ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿರುವ ಗ್ರಾಹಕರಿಂದ ದೂರುಗಳು, ಡೆಲಿವರಿ ವಿಳಂಬಗೊಳ್ಳುವ ಸಾಧ್ಯತೆ!

ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿರುವ ಗ್ರಾಹಕರಿಂದ ದೂರುಗಳು, ಡೆಲಿವರಿ ವಿಳಂಬಗೊಳ್ಳುವ ಸಾಧ್ಯತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 23, 2021 | 7:59 PM

ಓಲಾ ಸಂಸ್ಥೆಯು ಗ್ರಾಹಕರಿಗೆ, ಟೆಸ್ಟ್ ಡ್ರೈವ್ ಮಾಡಿದ ನಂತರವೇ ಸಂಪೂರ್ಣ ಪೇಮೆಂಟ್ ಮಾಡುವಂತೆ ಹೇಳುತ್ತಿದೆ. ಹಾಗಾದಲ್ಲಿ, ವಾಹನಗಳ ಡೆಲಿವರಿ ನಿಶ್ಚಿತವಾಗಿಯೂ ಸಕಾಲಿಕವಾಗದೆ ವಿಳಂಬವಾಗಲಿದೆ.

ಸೆಪ್ಟೆಂಬರ್ ನಲ್ಲಿ ಓಲಾ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಲಾಂಚ್ ಮಾಡಿ ಕೇವಲ ಎರಡು ದಿನಗಳಲ್ಲಿ ರೂ.1,100 ಕೋಟಿಗಳ ವಹಿವಾಟು ನಡೆಸಿದ್ದನ್ನು ನಾವು ಈಗಾಗಲೇ ಚರ್ಚಿಸಿದ್ದೇವೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ, ಸ್ಕೂಟರ್ ಗಳನ್ನು ಬುಕ್ ಮಾಡಿರುವ ಗ್ರಾಹಕರಿಗೆ ನವೆಂಬರ್ 10 ರಿಂದ ವಿತರಣೆ ಆರಂಭವಾಗಲಿದೆ. ಆದರೆ, ಓಲಾ ಎಸ್ 1 ಮತ್ತು ಒಲಾ ಎಸ್ 1 ಪ್ರೊ ಬುಕ್ ಮಾಡಿರುವವರು ಟೆಸ್ಟ್ ಡ್ರೈವ್ ಮತ್ತು ವಾಹನಗಳ ಸಾಮರ್ಥ್ಯ, ಡೆಲಿವರಿ ದಿನಾಂಕ ಮತ್ತು ಇತರ ಅಂಶಗಳ ಕುರಿತು ಕಂಪನಿಗೆ ದೂರುಗಳನ್ನು ಸಲ್ಲಿಸಿದ್ದು ಡೆಲಿವರಿ ವಿಳಂಬಗೊಳ್ಳವ ಲಕ್ಷಣಗಳು ಕಾನುತ್ತಿವೆ. ಈ ಹಿನ್ನೆಲೆಯಲ್ಲಿ ಓಲಾ ಬುಧವಾರದಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಓಲಾ ಎಸ್ 1 ಸ್ಕೂಟರ್ ಮಾಡಿರುವವರಿಗೆ ಟೆಸ್ಟ್ ಡ್ರೈವ್ ಅವಕಾಶ ಕಲ್ಪಿಸಿದ ನಂತರವೇ ಅವರಿಂದ ಅಂತಿಮ ಪೇಮೆಂಟ್ ತೆಗೆದುಕೊಳ್ಳುವುದಾಗಿ ಹೇಳಿದೆ. ಟೆಸ್ಟ್ ಡ್ರೈವ್​ಗಳನ್ನು  ನವೆಂಬರ್ 10ರಿಂದ ಆರಂಭಿಸಲಾಗುವುದೆಂದು ಸಂಸ್ಥೆ ತಿಳಿಸಿದೆ.

ಅಕ್ಟೋಬರ್ ತಿಂಗಳಲ್ಲೇ ಸ್ಕೂಟರ್​ಗಳ ಡೆಲಿವರಿ ಪ್ರಕ್ರಿಯೆ ಶುರಮಾಡುವುದಾಗಿ ಓಲಾ ಈ ಮೊದಲು ಹೇಳಿತ್ತು. ಮೊದಲಿನ ಏರ್ಪಾಟಿನ ಪ್ರಕಾರ ಓಲಾ ಎಸ್ 1, ಓಲಾ ಎಸ್ 1 ಪ್ರೊ ವಾಹನಗಳನ್ನು ಬುಕ್ ಮಾಡಿದ ಗ್ರಾಹಕರಿಂದ ಅಕ್ಟೋಬರ್ 18ರೊಳಗೆ ಅಂತಿಮ ಪೇಮೆಂಟ್ ಪಡೆದು ಅಕ್ಟೋಬರ್ 25ರಿಂದ ಸ್ಕೂಟರ್​ಗಳ ಡೆಲಿವರಿ ಪ್ರಕ್ರಿಯೆ ಆರಂಭಿಸಬೇಕಿತ್ತು.

ಅದರೆ ಈಗ ಓಲಾ ಸಂಸ್ಥೆಯು ಗ್ರಾಹಕರಿಗೆ, ಟೆಸ್ಟ್ ಡ್ರೈವ್ ಮಾಡಿದ ನಂತರವೇ ಸಂಪೂರ್ಣ ಪೇಮೆಂಟ್ ಮಾಡುವಂತೆ ಹೇಳುತ್ತಿದೆ. ಹಾಗಾದಲ್ಲಿ, ವಾಹನಗಳ ಡೆಲಿವರಿ ನಿಶ್ಚಿತವಾಗಿಯೂ ಸಕಾಲಿಕವಾಗದೆ ವಿಳಂಬವಾಗಲಿದೆ. ಸಂಸ್ಥೆ ಹೊರಡಿಸಿರುವ ಹೇಳಿಕೆಯ ಮತ್ತೊಂದು ಗಮನಾರ್ಹ ಅಂಶವೆಂದರೆ, ತಾನು ನಿಗದಿಪಡಿಸುವ ಸಮಯದಲ್ಲೇ ಗ್ರಾಹಕರು ಟೆಸ್ಟ್ ಡ್ರೈವ್​​ ಬರಬೇಕೆನ್ನುವುದು.

ಸ್ಕೂಟರ್​​​ಗಳ ಡೆಲಿವರಿ ವಿಳಂಬಗೊಳ್ಳುವ ಸಾಧ್ಯತೆಯ ಬಗ್ಗೆ ಮಾಧ್ಯಮದವರು ಓಲಾ ಸಂಸ್ಥೆಯನ್ನು ಸಂಪರ್ಕಿಸಿದಾಗ, ನಿಗದಿತ ಸಮಯಕ್ಕೆ ವಾಹನಗಳನ್ನು ಡೆಲಿವರಿ ಮಾಡಲಾಗುವುದೆಂದು ಹೇಳಿತು.

ಅಂದಹಾಗೆ, ಸದರಿ ಸ್ಕೂಟರ್ಗಳಿಗೆ ಎರಡನೇ ಹಂತದ ಬುಕಿಂಗ್ ನವೆಂಬರ್ 1ರಿಂದ ಆರಂಭವಾಗಲಿದೆ ಎಂದು ಸಂಸ್ಥೆಯ ಸಿಈಒ ಹೇಳಿದ್ದಾರೆ.

ಇದನ್ನೂ ಓದಿ:  Viral Video: ಸಾಂಪ್ರದಾಯಿಕ ಉಡುಗೆ ತೊಟ್ಟು ಸ್ಕೇಟಿಂಗ್​ನಲ್ಲೇ ರಾಜಸ್ಥಾನಿ ಜಾನಪದ ನೃತ್ಯ ಮಾಡಿದ ಯುವತಿ; ಇಲ್ಲಿದೆ ವಿಡಿಯೋ