AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; 1,500 ರೂ. ಹೆಚ್ಚಳ ಕಂಡ ಬೆಳ್ಳಿ ದರ

Silver Price Today: ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇದ್ದುದು 48,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,310 ರೂ. ಇದ್ದುದು 52,590 ರೂ. ಆಗಿದೆ.

Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; 1,500 ರೂ. ಹೆಚ್ಚಳ ಕಂಡ ಬೆಳ್ಳಿ ದರ
ಚಿನ್ನದ ಆಭರಣ
TV9 Web
| Edited By: |

Updated on: Mar 26, 2022 | 6:01 AM

Share

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಏರುತ್ತಲೇ ಇದೆ. ಇಂದು ಕೂಡ ಮತ್ತೆ ಚಿನ್ನದ ದರ ಏರಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ (Gold Rate) 250 ರೂ. ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು 1 ಕೆಜಿಗೆ ಬರೋಬ್ಬರಿ 1,500 ರೂ. ಏರಿಕೆ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇದ್ದುದು 48,200 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,310 ರೂ. ಇದ್ದುದು 52,590 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,540 ರೂ. ಮುಂಬೈ- 48,200 ರೂ, ದೆಹಲಿ- 48,200 ರೂ, ಕೊಲ್ಕತ್ತಾ- 48,200 ರೂ, ಬೆಂಗಳೂರು- 48,200 ರೂ, ಹೈದರಾಬಾದ್- 48,200 ರೂ, ಕೇರಳ- 48,200 ರೂ, ಪುಣೆ- 48,300 ರೂ, ಮಂಗಳೂರು- 48,200 ರೂ, ಮೈಸೂರು- 48,200 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,960 ರೂ, ಮುಂಬೈ- 52,590 ರೂ, ದೆಹಲಿ- 52,590 ರೂ, ಕೊಲ್ಕತ್ತಾ- 52,590 ರೂ, ಬೆಂಗಳೂರು- 52,590 ರೂ, ಹೈದರಾಬಾದ್- 52,590 ರೂ, ಕೇರಳ- 52,590 ರೂ, ಪುಣೆ- 52,690 ರೂ, ಮಂಗಳೂರು- 52,590 ರೂ, ಮೈಸೂರು- 52,590 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.

ಇಂದಿನ ಬೆಳ್ಳಿಯ ದರ: ನಿನ್ನೆ ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಇಂದು ಭಾರೀ ಏರಿಕೆ ಕಂಡಿದೆ. ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 1,500 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,500 ರೂ. ಇದ್ದುದು ಇಂದು 70,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 73,800 ರೂ, ಮೈಸೂರು- 73,800 ರೂ., ಮಂಗಳೂರು- 73,800 ರೂ., ಮುಂಬೈ- 70,000 ರೂ, ಚೆನ್ನೈ- 73,800 ರೂ, ದೆಹಲಿ- 70,000 ರೂ, ಹೈದರಾಬಾದ್- 73,800 ರೂ, ಕೊಲ್ಕತ್ತಾ- 70,000 ರೂ. ಇದೆ.

ಇದನ್ನೂ ಓದಿ: Gold Price Today: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 73 ಸಾವಿರದ ಗಡಿ ತಲುಪಿದ ಬೆಳ್ಳಿ ದರ

Gold Price Today: ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ 73 ಸಾವಿರದ ಗಡಿ ತಲುಪಿದ ಬೆಳ್ಳಿ ದರ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು