Gold Rate: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಆಭರಣ ಖರೀದಿದಾರರಿಗೆ ಇಲ್ಲಿದೆ ಪೂರ್ಣ ಮಾಹಿತಿ

| Updated By: preethi shettigar

Updated on: Dec 26, 2021 | 7:32 AM

Gold Silver Price Today: ಇಂದು (ಡಿಸೆಂಬರ್ 26, ಭಾನುವಾರ) ಕೂಡ ಚಿನ್ನದ ದರ ಸ್ಥಿರವಾಗಿದೆ. ಬೆಳ್ಳಿ ದರ ಇಳಿಕೆಯತ್ತ ಸಾಗಿದೆ. ನೀವು ಕೂಡಿಟ್ಟ ಹಣದಲ್ಲಿ ಆಭರಣ ಕೊಳ್ಳುವ ಕುರಿತಾದ ಯೋಚನೆ ಇದ್ದರೆ ಇಂದು ಖರೀದಿಸಬಹುದು. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

Gold Rate: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಆಭರಣ ಖರೀದಿದಾರರಿಗೆ ಇಲ್ಲಿದೆ ಪೂರ್ಣ ಮಾಹಿತಿ
ಚಿನ್ನಾಭರಣ
Follow us on

Gold and Silver Price Today| ಬೆಂಗಳೂರು: ಚಿನ್ನ ಅಂದ್ರೆ ಭಾರತೀಯರಿಗೆ ಕೊಂಚ ಜಾಸ್ತಿಯೇ ಪ್ರೀತಿ. ಮನೆಯಲ್ಲಿ ಹಬ್ಬ-ಹರಿದಿನಗಳ ಸಾಲು ಬಂದ್ರೆ ಮೊದಲು ಯೋಚಿಸುವುದೇ ಚಿನ್ನಾಭರಣ ಖರೀದಿಸುವ ಕುರಿತು. ಹಾಗಿರುವಾಗ ಚಿನ್ನದ ಬೆಲೆ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆಯೂ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನಾಭರಣ ಬೆಲೆ ಏರಿಳಿತ ಕಾಣುತ್ತಿರುವುದು ಸಹಜ. ಅದರಂತೆ ನಿನ್ನೆ ಚಿನ್ನದ ಬೆಲೆ ಸ್ಥಿರವಾಗಿತ್ತು. ಇಂದು (ಡಿಸೆಂಬರ್ 26, ಭಾನುವಾರ) ಕೂಡ ಚಿನ್ನದ ದರ (Gold Price) ಸ್ಥಿರವಾಗಿದೆ. ಬೆಳ್ಳಿ ದರ (Silver Price) ಇಳಿಕೆಯತ್ತ ಸಾಗಿದೆ. ನೀವು ಕೂಡಿಟ್ಟ ಹಣದಲ್ಲಿ ಆಭರಣ ಕೊಳ್ಳುವ ಕುರಿತಾದ ಯೋಚನೆ ಇದ್ದರೆ ಇಂದು ಖರೀದಿಸಬಹುದು. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,350 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,480 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,94,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 62,300 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price)
ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,100 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,650 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ಬೆಲೆ ಕೂಡ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 66,100 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ಬೆಲೆ (Hyderabad Gold Price)
ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,350 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,480 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,94,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಳ್ಳಿ ಬೆಲೆ ಕೂಡ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 66,100 ರೂಪಾಯಿ ನಿಗದಿಯಾಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ಬೆಲೆ (Mumbai Gold Price)
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,73,300 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,83,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆ 62,300 ರೂಪಾಯಿ ದಾಖಲಾಗಿದೆ.

ಇದನ್ನೂ ಓದಿ:
Gold Rate: ಕ್ರಿಸ್​ಮಸ್​ ಹಬ್ಬದ ದಿನ ಚಿನ್ನ, ಬೆಳ್ಳಿ ಖರೀದಿಸುವ ಪ್ಲಾನ್ ಇದೆಯೇ? ಇಂದು ಆಭರಣಗಳ ದರ ಎಷ್ಟಿದೆ ತಿಳಿಯಿರಿ

Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ! ಚಿನ್ನದ ದರದಲ್ಲಿ ಇಳಿಕೆ; ಯಾವ ಯಾವ ನಗರಗಳಲ್ಲಿ ಬೆಲೆ ಎಷ್ಟಿದೆ?

 

Published On - 7:24 am, Sun, 26 December 21