Gold Rates: ಆಭರಣ ಚಿನ್ನದ ಬೆಲೆ 14,010 ರೂ; ಬೆಳ್ಳಿ ಬೆಲೆ 260 ರೂ

Bullion Market 2026 April 12th: ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆಯಾದರೆ, ಬೆಳ್ಳಿ ಬೆಲೆ ಯಥಾಸ್ಥಿತಿ ತೋರಿದೆ. 22 ಕ್ಯಾರಟ್ ಚಿನ್ನದ ಬೆಲೆ 14,010 ರೂ ಇದೆ. 24 ಕ್ಯಾರಟ್ ಚಿನ್ನ 15,284 ರೂ ಬೆಲೆ ಹೊಂದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 260 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 265 ರೂ ಇದೆ.

Gold Rates: ಆಭರಣ ಚಿನ್ನದ ಬೆಲೆ 14,010 ರೂ; ಬೆಳ್ಳಿ ಬೆಲೆ 260 ರೂ
ಚಿನ್ನ

Updated on: Apr 12, 2026 | 10:25 AM

ಬೆಂಗಳೂರು, ಏಪ್ರಿಲ್ 12: ಚಿನ್ನದ ಬೆಲೆ ಅಕ್ಷರಶಃ ಡೋಲಾಯಮಾನ ಸ್ಥಿತಿಯಲ್ಲಿದ್ದು ಅತ್ತಿಂದಿತ್ತ ಓಲಾಡುತ್ತಿದೆ. ಕಳೆದ ಎರಡು ವಾರದಿಂದಲೂ ಇದರ ಬೆಲೆಯಲ್ಲಿ ಏರಿಳಿತ ನಿರಂತರವಾಗಿ ಆಗುತ್ತಿದೆ. ಈ ಮಧ್ಯೆ ಕಳೆದ 10 ದಿನದಲ್ಲಿ ಚಿನ್ನದ ಬೆಲೆ (Gold Rates) ಗ್ರಾಮ್​ಗೆ 355 ರೂಗಳಷ್ಟು ಏರಿಕೆ ಹೊಂದಿದೆ. ವಿದೇಶಗಳಲ್ಲೂ ಕಳೆದ ಕೆಲ ವಾರಗಳಿಂದ ಅಲ್ಪ ಏರಿಳಿತಗಳೇ ಹೆಚ್ಚಿವೆ. ಬೆಳ್ಳಿ ಬೆಲೆಯೂ ಬಹುತೇಕ ಇದೇ ವರ್ತನೆ ತೋರುತ್ತಿದೆ. ಕಳೆದ 10 ದಿನದಲ್ಲಿ ಇದರ ಬೆಲೆಯಲ್ಲಿ 10 ರೂ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,463 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,284 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,010 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,010 ರೂ
  • ಚೆನ್ನೈ: 14,100 ರೂ
  • ಮುಂಬೈ: 14,010 ರೂ
  • ದೆಹಲಿ: 14,025 ರೂ
  • ಕೋಲ್ಕತಾ: 14,010 ರೂ
  • ಕೇರಳ: 14,010 ರೂ
  • ಅಹ್ಮದಾಬಾದ್: 14,015 ರೂ
  • ಜೈಪುರ್: 14,025 ರೂ
  • ಲಕ್ನೋ: 14,025 ರೂ
  • ಭುವನೇಶ್ವರ್: 14,010 ರೂ

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 585 ರಿಂಗಿಟ್ (13,733 ರುಪಾಯಿ)
  • ದುಬೈ: 532.50 ಡಿರಾಮ್ (13,495 ರುಪಾಯಿ)
  • ಅಮೆರಿಕ: 149.50 ಡಾಲರ್ (13,917 ರುಪಾಯಿ)
  • ಸಿಂಗಾಪುರ: 188.50 ಸಿಂಗಾಪುರ್ ಡಾಲರ್ (13,775 ರುಪಾಯಿ)
  • ಕತಾರ್: 530.50 ಕತಾರಿ ರಿಯಾಲ್ (13,546 ರೂ)
  • ಸೌದಿ ಅರೇಬಿಯಾ: 541 ಸೌದಿ ರಿಯಾಲ್ (13,420 ರುಪಾಯಿ)
  • ಓಮನ್: 56.55 ಒಮಾನಿ ರಿಯಾಲ್ (13,673 ರುಪಾಯಿ)
  • ಕುವೇತ್: 43.71 ಕುವೇತಿ ದಿನಾರ್ (13,275 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us