Updated on: Jan 10, 2022 | 7:30 AM
ತಲೆನೋವು ಮತ್ತು ಮೈಗ್ರೇನ್‌ಗಳ ಸಾಮಾನ್ಯ ಕಾರಣವೆಂದರೆ ನಮ್ಮ ದೇಹದಲ್ಲಿ ನೀರಿನ ಕೊರತೆ. ನೀರು ನಮ್ಮನ್ನು ಸರಿಯಾಗಿ ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನಿಮ್ಮನ್ನು ಚೆನ್ನಾಗಿ ಹೈಡ್ರೀಕರಿಸಿಟ್ಟುಕೊಳ್ಳಿ. ಇದಲ್ಲದೆ ಹಣ್ಣಿನ ಜ್ಯೂಸ್ ಮತ್ತು ಎಳನೀರನ್ನು ಸಹ ಕುಡಿಯಬಹುದು. ಜತೆಗೆ ಕಾಫಿ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಬೇಕು.
ತಲೆನೋವಿಗೆ ಚಿಕಿತ್ಸೆ ನೀಡಲು ಮತ್ತು ತಲೆನೋವನ್ನು ತಡೆಗಟ್ಟಲು ಮತ್ತೊಂದು ಪರಿಣಾಮಕಾರಿ ವಿಧಾನವೆಂದರೆ ರಾತ್ರಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು. ನಿದ್ರೆಯ ಕೊರತೆಯು ನಿಮ್ಮ ಜೀವನಶೈಲಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನೀವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಆದ್ದರಿಂದ ಪೂರ್ಣ ಮತ್ತು ಉತ್ತಮ ನಿದ್ರೆ ಮಾಡಿ.
ತಲೆಗೆ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆಯಾಗುತ್ತದೆ. ತೋರುಬೆರಳು ಮತ್ತು ಹೆಬ್ಬೆರಳಿನಿಂದ, ನೋವಿನ ಪ್ರದೇಶದ ಮೇಲೆ ಲಘು ಒತ್ತಡವನ್ನು ಹಾಕಿ ಮಸಾಜ್ ಮಾಡಿ. ತಲೆಗೆ ಮಸಾಜ್ ಮಾಡುವುದರಿಂದ ಸ್ನಾಯುಗಳಿಗೆ ರಿಲೀಫ್ ಸಿಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.
ತಲೆನೋವಿಗೆ ಚಿಕಿತ್ಸೆ ನೀಡಲು ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೆ ತಲೆ ಸ್ನಾನ ಮಾಡಿ. ನಿಮ್ಮ ತಲೆಯನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಬೆಚ್ಚಗಿನ ನೀರನ್ನು ಬಳಸಿ. ಇದು ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.
ದೀರ್ಘ ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಹೊರಗೆ ಬಿಡಿ. ಇದು ಒತ್ತಡ ಮತ್ತು ತಲೆನೋವು ನಿವಾರಿಸಲು ಉತ್ತಮ ತಂತ್ರವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.