Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಹೊಸ ದಾಖಲೆ

Bullion Market 2025 October 10th: ಇಂದು ಶುಕ್ರವಾರ ಚಿನ್ನದ ಬೆಲೆ ಕಡಿಮೆ ಆದರೆ, ಬೆಳ್ಳಿ ಬೆಲೆ ಹೊಸ ದಾಖಲೆ ಬರೆದಿದೆ. 22 ಕ್ಯಾರಟ್ ಚಿನ್ನದ ಬೆಲೆ 11,380 ರೂನಿಂದ 11,210 ರೂಗೆ ಇಳಿದರೆ, 24 ಕ್ಯಾರಟ್ ಚಿನ್ನದ ಬೆಲೆ 12,229 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 170 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ 180 ರೂ ಆಗಿದೆ.

Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಹೊಸ ದಾಖಲೆ
ಚಿನ್ನ

Updated on: Oct 10, 2025 | 10:36 AM

ಬೆಂಗಳೂರು, ಅಕ್ಟೋಬರ್ 10: ಬೆಳ್ಳಿ ಬೆಲೆ ತೀವ್ರತರವಾಗಿ ಏರಿಕೆ ಆಗುತ್ತಿದೆ. ಕಳೆದ ಎರಡು ದಿನದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 10 ರೂನಷ್ಟು ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದರ ಬೆಲೆ 170 ರೂ ಮುಟ್ಟಿದೆ. ಚೆನ್ನೈ ಮೊದಲಾದ ಕಡೆ ಬೆಲೆ 180 ರೂ ಮೈಲಿಗಲ್ಲು ದಾಟಿದೆ. ಇಂದು ಶುಕ್ರವಾರ ಚಿನ್ನದ ಬೆಲೆಯಲ್ಲಿ (gold rate) ಇಳಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆಯಲ್ಲಿ185 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,12,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,22,290 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,12,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 10ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,229 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,210 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,172 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 170 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,229 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,210 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,210 ರೂ
  • ಚೆನ್ನೈ: 11,210 ರೂ
  • ಮುಂಬೈ: 11,210 ರೂ
  • ದೆಹಲಿ: 11,225 ರೂ
  • ಕೋಲ್ಕತಾ: 11,210 ರೂ
  • ಕೇರಳ: 11,210 ರೂ
  • ಅಹ್ಮದಾಬಾದ್: 11,215 ರೂ
  • ಜೈಪುರ್: 11,225 ರೂ
  • ಲಕ್ನೋ: 11,225 ರೂ
  • ಭುವನೇಶ್ವರ್: 11,210 ರೂ

ಇದನ್ನೂ ಓದಿ: ಜಗತ್ತಿನಲ್ಲಿ ಎಲ್ಲರೂ ಸಾಲಗಾರರೇ; ಹಾಗಾದ್ರೆ ಸಾಲ ಕೊಡೋರಾರು? ಪತನದತ್ತ ಹೋಗುತ್ತಿದೆಯಾ ಜಾಗತಿಕ ಆರ್ಥಿಕತೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 525 ರಿಂಗಿಟ್ (11,040 ರುಪಾಯಿ)
  • ದುಬೈ: 441.25 ಡಿರಾಮ್ (10,666 ರುಪಾಯಿ)
  • ಅಮೆರಿಕ: 125 ಡಾಲರ್ (11,098 ರುಪಾಯಿ)
  • ಸಿಂಗಾಪುರ: 160.40 ಸಿಂಗಾಪುರ್ ಡಾಲರ್ (10,970 ರುಪಾಯಿ)
  • ಕತಾರ್: 447.50 ಕತಾರಿ ರಿಯಾಲ್ (10,899 ರೂ)
  • ಸೌದಿ ಅರೇಬಿಯಾ: 457 ಸೌದಿ ರಿಯಾಲ್ (10,817 ರುಪಾಯಿ)
  • ಓಮನ್: 47.55 ಒಮಾನಿ ರಿಯಾಲ್ (10,965 ರುಪಾಯಿ)
  • ಕುವೇತ್: 35.97 ಕುವೇತಿ ದಿನಾರ್ (10,453 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 170 ರೂ
  • ಚೆನ್ನೈ: 180 ರೂ
  • ಮುಂಬೈ: 170 ರೂ
  • ದೆಹಲಿ: 170 ರೂ
  • ಕೋಲ್ಕತಾ: 170 ರೂ
  • ಕೇರಳ: 180 ರೂ
  • ಅಹ್ಮದಾಬಾದ್: 170 ರೂ
  • ಜೈಪುರ್: 170 ರೂ
  • ಲಕ್ನೋ: 170 ರೂ
  • ಭುವನೇಶ್ವರ್: 180 ರೂ
  • ಪುಣೆ: 170

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us