Gold Rate Today Bangalore: ವಾರಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ

Bullion Market 2025 August 10th: 9,500 ರೂ ಸಮೀಪಕ್ಕೆ ದೌಡಾಯಿಸುತ್ತಿದ್ದ ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಸ್ವಲ್ಪ ತಗ್ಗಿದೆ. ಆಭರಣ ಚಿನ್ನದ ಬೆಲೆ 9,470 ರೂನಿಂದ 9,445 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 10,304 ರೂಗೆ ತಗ್ಗಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ 117 ರೂ ಇದೆ. ಚೆನ್ನೈ ಹಾಗೂ ಇತರ ಕೆಲವೆಡೆ ಬೆಲೆ 127 ರೂಗೆ ಇಳಿದಿದೆ.

Gold Rate Today Bangalore: ವಾರಾಂತ್ಯದಲ್ಲಿ ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Aug 10, 2025 | 10:47 AM

ಬೆಂಗಳೂರು, ಆಗಸ್ಟ್ 10: ಕಳೆದ ವಾರಾಂತ್ಯದಿಂದ ಮೊದಲುಗೊಂಡು ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ (gold rate) ಈ ವಾರಾಂತ್ಯದಲ್ಲಿ ಕಡಿಮೆಗೊಂಡಿದೆ. ಗ್ರಾಮ್​ಗೆ 25 ರೂನಷ್ಟು ಚಿನ್ನದ ಬೆಲೆ ತಗ್ಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 9,445 ರೂಗೆ ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಏರಿದರೆ, ಇನ್ನೂ ಕೆಲವೆಡೆ ತುಸು ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 94,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,03,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 94,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 8ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 94,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,03,040 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,280 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 94,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,03,040 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 94,450 ರೂ
  • ಚೆನ್ನೈ: 94,450 ರೂ
  • ಮುಂಬೈ: 94,450 ರೂ
  • ದೆಹಲಿ: 94,600 ರೂ
  • ಕೋಲ್ಕತಾ: 94,450 ರೂ
  • ಕೇರಳ: 94,450 ರೂ
  • ಅಹ್ಮದಾಬಾದ್: 94,500 ರೂ
  • ಜೈಪುರ್: 94,600 ರೂ
  • ಲಕ್ನೋ: 94,600 ರೂ
  • ಭುವನೇಶ್ವರ್: 94,450 ರೂ

ಇದನ್ನೂ ಓದಿ: ರೈತರ ಹಿತರಕ್ಷಣೆಗೆ ಪ್ರಧಾನಿ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ ಮಾಜಿ ಡಬ್ಲ್ಯುಎಚ್​ಒ ಡಿಡಿಜಿ ಸೌಮ್ಯಾ ಸ್ವಾಮಿನಾಥನ್

ಇದನ್ನೂ ಓದಿ
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,470 ರಿಂಗಿಟ್ (92,230 ರುಪಾಯಿ)
  • ದುಬೈ: 3,790 ಡಿರಾಮ್ (90,280 ರುಪಾಯಿ)
  • ಅಮೆರಿಕ: 1,055 ಡಾಲರ್ (92,300 ರುಪಾಯಿ)
  • ಸಿಂಗಾಪುರ: 1,359 ಸಿಂಗಾಪುರ್ ಡಾಲರ್ (92,500 ರುಪಾಯಿ)
  • ಕತಾರ್: 3,810 ಕತಾರಿ ರಿಯಾಲ್ (91,460 ರೂ)
  • ಸೌದಿ ಅರೇಬಿಯಾ: 3,870 ಸೌದಿ ರಿಯಾಲ್ (90,200 ರುಪಾಯಿ)
  • ಓಮನ್: 402 ಒಮಾನಿ ರಿಯಾಲ್ (91,350 ರುಪಾಯಿ)
  • ಕುವೇತ್: 308.70 ಕುವೇತಿ ದಿನಾರ್ (88,390 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,700 ರೂ
  • ಚೆನ್ನೈ: 12,700 ರೂ
  • ಮುಂಬೈ: 11,700 ರೂ
  • ದೆಹಲಿ: 11,700 ರೂ
  • ಕೋಲ್ಕತಾ: 11,700 ರೂ
  • ಕೇರಳ: 12,700 ರೂ
  • ಅಹ್ಮದಾಬಾದ್: 11,700 ರೂ
  • ಜೈಪುರ್: 11,700 ರೂ
  • ಲಕ್ನೋ: 11,700 ರೂ
  • ಭುವನೇಶ್ವರ್: 12,700 ರೂ
  • ಪುಣೆ: 11,700

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us