Ajaz Patel: ಪಂದ್ಯದ ಬಳಿಕ ನ್ಯೂಜಿಲೆಂಡ್ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ದ್ರಾವಿಡ್, ಕೊಹ್ಲಿ: ಕಾರಣ ಕೇಳಿದ್ರೆ ಹೆಮ್ಮೆ ಆಗುತ್ತೆ

Virat Kohli and Rahul Dravid congratulates Ajaz Patel: ಎಜಾದ್ ಪಟೇಲ್ 10 ವಿಕೆಟ್ ಪಡೆದ ತಕ್ಷಣ ರವಿಚಂದ್ರನ್ ಅಶ್ವಿನ್ ಎದ್ದುನಿಂತು ಚಪ್ಪಾಳೆ ತಟ್ಟಿದ್ದರು. ಬಳಿಕ ಇನ್ನಿಂಗ್ಸ್ ಮುಗಿದ ಮೇಲೆ ವಿರಾಟ್ ಕೊಹ್ಲಿ ಹಾಗೂ ದ್ರಾವಿಡ್ ನ್ಯೂಜಿಲೆಂಡ್​ನ ಡ್ರೆಸ್ಸಿಂಗ್ ರೂಮ್​ಗೆ ಹೋಗಿ ಶುಭಕೋರಿದರು.

Ajaz Patel: ಪಂದ್ಯದ ಬಳಿಕ ನ್ಯೂಜಿಲೆಂಡ್ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ದ್ರಾವಿಡ್, ಕೊಹ್ಲಿ: ಕಾರಣ ಕೇಳಿದ್ರೆ ಹೆಮ್ಮೆ ಆಗುತ್ತೆ
Virat Kohli Rahul Dravid and Ajaz Patel
Follow us
TV9 Web
| Updated By: Vinay Bhat

Updated on: Dec 05, 2021 | 8:36 AM

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ (India vs New Zealand) ಸಂಪೂರ್ಣ ತನ್ನ ಹಿಡಿತಕ್ಕೆ ಪಡೆದುಕೊಂಡಿದೆ. ಟೀಮ್ ಇಂಡಿಯಾ (Team India) ಬೌಲರ್​ಗಳ ಬಿರುಗಾಳಿಗೆ ತತ್ತರಿಸಿದ ಕಿವೀಸ್ ಪಡೆ 62 ರನ್​ಗೆ ಆಲೌಟ್ ಆಗುವ ಮೂಲಕ ಹೀನಾಯ ಪ್ರದರ್ಶನ ತೋರಿತು. ಇದರ ನಡುವೆ ಎಲ್ಲರ ಮನಗೆದ್ದಿದ್ದು ನ್ಯೂಜಿಲೆಂಡ್ ತಂಡದ ಬೌಲರ್ ಭಾರತೀಯ ಮೂಲದ ಎಜಾಜ್ ಪಟೇಲ್ (Ajaz Patel). ವಿಶ್ವ ಶ್ರೇಷ್ಠ ಭಾರತ ತಂಡದ 10 ವಿಕೆಟ್​ಗಳನ್ನು ಕಬಳಿಸಿ ಎಜಾಜ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು. ಜಿಮ್​ ಲೇಕರ್​ (Jim Laker) ಮತ್ತು ಅನಿಲ್​ ಕುಂಬ್ಳೆ (Anil Kumble) ಬಳಿಕ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಇದೇ ಕಾರಣಕ್ಕಾಗಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ (Virat Kohli), ಕೋಚ್ ರಾಹುಲ್ ದ್ರಾವಿಡ್ (Rahul Dravid) ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಎಜಾಜ್ ಅವರಿಗೆ ಶುಭಕೋರಿದರು.

ಇದಕ್ಕೂ ಮುನ್ನ ಎಜಾದ್ 10 ವಿಕೆಟ್ ಪಡೆದ ತಕ್ಷಣ ರವಿಚಂದ್ರನ್ ಅಶ್ವಿನ್ ಎದ್ದುನಿಂತು ಚಪ್ಪಾಳೆ ತಟ್ಟಿದ್ದರು. ಬಳಿಕ ಇನ್ನಿಂಗ್ಸ್ ಮುಗಿದ ಮೇಲೆ ಕೊಹ್ಲಿ ಹಾಗೂ ದ್ರಾವಿಡ್ ನ್ಯೂಜಿಲೆಂಡ್​ನ ಡ್ರೆಸ್ಸಿಂಗ್ ರೂಮ್​ಗೆ ಹೋಗಿ ಶುಭಕೋರಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ಎಜಾಜ್ ಪಟೇಲ್ ಮೂಲತಃ ಭಾರತದವರು. ಇವರ ಜನನ ಆಗಿದ್ದು ಮುಂಬೈನಲ್ಲಿ. ಎಜಾಜ್​ಗೆ 8 ವರ್ಷವಿರುವಾಗ ಇವರ ಕುಟುಂಬ ಭಾರತದಿಂದ ನ್ಯೂಜಿಲೆಂಡ್​ಗೆ ತೆರಳಿತು. ಮುಂದೆ ಇವರು ನ್ಯೂಜಿಲೆಂಡ್​ನ ದೇಶೀಯ ಸೆಂಟ್ರಲ್ ಡಿಸ್ಟ್ರಿಕ್ಸ್ ತಂಡದ ಪರವಾಗಿ ಮೊದಲು ಆಡಲು ಶುರು ಮಾಡಿದರು. ನ್ಯೂಜಿಲೆಂಡ್ ಕ್ರಿಕೆಟ್ ಇವರಿಗೆ 2018 ರಲ್ಲಿ ಡೊಮೆಸ್ಟಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ದೇಶೀಯ ಕ್ರಿಕೆಟ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ 30ನೇ ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಈವರೆಗೆ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಎಜಾಜ್ ಪಟೇಲ್ 18 ಇನ್ನಿಂಗ್ಸ್​ಗಳಲ್ಲಿ 39 ವಿಕೆಟ್ ಪಡೆದಿದ್ದಾರೆ. ಭಾರತ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ 119 ರನ್​ಗೆ 10 ವಿಕೆಟ್ ಕಿತ್ತಿರುವುದೇ ಇವರ ಜೀವನ ಶ್ರೇಷ್ಠ ಸಾಧನೆಯಾಗಿದೆ. ಟಿ 20 ಕ್ರಿಕೆಟ್​ನಲ್ಲಿ ಇವರು ಆಡಿದ್ದು ಏಳು ಪಂದ್ಯಗಳನ್ನು ಮಾತ್ರ. ಇದರಲ್ಲೂ 11 ವಿಕೆಟ್ ಕಬಳಿಸಿದ್ದಾರೆ.

ಅಜಾಜ್ ಪಟೇಲ್ (119ಕ್ಕೆ 10) ವಿಶ್ವ ದಾಖಲೆ ನಿರ್ವಹಣೆ ನಡುವೆಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ ಭಾರತ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದು, ಭರ್ಜರಿ ಮುನ್ನಡೆ ಸಾಧಿಸಿರುವ ವಿರಾಟ್ ಕೊಹ್ಲಿ ಪಡೆ ಸುಲಭ ಗೆಲುವಿನ ಕನಸಿನಲ್ಲಿದೆ. 263 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಎರಡನೇ ದಿನದಂತ್ಯಕ್ಕೆ 21 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್‌ಗಳಿಸಿದ್ದು, ಒಟ್ಟಾರೆಯಾಗಿ 332 ರನ್ ಮುನ್ನಡೆಯಲ್ಲಿದೆ.

India vs New Zealand: ಗೆಲುವಿನ ನಿಶ್ಚಿತ ಹಾದಿಯಲ್ಲಿ ಟೀಮ್ ಇಂಡಿಯಾ: ಇಂದೇ ಮುಗಿಯುತ್ತಾ ಎರಡನೇ ಟೆಸ್ಟ್?

(Ajaz Patel was congratulated by Virat Kohli and Rahul Dravid in dug-out afetr India vs New Zealand Test Match)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ