Gold and Silver Price Today | ಬೆಂಗಳೂರು: ನಿನ್ನೆ ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನದ ದರ ಏರಿಕೆ ಕಂಡಿತ್ತು. ಜತೆಗೆ ಬೆಳ್ಳಿ ಬೆಲೆಯಲ್ಲಿಯೂ (Gold Price) ಏರಿಕೆ ಆಗಿತ್ತು. ಆ ಬಳಿಕ ಇಂದು (ಅಕ್ಟೋಬರ್ 14, ಗುರುವಾರ) ಕೆಲವೆಡೆ ಚಿನ್ನದ ದರ (Gold Price) ಸ್ಥಿರತೆ ಕಾಯ್ದುಕೊಂಡಿದೆ, ಇನ್ನು ಕೆಲವೆಡೆ ಏರಿಕೆ ಕಂಡು ಬಂದಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ನೀವು ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಿದ್ದರೆ ದರ ವಿವರ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,150 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,41,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,160 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,600 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇನ್ನು, ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 62,100 ರೂಪಾಯಿ ನಿಗದಿಯಾಗಿದೆ. ಸುಮಾರು 300 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,440 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,44,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 140 ರೂಪಾಯಿಯಷ್ಟು ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,480 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,84,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,600 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಇನ್ನು, ಬೆಳ್ಳಿ ಬೆಲೆ ಸ್ಥಿರವಾಗಿದೆ. ಕೆಜಿ ಬೆಳ್ಳಿಗೆ 65,800 ರೂಪಾಯಿ ನಿಗದಿ ಆಗಿದೆ.
ಹೈದರಾಬಾದ್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,150 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,160 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತಗಳಿಲ್ಲ. ಬೆಳ್ಳಿ ದರವೂ ಸಹ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 65,800 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ:
Gold Price Today: ವೀಕೆಂಡ್ನಲ್ಲಿ ಆಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಚಿನ್ನ, ಬೆಳ್ಳಿ ದರ ವಿವರ ಪರಿಶೀಲಿಸಿ
Gold Price Today: ಇಂದೂ ಏರಿಕೆ ಕಂಡ ಚಿನ್ನದ ದರ; ಬೆಳ್ಳಿ ಬೆಲೆಯೂ ಕೊಂಚ ಹೆಚ್ಚಳ!
Published On - 7:23 am, Thu, 14 October 21