AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಬೆಂಗಳೂರಿನಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಇಂದು ಸ್ಥಿರ, ಬೆಳ್ಳಿ ಬೆಲೆಯಲ್ಲಿ ಏರಿಕೆ

Gold Rate Today: ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಬೆಂಗಳೂರಿನಲ್ಲಿ ಇಂದು ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಪ್ರಮುಖ ನಗರಗಳಲ್ಲಿ ಚಿನ್ನಾಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

Gold Price Today: ಬೆಂಗಳೂರಿನಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಇಂದು ಸ್ಥಿರ, ಬೆಳ್ಳಿ ಬೆಲೆಯಲ್ಲಿ ಏರಿಕೆ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Nov 26, 2021 | 8:20 AM

ಬೆಂಗಳೂರು: ಚಿನ್ನ ಖರೀದಿಸಬೇಕು ಅಂದುಕೊಂಡಾಗಲೆಲ್ಲಾ ಬೆಲೆ ಇಳಿಕೆಯತ್ತ ಸಾಗಿದೆಯೇನೋ ಎಂಬ ಕುತೂಹಲ ಕೆರಳುವುದು ಮಾಮೂಲಿ. ದರ ಇಳಿಕೆಯತ್ತ ಸಾಗಿದ್ದಾಗ ಚಿನ್ನ (Gold Price), ಬೆಳ್ಳಿ ಕೊಳ್ಳುವ ನಿರೀಕ್ಷೆ ಇರುವುದೂ ತಪ್ಪಲ್ಲ. ಅಷ್ಟು ದೊಡ್ಡ ಮೌಲ್ಯದ ಆಭರಣಗಳನ್ನು ಖರೀದಿಸಲು ಪ್ಲ್ಯಾನ್​ ಮಾಡಿದ್ದರೆ ಇಂದು ಶುಕ್ರವಾರ (ನವೆಂಬರ್​ 26) ಚಿನ್ನ, ಬೆಳ್ಳಿ ದರ (Silver Price) ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಬೆಂಗಳೂರಿನಲ್ಲಿ ಇಂದು ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಪ್ರಮುಖ ನಗರಗಳಲ್ಲಿ ಚಿನ್ನಾಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price) ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,700 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,47,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,760 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,87,600 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 62,900 ರೂಪಾಯಿ ನಿಗದಿಯಾಗಿದೆ. ಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price) ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,960 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,49,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 400 ರೂಪಾಯಿಯಷ್ಟು ಇಳಿಕೆ ಆಗಿದೆ. ಇನ್ನು, 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,050 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,90,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 400 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 67,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ದರ (Hyderabad Gold Price) ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,700 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ಬೆಲೆ 4,47,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,760 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,87,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಆಗಿದ್ದು, ಕೆಜಿ ಬೆಳ್ಳಿಗೆ 67,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿ ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ:

Gold Price Today: ಚಿನ್ನಾಭರಣ ಪ್ರಿಯರಿಗೆ ಸಂತೋಷದ ಸುದ್ದಿ​; ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

Gold Price Today: ಗ್ರಾಹಕರೇ ಗಮನಿಸಿ; ಇಂದು ಸಹ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

Published On - 8:03 am, Fri, 26 November 21

ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!