Starlink: 2022ರ ಜನವರಿಗೆ ಭಾರತದಲ್ಲಿ ವಾಣಿಜ್ಯ ಲೈಸೆನ್ಸ್​ಗೆ ಅರ್ಜಿ ಸಲ್ಲಿಸಲಿದೆ ಎಲಾನ್​ ಮಸ್ಕ್​ರ ಸ್ಟಾರ್​ಲಿಂಕ್

ಎಲಾನ್​ ಮಸ್ಕ್​ರ ಸ್ಟಾರ್​ಲಿಂಕ್ 2022ರ ಜನವರಿ ಕೊನೆಗೆ ಭಾರತದಲ್ಲಿ ವಾಣಿಜ್ಯ ಲೈಸೆನ್ಸ್​ಗಾಗಿ ಅರ್ಜಿ ಹಾಕಲಿದೆ ಎಂದು ಕಂಪೆನಿಯ ಪ್ರಮುಖರು ತಿಳಿಸಿದ್ದಾರೆ.

Starlink: 2022ರ ಜನವರಿಗೆ ಭಾರತದಲ್ಲಿ ವಾಣಿಜ್ಯ ಲೈಸೆನ್ಸ್​ಗೆ ಅರ್ಜಿ ಸಲ್ಲಿಸಲಿದೆ ಎಲಾನ್​ ಮಸ್ಕ್​ರ ಸ್ಟಾರ್​ಲಿಂಕ್
ಎಲಾನ್​ ಮಸ್ಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Dec 04, 2021 | 8:34 PM

ಬ್ರಾಡ್‌ಬ್ಯಾಂಡ್ ಮತ್ತು ಇತರ ಸೇವೆಗಳನ್ನು ಒದಗಿಸಲು ಬಿಲಿಯನೇರ್ ಎಲಾನ್ ಮಸ್ಕ್ ಅವರ ರಾಕೆಟ್ ಕಂಪೆನಿ ಸ್ಪೇಸ್‌ಎಕ್ಸ್‌ನ ಉಪಗ್ರಹ ಇಂಟರ್​ನೆಟ್ ವಿಭಾಗವಾದ ಸ್ಟಾರ್‌ಲಿಂಕ್ ಭಾರತದಲ್ಲಿ ವಾಣಿಜ್ಯ ಪರವಾನಗಿಗಾಗಿ ಮುಂದಿನ ವರ್ಷದ ಆರಂಭದಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಆ ಕಂಪೆನಿಗಾಗಿ ಇರುವ ದೇಶದ ಮುಖ್ಯಸ್ಥರು ಶುಕ್ರವಾರ ತಿಳಿಸಿದ್ದಾರೆ. “ನಾವು 2022ರ ಜನವರಿ 31ರಂದು ಅಥವಾ ಅದಕ್ಕೂ ಮೊದಲು ವಾಣಿಜ್ಯ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ಭಾವಿಸುತ್ತೇವೆ (ನಾವು ಕೆಲವು ಪ್ರಮುಖ ರಸ್ತೆ ತಡೆಯನ್ನು ತೊಡೆಯದಿದ್ದರೆ),” ಎಂದು SpaceXನಲ್ಲಿ ಭಾರತದ ಸ್ಟಾರ್‌ಲಿಂಕ್ ದೇಶದ ನಿರ್ದೇಶಕ ಸಂಜಯ್ ಭಾರ್ಗವ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಂಪೆನಿಯು 2022ರ ಏಪ್ರಿಲ್ ವೇಳೆಗೆ ತನ್ನ ಸೇವೆಗಳನ್ನು ನೀಡಲು ಸಾಧ್ಯವಾದರೆ 2022ರ ಡಿಸೆಂಬರ್ ವೇಳೆಗೆ ಭಾರತದಲ್ಲಿ 2,00,000 ಸ್ಟಾರ್‌ಲಿಂಕ್ ಸಾಧನಗಳನ್ನು ಹೊಂದುವ ಗುರಿಯನ್ನು ಇರಿಸಿಕೊಂಡಿದೆ ಎಂದು ಭಾರ್ಗವ ಅವರು ಪೋಸ್ಟ್ ಮಾಡಿದ್ದರಲ್ಲಿ ತಿಳಿಸಿದ್ದಾರೆ. ಈ ಸಾಧನಗಳಲ್ಲಿ ಶೇಕಡಾ 80ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಇರಬೇಕು ಎಂದು ಕಂಪೆನಿಯು ಈ ಹಿಂದೆ ಹೇಳಿದೆ. ಬೆಳವಣಿಗೆ ಕಾಣುತ್ತಿರುವ ಕಂಪೆನಿಗಳಲ್ಲಿ ಸ್ಟಾರ್​ಲಿಂಕ್ ಕೂಡ ಒಂದು. ಪ್ರಪಂಚದಾದ್ಯಂತ ಲೋ-ಲೇಟೆನ್ಸಿ ಬ್ರಾಡ್‌ಬ್ಯಾಂಡ್ ಇಂಟರ್​ನೆಟ್ ಸೇವೆಗಳನ್ನು ಒದಗಿಸಲು ಭೂಮಿಯ ಕಕ್ಷೆಗೆ ಸಣ್ಣ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಉದ್ದೇಶ ಹೊಂದಿದೆ. ಆ ಮೂಲಕವಾಗಿ ಇಂಟರ್​ನೆಟ್​ ತಲುಪುವುದಕ್ಕೂ ಕ್ಲಿಷ್ಟಕರವಾದ ಪ್ರದೇಶಗಳಿಗೂ ತಲುಪಿಸುವ ಗುರಿಯಿದೆ.

ಇದರ ಪ್ರತಿಸ್ಪರ್ಧಿಗಳು Amazon.comನ ಕೈಪರ್ ಮತ್ತು OneWeb ಅನ್ನು ಒಳಗೊಂಡಿವೆ. ಇದು ಬ್ರಿಟಿಷ್ ಸರ್ಕಾರ ಮತ್ತು ಭಾರತದ ಭಾರ್ತಿ ಎಂಟರ್‌ಪ್ರೈಸಸ್‌ನ ಸಹ-ಮಾಲೀಕತ್ವವನ್ನು ಹೊಂದಿದೆ. ಸ್ಟಾರ್‌ಲಿಂಕ್ ಈಗಾಗಲೇ ಭಾರತದಲ್ಲಿ ತನ್ನ ಸಾಧನಗಳಿಗಾಗಿ 5,000ಕ್ಕೂ ಹೆಚ್ಚು ಮುಂಗಡ-ಆರ್ಡರ್‌ಗಳನ್ನು ಪಡೆದಿದ್ದರೂ ಅದು ಯಾವುದೇ ಸೇವೆಗಳನ್ನು ಪ್ರಾರಂಭಿಸಿಲ್ಲ. ಹಾಗಿದ್ದರೂ ಭಾರತ ಸರ್ಕಾರವು ಕಳೆದ ವಾರ, ಸ್ಟಾರ್‌ಲಿಂಕ್‌ಗೆ ಚಂದಾದಾರರು ಆಗಬೇಡಿ ಎಂದು ಜನರಿಗೆ ಸಲಹೆ ನೀಡಿದೆ. ಏಕೆಂದರೆ ಅದು ದೇಶದಲ್ಲಿ ಕಾರ್ಯ ನಿರ್ವಹಿಸಲು ಪರವಾನಗಿ ಹೊಂದಿಲ್ಲ. ಇದು ಕಂಪೆನಿಗೆ ಎಚ್ಚರಿಕೆ ನೀಡಿದ್ದು, ಬುಕ್ಕಿಂಗ್ ಮತ್ತು ಸೇವೆಗಳನ್ನು ನೀಡುವುದನ್ನು ತಡೆಯಲು ಆದೇಶಿಸಿದೆ.

ಸ್ಟಾರ್‌ಲಿಂಕ್ ತನ್ನ ಸಾಧನಗಳಿಗೆ ಮುಂಗಡ-ಆರ್ಡರ್​ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಅದರ ವೆಬ್‌ಸೈಟ್ ಪ್ರಕಾರ, “ಬಾಕಿ ಉಳಿದಿರುವ ನಿಯಂತ್ರಕ ಅನುಮೋದನೆ”ಯನ್ನು ಉಲ್ಲೇಖಿಸಿದೆ. ಕಳೆದ ತಿಂಗಳು ಕಂಪೆನಿಯು ಸ್ಟಾರ್‌ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸ್ಥಳೀಯ ಘಟಕವನ್ನು ನೋಂದಾಯಿಸಿತು, ಇದು ದೇಶದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ದಾರಿ ಮಾಡಿಕೊಟ್ಟಿತು.

ಇದನ್ನೂ ಓದಿ: Elon Musk: ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಇಂಟರ್ನೆಟ್ ಪ್ಲಾನ್ ಖರೀದಿಸಬೇಡಿ: ಭಾರತ ಸರ್ಕಾರದಿಂದ ಎಚ್ಚರಿಕೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್