AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ! ಚಿನ್ನದ ದರದಲ್ಲಿ ಇಳಿಕೆ; ಯಾವ ಯಾವ ನಗರಗಳಲ್ಲಿ ಬೆಲೆ ಎಷ್ಟಿದೆ?

Gold Rate Today: ಇಂದು (ಡಿಸೆಂಬರ್ 22, ಬುಧವಾರ) ಚಿನ್ನದ ದರ ಇಳಿಕೆಯಾಗಿದೆ. ಬೆಳ್ಳಿ ದರ ಕೂಡ ಇಳಿಕೆಯತ್ತ ಸಾಗಿದೆ. ನೀವು ಕೂಡಿಟ್ಟ ಹಣದಲ್ಲಿ ಆಭರಣ ಕೊಳ್ಳುವ ಕುರಿತಾದ ಯೋಚನೆ ಇದ್ದರೆ ಇಂದು ಖರೀದಿಸಬಹುದು.

Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ! ಚಿನ್ನದ ದರದಲ್ಲಿ ಇಳಿಕೆ; ಯಾವ ಯಾವ ನಗರಗಳಲ್ಲಿ ಬೆಲೆ ಎಷ್ಟಿದೆ?
ಸಂಗ್ರಹ ಚಿತ್ರ
Follow us
TV9 Web
| Updated By: preethi shettigar

Updated on:Dec 22, 2021 | 7:34 AM

Gold and Silver Price Today|ಬೆಂಗಳೂರು: ಚಿನ್ನ ಅಂದ್ರೆ ಭಾರತೀಯರಿಗೆ ಕೊಂಚ ಜಾಸ್ತಿಯೇ ಪ್ರೀತಿ. ಮನೆಯಲ್ಲಿ ಹಬ್ಬ-ಹರಿದಿನಗಳ ಸಾಲು ಬಂದ್ರೆ ಮೊದಲು ಯೋಚಿಸುವುದೇ ಚಿನ್ನಾಭರಣ ಖರೀದಿಸುವ ಕುರಿತು. ಹಾಗಿರುವಾಗ ಚಿನ್ನದ ಬೆಲೆ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆಯೂ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನಾಭರಣ ಬೆಲೆ ಏರಿಳಿತ ಕಾಣುತ್ತಿರುವುದು ಸಹಜ. ಕಳೆದ ಎರಡು ದಿನಗಳಿಂದ ಆಭರಣದ ಬೆಲೆ ಸ್ಥಿರವಾಗಿತ್ತು. ಆದರೆ ಇಂದು (ಡಿಸೆಂಬರ್ 22, ಬುಧವಾರ) ಚಿನ್ನದ ದರ (Gold Price) ಇಳಿಕೆಯಾಗಿದೆ. ಬೆಳ್ಳಿ ದರ (Silver Price) ಕೂಡ ಇಳಿಕೆಯತ್ತ ಸಾಗಿದೆ. ನೀವು ಕೂಡಿಟ್ಟ ಹಣದಲ್ಲಿ ಆಭರಣ ಕೊಳ್ಳುವ ಕುರಿತಾದ ಯೋಚನೆ ಇದ್ದರೆ ಇಂದು ಖರೀದಿಸಬಹುದು. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price) ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 4,000 ರೂಪಾಯಿ ಇಳಿಕೆಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,420 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,94,200 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 4,300 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 61,400 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price) ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,540 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 3,700 ರೂಪಾಯಿ ಇಳಿಕೆಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,680 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 4,200 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 65,200 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ಬೆಲೆ (Hyderabad Gold Price) ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 4,300 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,420 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,94,200 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 4,300 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 65,200 ರೂಪಾಯಿ ನಿಗದಿಯಾಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ಬೆಲೆ (Mumbai Gold Price) ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,410 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,74,100 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,640 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,84,100 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 2,300 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆ 61,400 ರೂಪಾಯಿ ದಾಖಲಾಗಿದೆ.

ಇದನ್ನೂ ಓದಿ: Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಆಭರಣ ಖರೀದಿದಾರರಿಗೆ ಇಲ್ಲಿದೆ ಪೂರ್ಣ ಮಾಹಿತಿ

Gold Price Today: ಚಿನ್ನದ ದರ ಸ್ಥಿರ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಆಭರಣ ಖರೀದಿಸುವವರು ದರ ವಿವರ ಪರಿಶೀಲಿಸಿ

Published On - 7:22 am, Wed, 22 December 21

ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ