ಚಿನ್ನ
ಬೆಂಗಳೂರು, ಡಿಸೆಂಬರ್ 10: ಬೆಳ್ಳಿ ಬೆಲೆ ಹೊಸ ದಾಖಲೆ ಬರೆದಿದೆ. ಇಂದು ಬುಧವಾರ ಈ ಬಿಳಿ ಲೋಹದ ಬೆಲೆ ಒಮ್ಮೆಗೇ 9 ರೂ ಜಿಗಿತ ಆಗಿದೆ. ಬೆಂಗಳೂರು ಮೊದಲಾದೆಡೆ ಬೆಲೆ (Silver rates) 199 ರೂಗೆ ಏರಿದೆ. ತಮಿಳುನಾಡು, ಕೇರಳ ಮೊದಲಾದೆಡೆ ಬೆಲೆ 207 ರೂಗೆ ಜಂಪ್ ಆಗಿದೆ. ಇದು ಬೆಳ್ಳಿ ಬೆಲೆಯ ಐತಿಹಾಸಿಕ ದಾಖಲೆ ಬೆಲೆ. ಅಕ್ಟೋಬರ್ 15ರಂದು ಇದರ ಬೆಲೆ 190 ರೂ ಮುಟ್ಟಿ ದಾಖಲೆ ಬರೆದಿತ್ತು. ಇವತ್ತು ಆ ದಾಖಲೆಯನ್ನು ಮುರಿದಿದೆ ಬೆಳ್ಳಿ. ಇನ್ನು, ಚಿನ್ನದ ಬೆಲೆ ಇಂದು 20 ರೂಗಳಷ್ಟು ಅಲ್ಪ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,031 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,19,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 19,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 20,700 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 10ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,031 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,945 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,773 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,031 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,945 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,945 ರೂ
- ಚೆನ್ನೈ: 12,030 ರೂ
- ಮುಂಬೈ: 11,945 ರೂ
- ದೆಹಲಿ: 11,960 ರೂ
- ಕೋಲ್ಕತಾ: 11,945 ರೂ
- ಕೇರಳ: 11,945 ರೂ
- ಅಹ್ಮದಾಬಾದ್: 11,950 ರೂ
- ಜೈಪುರ್: 11,960 ರೂ
- ಲಕ್ನೋ: 11,960 ರೂ
- ಭುವನೇಶ್ವರ್: 11,945 ರೂ
ಇದನ್ನೂ ಓದಿ: ನವೆಂಬರ್ನಲ್ಲಿ ವಾಹನಗಳ ಮಾರಾಟ ಹೆಚ್ಚಳ; ಡಿಸೆಂಬರ್ನಲ್ಲೂ ಇದೇ ಟ್ರೆಂಡ್
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 537 ರಿಂಗಿಟ್ (11,723 ರುಪಾಯಿ)
- ದುಬೈ: 468.75 ಡಿರಾಮ್ (11,482 ರುಪಾಯಿ)
- ಅಮೆರಿಕ: 131 ಡಾಲರ್ (11,785 ರುಪಾಯಿ)
- ಸಿಂಗಾಪುರ: 170.40 ಸಿಂಗಾಪುರ್ ಡಾಲರ್ (11,823 ರುಪಾಯಿ)
- ಕತಾರ್: 468 ಕತಾರಿ ರಿಯಾಲ್ (11,552 ರೂ)
- ಸೌದಿ ಅರೇಬಿಯಾ: 478 ಸೌದಿ ರಿಯಾಲ್ (11,459 ರುಪಾಯಿ)
- ಓಮನ್: 49.35 ಒಮಾನಿ ರಿಯಾಲ್ (11,531 ರುಪಾಯಿ)
- ಕುವೇತ್: 38.44 ಕುವೇತಿ ದಿನಾರ್ (11,260 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 199 ರೂ
- ಚೆನ್ನೈ: 207 ರೂ
- ಮುಂಬೈ: 199 ರೂ
- ದೆಹಲಿ: 199 ರೂ
- ಕೋಲ್ಕತಾ: 199 ರೂ
- ಕೇರಳ: 207 ರೂ
- ಅಹ್ಮದಾಬಾದ್: 199 ರೂ
- ಜೈಪುರ್: 199 ರೂ
- ಲಕ್ನೋ: 199 ರೂ
- ಭುವನೇಶ್ವರ್: 207 ರೂ
- ಪುಣೆ: 199
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ