Gold Rate: ಏರಿಕೆಯಾದ ಚಿನ್ನದ ಬೆಲೆ, ಬೆಳ್ಳಿ ದರ ಸ್ಥಿರ; ಇಂದು ಆಭರಣದ ದರ ಎಷ್ಟಿದೆ?

| Updated By: sandhya thejappa

Updated on: Jan 10, 2022 | 9:18 AM

Gold Silver Price Today: ವೀಕೆಂಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ಆಭರಣದ ಅಂಗಡಿಗಳು ಬಂದ್ ಆಗಿದ್ದವು. ಹೀಗಾಗಿ ಆಭರಣ ಕೊಳ್ಳಲು ಆಗಿರಲಿಲ್ಲ.

Gold Rate: ಏರಿಕೆಯಾದ ಚಿನ್ನದ ಬೆಲೆ, ಬೆಳ್ಳಿ ದರ ಸ್ಥಿರ; ಇಂದು ಆಭರಣದ ದರ ಎಷ್ಟಿದೆ?
ಚಿನ್ನದ ಬಳೆಗಳು
Follow us on

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ವೀಕೆಂಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ಆಭರಣದ ಅಂಗಡಿಗಳು ಬಂದ್ ಆಗಿದ್ದವು. ಹೀಗಾಗಿ ಆಭರಣ ಕೊಳ್ಳಲು ಆಗಿರಲಿಲ್ಲ. ಆದರೆ ಇಂದು ಮತ್ತೆ ಅಂಗಡಿಗಳ ಬಾಗಿಲು ತೆರೆಯುತ್ತವೆ. ಆಭರಣ ಕೊಳ್ಳುವವರು ಇಂದಿನ ಆಭರಣದ ದರ ಎಷ್ಟಿದೆ ಅಂತ ಗಮನಿಸಿ. ವೀಕೆಂಡ್ ಕರ್ಫ್ಯೂ ಮುಗಿದ ಬಳಿಕ ಚಿನ್ನ (Gold Price), ಬೆಳ್ಳಿ (Silver Price) ದರ ಎಷ್ಟಿದೆ ಅಂತ ಇಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಆಭರಣ ದರ ಇಷ್ಟಿದೆ (Bangalore Gold Price)
ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 10 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,610 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,46,100 ರೂ. ನಿಗದಿಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,660 ರೂ. ಇದೆ. 100 ಗ್ರಾಂಗೆ 4,86,600 ರೂಪಾಯಿ ನಿಗದಿಯಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಗೆ 60,700 ರೂ. ಇದೆ ನಿನ್ನೆಯೂ ಕೂಡಾ ಇಷ್ಟೇ ದರ ಇತ್ತು.

ಮುಂಬೈನಲ್ಲಿ ಆಭರಣದ ಬೆಲೆ ಎಷ್ಟಿದೆ? (Mumbai Gold Price)
ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,610 ರೂಪಾಯಿದೆ ಇದೆ. ಇದೇ ಚಿನ್ನ 100 ಗ್ರಾಂಗೆ 4,66,100 ರೂ. ಇದೆ. 24 ಕ್ಯಾರೆಟ್ 10 ಗ್ರಾಂಗೆ 48,610 ರೂ. ದರ ನಿಗದಿಯಾಗಿದ್ದರೆ, 100 ಗ್ರಾಂಗೆ 4,86,100 ರೂಪಾಯಿ ಆಗಿದೆ. ಇಲ್ಲಿ ಒಂದು ಕೆಜಿ ಬೆಳ್ಳಿಗೆ 60,700 ರೂಪಾಯಿ ಇದೆ.

ದೆಹಲಿಯಲ್ಲಿ ಆಭರಣದ ಬೆಲೆ (Delhi Gold Price)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,760 ರೂ. ಇದೆ. 100 ಗ್ರಾಂಗೆ 4,67,600 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂಗೆ 51,010 ರೂ ಇದ್ದರೆ, ಇದೇ ಚಿನ್ನ 100 ಗ್ರಾಂಗೆ 5,10,100 ರೂಪಾಯಿ ಇದೆ. ಇಲ್ಲಿಯೂ ಸಹ ಒಂದು ಕೆಜಿ ಬೆಳ್ಳಿಗೆ 60,700 ರೂಪಾಯಿ ದರ ಇದೆ.

ಹೈದರಾಬಾದ್​ನಲ್ಲಿ ಆಭರಣದ ಬೆಲೆ ಹೀಗಿದೆ (Hyderabad Gold Price)
ಹೈದರಾಬಾದ್​ನಲ್ಲಿ ಆಭರಣ ಕೊಳ್ಳುವವರಿದ್ದರೆ ಚಿನ್ನ, ಬೆಳ್ಳಿ ದರ ಎಷ್ಟಿದೆ ಅಂತ ಗಮನಿಸಿ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,610 ರೂ. 100 ಗ್ರಾಂಗೆ 4,46,100 ರೂಪಾಯಿ ಇದೆ. ಇನ್ನು 24 ಕ್ಯಾರೆಟ್ 10 ಗ್ರಾಂಗೆ 48,660 ರೂಪಾಯಿ ಇದ್ದರೆ, 100 ಗ್ರಾಂಗೆ 4,86,600 ರೂಪಾಯಿ ಇದೆ. ಹೈದರಾಬಾದ್​ನಲ್ಲಿ ಒಂದು ಕೆಜಿ ಬೆಳ್ಳಿಗೆ 64,600 ರೂಪಾಯಿ ದರ ನಿಗದಿಯಾಗಿದೆ. ನಿನ್ನೆಯೂ ಇಷ್ಟೇ ದರ ಇತ್ತು.

ಇದನ್ನೂ ಓದಿ

ಚಳಿಗಾಲ ಬಂದರೂ ಮುಗಿದಿಲ್ಲ ಮಳೆ; ಜ.11ರಿಂದ ಈ ರಾಜ್ಯಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ, ಯೆಲ್ಲೋ ಅಲರ್ಟ್​ ಘೋಷಿಸಿದ ಐಎಂಡಿ

Headache Home Remedies: ತಲೆನೋವಿನಿಂದ ಪದೇ ಪದೇ ಸಮಸ್ಯೆ ಎದುರಾಗುತ್ತಿದೆಯೇ? ಈ ಮನೆಮದ್ದುಗಳನ್ನು ಬಳಸಿ

Published On - 9:17 am, Mon, 10 January 22