ಧಾರವಾಡ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆಯುವ ಅನ್ನ ಸಂತರ್ಪಣೆ ಕಾರ್ಯದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ
2005ರಿಂದಲೇ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಯ ಕಾರ್ಯ ಜಾರಿಯಲ್ಲಿದೆ. ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೆ, ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸುತ್ತಾರೆ.
ನಾಡಿನ ಪ್ರತಿಯೊಂದು ದೇವಸ್ಥಾನ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಶಿರಡಿ ಸಾಯಿಬಾಬಾರ ದೇವಸ್ಥಾನಗಳ ಸಂಖ್ಯೆ ಈಗ ಹೆಚ್ಚುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಹಾಗಾಗಿ, ರಾಜ್ಯದ ಸಾಯಿಬಾಬಾ ಭಕ್ತರು ಮಹಾರಾಷ್ಟ್ರದಲ್ಲಿರುವ ಶಿರಡಿಗೆ ಹೋಗುವಂಥ ಪ್ರಮೇಯ ಉದ್ಭವಿಸುತ್ತಿಲ್ಲ. ನಾವು ಈಗಾಗಲೇ, ರಾಮನಗರ ಮತ್ತು ವಿಜಯಪುರನಲ್ಲಿರುವ ಸಾಯಿಬಾಬಾ ಮಂದಿರಗಳ ಚರ್ಚಿಸಿದ್ದೇವೆ. ಈ ಬಾರಿ ಧಾರವಾಡದ ಕೆಳಗೇರಿ ರಸ್ತೆಯ ಸಾಯಿನಗರನಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ. ಅಂದಹಾಗೆ, ನಿಮಗಿಲ್ಲಿ ಕಾಣುತ್ತಿರುವ ಬಾಬಾ ಭವ್ಯ ದೇಗುಲ ಆರಂಭಗೊಂಡಿದ್ದು ಕೇವಲ ಒಂದು 10×10 ಶೆಡ್ ನಲ್ಲಿ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಬಾಬಾರ ಪರಮ ಭಕ್ತರ ಒಂದು ಗುಂಪು ಈ ಶೆಡ್ ನಲ್ಲಿ ಅವರ ಒಂದು ದೊಡ್ಡ ಭಾವಚಿತ್ರವನ್ನಿಟ್ಟು ಆರಾಧನೆ ಸಲ್ಲಿಸಲಾರಂಭಿಸಿದ್ದು 1999ರಲ್ಲಿ.
ಆರಂಭದಲ್ಲಿ ಕೇವಲ ಬೆರಳೆಣಿಕೆಯ ಭಕ್ತರಷ್ಟೇ ಭೇಟಿ ನೀಡುತ್ತಿದ್ದ ಈ ದೇವಸ್ಥಾನದ ಖ್ಯಾತಿ ಕ್ರಮೇಣವಾಗಿ ಹಬ್ಬಲಾರಂಭಿಸಿ ಕಾಣಿಕೆ ಮತ್ತು ದೇಣಿಗೆ ರೂಪದಲ್ಲಿ ಹೆಚ್ಚೆಚ್ಚು ಹಣ ಹರಿದು ಬರಲಾರಂಭಿಸಿತು.
ಶೆಡ್ ನಿರ್ಮಿಸಿದ್ದ ಭಕ್ತರು ಮೇ, 2005ರಲ್ಲಿ ಅದೇ ಸ್ಥಳದ 3,200 ಅಡಿ ವಿಶಾಲವಾದ ಜಾಗದಲ್ಲಿ ನಿಮಗಿಲ್ಲಿ ಕಾಣುತ್ತಿರುವ ದೇವಸ್ಥಾನವನ್ನು ಸುಮಾರು 15 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸಿದರು. ಬಳಿಕ ಅದೇ ವರ್ಷ ದಸರಾ ಹಬ್ಬದ ಸಮಯದಲ್ಲಿ ರಾಜಸ್ಥಾನದ ಜೈಪುರನಿಂದ 6 ಅಡಿ ಎತ್ತರದ ಬಾಬಾ ಅವರ ಮೂರ್ತಿಯನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
2005ರಿಂದಲೇ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಯ ಕಾರ್ಯ ಜಾರಿಯಲ್ಲಿದೆ. ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೆ, ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸುತ್ತಾರೆ.
ಶಿರ್ಡಿ ಸಾಯಿಬಾಬಾ ಗುಡಿಯಲ್ಲಿ ಜಾರಿಯಲ್ಲಿರುವ ಪೂಜಾ ವಿಧಿಗಳನ್ನೇ ಇಲ್ಲೂ ಅನುಸರಿಸಲಾಗುತ್ತಿದೆ. ರಾಮನವಮಿ, ಗುರು ಪೂರ್ಣಿಮ ಮತ್ತು ಬಾಬಾರವರು ಸಮಾಧಿಯಾದ ದಸರಾ ಹಬ್ಬದ ಸಂದರ್ಭಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗುತ್ತದೆ.
ಇದನ್ನೂ ಓದಿ: Viral Video: ನೆಟ್ಟಿಗರ ಮನಸೂರೆಗೊಂಡ ಹಾವಿನ ರೂಪದ ಕೇಕ್; ಏನಿದು ಸಮಾಚಾರ? ವಿಡಿಯೋ ನೋಡಿ