ಆಭರಣದ ಬೆಲೆ ಏರಿಳಿತವಾಗುವುದು ಸಹಜ. ನಿನ್ನೆ (ಡಿ.4) ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು (ಡಿ.5) ದೇಶದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಹಾಗಾದರೆ ಎಷ್ಟು ರೂಪಾಯಿ ಏರಿಕೆಯಾಗಿದೆ? ಇವತ್ತು ಭಾನುವಾರ. ವೀಕೆಂಡಿನಲ್ಲಿ ಆಭರಣಕೊಳ್ಳುವವರಿದ್ದರೆ ಇಂದಿನ ದರ ಗಮನಿಸಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,760 ರೂ. ಆಗಿದ್ದು, 100 ಗ್ರಾಂಗೆ 4,47,600 ರೂ. ನಿಗದಿಯಾಗಿದೆ. ನಿನ್ನೆ ಇದೇ ಚಿನ್ನ 10 ಗ್ರಾಂಗೆ 44,750 ರೂ. ಇತ್ತು. ಈ ಬೆಲೆಯನ್ನು ಗಮನಿಸಿದಾಗ 10 ಗ್ರಾಂ ಚಿನ್ನಕ್ಕೆ 10 ರೂಪಾಯಿ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ 48,830 ರೂ. ಆಗಿದ್ದು, 100 ಗ್ರಾಂಗೆ 4,88,300 ರೂಪಾಯಿ ಆಗಿದೆ. ನಿನ್ನೆ ಇದೇ ಚಿನ್ನ 10 ಗ್ರಾಂಗೆ 48,820 ರೂಪಾಯಿ ನಿಗದಿಯಾಗಿದ್ದು, ಇಂದು ಪ್ರತಿ 10 ಗ್ರಾಂಗೆ 10 ರೂಪಾಯಿ ಹೆಚ್ಚಳವಾಗಿದೆ. ಇನ್ನು ಒಂದು ಕೆಜಿ ಬೆಳ್ಳಿಗೆ ಇಂದು 61,600 ರೂ. ಇದೆ. ನಿನ್ನೆಯೂ ಕೂಡಾ ಇದೇ ದರ ನಿಗದಿಯಾಗಿತ್ತು.
ಮುಂಬೈನಲ್ಲಿ ಆಭರಣದ ಬೆಲೆ ಎಷ್ಟಿದೆ?
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,510 ರೂ. ಇದೆ. ನಿನ್ನೆ 46,500 ರೂ. ಇತ್ತು. ಅಂದರೆ ಇವತ್ತು ಪ್ರತಿ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ 100 ಗ್ರಾಂಗೆ ನಿನ್ನೆ 4,65,000 ರೂಪಾಯಿ ನಿಗದಿಯಾಗಿದ್ದರೆ, ಇಂದು 4,65,100 ರೂಪಾಯಿ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ನಿನ್ನೆ ನಿಗದಿಯಾಗಿದ್ದ ಬೆಲೆ ಇಂದು ಸ್ಥಿರವಾಗಿದೆ. ಅಂದರೆ 1 ಕೆಜಿ ಬೆಳ್ಳಿಗೆ ಮುಂಬೈನಲ್ಲಿ 61,600 ರೂಪಾಯಿ ಇದೆ.
ಆಭರಣದ ಬೆಲೆ ದೆಹಲಿಯಲ್ಲಿ ಹೀಗಿದೆ
ದೆಹಲಿಯಲ್ಲೂ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಪ್ರತಿ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,900 ರೂ. ಇತ್ತು. ಆದರೆ ಇಂದು 46,910 ರೂ. ಇದೆ. ಇದೇ 100 ಗ್ರಾಂ ಚಿನ್ನಕ್ಕೆ ಇಂದಿನ ದರ 4,69,100 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಮತ್ತು 100 ಗ್ರಾಂ ಚಿನ್ನಕ್ಕೆ ಕ್ರಮವಾಗಿ 51,170 ಮತ್ತು 5,11,700 ರೂ. ಇದೆ. ನಗರದಲ್ಲಿ 1 ಕೆಜಿ ಬೆಳ್ಳಿಗೆ 61,600 ರೂ. ಹಣ ಇದೆ.
ಹೈದರಾಬಾದ್ನಲ್ಲಿ ಆಭರಣದ ಬೆಲೆ ಎಷ್ಟಿದೆ ಗೊತ್ತಾ?
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,760 ರೂ. ಇದ್ದರೆ 100 ಗ್ರಾಂಗೆ 4,47,600 ರೂ. ಇದೆ. ಇಲ್ಲಿಯೂ ಸಹ ಪ್ರತಿ 10 ಗ್ರಾಂ ಚಿನ್ನಕ್ಕೆ 10 ರೂಪಾಯಿ ಏರಿಕೆಯಾಗಿದೆ. ಇನ್ನು ಹೈದರಾಬಾದ್ನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 10 ಗ್ರಾಂಗೆ 48,830 ರೂ. ನಿಗದಿಯಾಗಿದ್ದು, 100 ಗ್ರಾಂಗೆ 4,88,300 ರೂಪಾಯಿ ಇದೆ. ಹೈದರಾಬಾದ್ನಲ್ಲಿ ಬೆಳ್ಳಿ ಬೆಲೆ ಇತರೆ ನಗರಗಳಿಗಿಂತ ಹೆಚ್ಚಾಗಿದೆ. ಸದ್ಯ 1 ಕೆಜಿ ಬೆಳ್ಳಿಗೆ 65,000 ರೂಪಾಯಿ ಆಗಿದೆ.
ಇದನ್ನೂ ಓದಿ
ನಂಬರ್ ಪ್ಲೇಟ್ ಮೇಲೆ SEX ಪದ ಬಳಕೆ; ಯುವತಿ ಪರ ನಿಂತು, ಆರ್ಟಿಒ ಕಚೇರಿಗೆ ನೋಟಿಸ್ ನೀಡಿದ ಮಹಿಳಾ ಆಯೋಗ