಬಾದ್- 71,700 ರೂ, ಕೊಲ್ಕತ್ತಾ- 67,600 ರೂ. ಆಗಿದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿ ಬೆಲೆ ಒಂದೇ ದಿನದಲ್ಲಿ 4,100 ರೂ. ಏರಿಕೆ

Gold Price Today: ಬೆಂಗಳೂರು, ಮುಂಬೈ ಸೇರಿ ಹಲವು ನಗರಗಳಲ್ಲಿ ಇಂದು ಚಿನ್ನದ ಬೆಲೆ ಕುಸಿತ; ಬೆಳ್ಳಿ ದರವೂ ಇಳಿಕೆ

Follow Us
Web contact
Web contact

TV9 Kannada

Read More