Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಡಿಸೆಂಬರ್ 15ರಿಂದ ಆರಂಭ
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಡೆಲಿವರಿ ಡಿಸೆಂಬರ್ 15, 2021ರಿಂದ ಆರಂಭವಾಗಲಿದೆ ಎಂದು ಸಿಇಒ ಭವಿಶ್ ಅಗರ್ವಾಲ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಓಲಾ (Ola) ಎಲೆಕ್ಟ್ರಿಕ್ ಸ್ಕೂಟರ್‌ಗಳಾದ S1 ಮತ್ತು S1 ಪ್ರೊ ಅನ್ನು ಡಿಸೆಂಬರ್ 15ರಿಂದ ವಿತರಿಸಲು ಪ್ರಾರಂಭಿಸುತ್ತದೆ. ಬೆಂಗಳೂರು ಮೂಲದ ಈ ಸಂಸ್ಥೆಯ ಸಿಇಒ ಭವಿಶ್ ಅಗರ್ವಾಲ್ ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಹೊಸ ಡೆಲಿವರಿ ದಿನಾಂಕವನ್ನು ಘೋಷಿಸಿದ್ದಾರೆ. ಆಸಕ್ತ ಖರೀದಿದಾರರೇ ತಮ್ಮ ತಾಳ್ಮೆಗಾಗಿ ಧನ್ಯವಾದ ಎಂದು ಹೇಳಿದ್ದಾರೆ. ಓಲಾ ಹೊಸದಾಗಿ ಬಿಡುಗಡೆಯಾದ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆ ದಿನಾಂಕಗಳನ್ನು ಘೋಷಿಸಿದಂತೆ ನೀಡುವುದಕ್ಕೆ ಸಾಧ್ಯವಾಗಿಲ್ಲ. ಈ ವರ್ಷದ ಆಗಸ್ಟ್‌ನಲ್ಲಿ ಬುಕಿಂಗ್‌ಗಳನ್ನು ಪ್ರಾರಂಭಿಸಲಾಯಿತು ಮತ್ತು ಅಂದಿನಿಂದ ಓಲಾ ಟೆಸ್ಟ್ ರೈಡ್‌ಗಳು ಹಾಗೂ ಅಂತಿಮ ಡೆಲಿವರಿ ದಿನಾಂಕಗಳಿಗೆ ಹೇಳಿದಂತೆ ನಡೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.
ಕಳೆದ ತಿಂಗಳು ಓಲಾ S1 ಮತ್ತು S1 ಪ್ರೊಗಾಗಿ ಟೆಸ್ಟ್ ರೈಡ್‌ಗಳನ್ನು ಪ್ರಾರಂಭಿಸಿತು. ಓಲಾ ಎಲೆಕ್ಟ್ರಿಕ್ S1 ಮತ್ತು S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ 20,000 ಟೆಸ್ಟ್ ರೈಡ್‌ಗಳನ್ನು ಪೂರ್ಣಗೊಳಿಸಿದೆ ಮತ್ತು ಈ ತಿಂಗಳಿನಿಂದ 1,000 ನಗರಗಳಲ್ಲಿ ಒಂದು ದಿನದಲ್ಲಿ 10,000 ಟೆಸ್ಟ್ ರೈಡ್‌ಗಳನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ 10 ಕಾಯ್ದಿರಿಸುವಿಕೆಯನ್ನು ಪಡೆದಿದೆ ಎಂದು ಭವಿಶ್ ಅಗರ್ವಾಲ್ ಗುರುವಾರ ಹೇಳಿದ್ದಾರೆ.
Scooters are getting ready ? Production ramped up and all geared to begin deliveries from 15th Dec. Thank you for your patience! pic.twitter.com/d2ydB3TXTm
— Bhavish Aggarwal (@bhash) December 4, 2021
ಓಲಾ ಎಲೆಕ್ಟ್ರಿಕ್ ನವೆಂಬರ್ 10ರಂದು ಬೆಂಗಳೂರು, ದೆಹಲಿ, ಅಹಮದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಟೆಸ್ಟ್ ರೈಡ್‌ಗಳನ್ನು ಪ್ರಾರಂಭಿಸಿತು. ಆ ನಂತರ ನವೆಂಬರ್ 19ರಂದು ಚೆನ್ನೈ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ಪುಣೆ ಹೀಗೆ ಐದು ನಗರಗಳಲ್ಲಿ ತೆರೆಯಿತು.
ಕಂಪೆನಿಯು ಆಗಸ್ಟ್ 15ರಂದು ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ವೇರಿಯಂಟ್ಗಳಲ್ಲಿ ಅನಾವರಣಗೊಳಿಸಿದೆ – S1 ಮತ್ತು S1 ಪ್ರೊ – ಇವುಗಳಿಗೆ ಕ್ರಮವಾಗಿ ರೂ. 99,999 ಮತ್ತು ರೂ. 1,29,999 (FAME II ಸಬ್ಸಿಡಿ ಸೇರಿದಂತೆ ಮತ್ತು ರಾಜ್ಯ ಸಬ್ಸಿಡಿಗಳನ್ನು ಹೊರತುಪಡಿಸಿ) ದರ ನಿಗದಿ ಆಗಿದೆ. ಮಾರಾಟವು ಸೆಪ್ಟೆಂಬರ್ 8 ರಂದು ಪ್ರಾರಂಭ ಆಗಬೇಕಾಗಿದ್ದರೂ ಗ್ರಾಹಕರಿಗೆ ಖರೀದಿಗಾಗಿ ವೆಬ್‌ಸೈಟ್ ಅನ್ನು ಲೈವ್ ಮಾಡುವಲ್ಲಿ “ತಾಂತ್ರಿಕ ತೊಂದರೆಗಳನ್ನು” ಎದುರಿಸಿದ ಕಾರಣ ಅದು ಮಾರಾಟ ಪ್ರಕ್ರಿಯೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಿತ್ತು.
ಇದನ್ನೂ ಓದಿ: ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿರುವ ಗ್ರಾಹಕರಿಂದ ದೂರುಗಳು, ಡೆಲಿವರಿ ವಿಳಂಬಗೊಳ್ಳುವ ಸಾಧ್ಯತೆ!