AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

No Cash At Toll Plazas From Today: ದೇಶಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್​ಪ್ರೆಸ್​ವೇಗಳಲ್ಲಿರುವ ಟೋಲ್ ಬೂತ್​ಗಳಲ್ಲಿ ಟೋಲ್ ಪೇಮೆಂಟ್​ಗೆ ಕ್ಯಾಷ್ ನೀಡುವಂತಿಲ್ಲ. ಈ ಅವಕಾಶ ಏಪ್ರಿಲ್ 9ರಂದೇ ಮುಕ್ತಾಯವಾಗಿದೆ. ಇವತ್ತಿನಿಂದ ಪೂರ್ಣವಾದ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಜಾರಿಗೆ ಬಂದಿದೆ. ಟೋಲ್ ಬೂತ್​ಗಳಲ್ಲಿ ಫಾಸ್​ಟ್ಯಾಗ್ ಬಳಸಲೇ ಬೇಕು. ಫಾಸ್​ಟ್ಯಾಗ್ ಕೆಲಸ ಮಾಡದಿದ್ದರೆ ಡಿಜಿಟಲ್ ಪೇಮೆಂಟ್​ಗೆ ಮಾತ್ರವೇ ಅವಕಾಶ ಇರುವುದು.

ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ
ಟೋಲ್ ಬೂತ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2026 | 4:47 PM

Share

ನವದೆಹಲಿ, ಏಪ್ರಿಲ್ 10: ಹೆದ್ದಾರಿಗಳಲ್ಲಿರುವ ಟೋಲ್ ಬೂತ್​ಗಳಲ್ಲಿ ನೂರಕ್ಕೆ ನೂರು ಫಾಸ್​ಟ್ಯಾಗ್ (FASTag) ಕಡ್ಡಾಯ ಮಾಡಲಾಗಿದೆ. ಇವತ್ತಿನಿಂದಲೇ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ (Digital toll collection system) ಜಾರಿಯಾಗಿದೆ. ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್​ಪ್ರೆಸ್​ವೇಗಳಲ್ಲಿ ಇರುವ ಟೋಲ್ ಬೂತ್​ಗಳಲ್ಲಿ ಫಾಸ್​ಟ್ಯಾಗ್ ಮೂಲಕವೇ ವಾಹನಗಳು ಟೋಲ್ ಪಾವತಿಸಬೇಕು. ಫಾಸ್​ಟ್ಯಾಗ್ ಇಲ್ಲದವರು ಟೂಲ್ ಬೂತ್​ಗಳಲ್ಲಿ ಕ್ಯಾಷ್ ನೀಡಿ ಪಾವತಿಸುವ ಅವಕಾಶ ನಿನ್ನೆಯೇ ಮುಕ್ತಾಯಗೊಂಡಿದೆ.

ಫಾಸ್​ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಬೂತ್​ಗಳಲ್ಲಿ ವಾಹನದಟ್ಟನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿತ್ತು. ಟೋಲ್ ಬೂತ್​ಗಳಲ್ಲಿ ಈ ವಾಹನದಟ್ಟನೆ ಕಡಿಮೆ ಮಾಡಲು, ಕಾಯುವಿಕೆ ಅವಧಿ ಕಡಿಮೆ ಮಾಡಲು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪೂರ್ಣ ಮಟ್ಟದಲ್ಲಿ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಅನ್ನು ಅನುಷ್ಠಾನಕ್ಕೆ ತಂದಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

ಫಾಸ್​ಟ್ಯಾಗ್ ಕೆಲಸ ಮಾಡದಿದ್ದಾಗ?

ಎಲ್ಲಾ ವಾಹನಗಳಿಗೂ ಫಾಸ್​ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ. ಫಾಸ್​ಟ್ಯಾಗ್ ಅಳವಡಿಕೆ ಆಗಿದ್ದೂ ಅದು ಸಕ್ರಿಯವಾಗಿಲ್ಲದಿದ್ದರೆ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ವಾಹನ ಸವಾರರು ಕ್ಯಾಷ್ ಮೂಲಕ ಟೋಲ್ ಪೇಮೆಂಟ್ ಮಾಡುತ್ತಿದ್ದರು? ಈಗ ಕ್ಯಾಷ್ ಪೇಮೆಂಟ್​ಗೆ ಅವಕಾಶ ಇಲ್ಲದಿರುವಾಗ ಏನು ಮಾಡಬೇಕು? ಆಗ ಕ್ಯಾಷ್ ಬದಲು ಯುಪಿಐ ಅಥವಾ ಇತರ ಡಿಜಿಟಲ್ ವಿಧಾನಗಳಿಂದ ಟೋಲ್ ಪೇಮೆಂಟ್ ಮಾಡಬಹುದು. ಇದಕ್ಕೆ ಹೆಚ್ಚಿನ ಟೋಲ್ ವಿಧಿಸಲಾಗುತ್ತದೆ. ಶೇ. 125ರಷ್ಟು ಟೋಲ್ ಕಟ್ಟಬೇಕಾಗುತ್ತದೆ. ಅಂದರೆ, 100 ರೂ ಇರುವ ಟೋಲ್​ಗೆ 125 ರೂ ಪಾವತಿಸಬೇಕಾಗುತ್ತದೆ.

ಟೋಲ್ ಬೂತ್​ಗಳಲ್ಲಿ ವಿನಾಯಿತಿ; ನಿಯಮಗಳೀಗ ಕಠಿಣ

ಟೋಲ್ ಬೂತ್​ಗಳಲ್ಲಿ ವಿವಿಧ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರು ಹೇಳಿಕೊಂಡು ಬಹಳ ಜನರು ಟೋಲ್ ಕಟ್ಟುವುದಿಲ್ಲ. ಸಾಕಷ್ಟು ಕಡೆ ಮಾರಾಮಾರಿಯೇ ಆಗಿ ಹೋಗಿ ಸಾವುನೋವುಗಳು ಸಂಭವಿಸಿರುವುದಿದೆ. ಇದನ್ನು ತಪ್ಪಿಸಲು ಈಗ ಸರ್ಕಾರ ಬಿಗಿ ನಿಯಮ ತಂದಿದೆ. ಯಾವುದೇ ವ್ಯಕ್ತಿಗಳಿಗೆ ಟೋಲ್ ಎಕ್ಸೆಂಪ್ಷನ್ ಸಿಗುವುದಿಲ್ಲ. ನಿರ್ದಿಷ್ಟಪಡಿಸಿದ ವಾಹನಗಳಿಗೆ ಮಾತ್ರವೇ ಈ ವಿನಾಯಿತಿ ಕೊಡಲಾಗುತ್ತದೆ.

ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಫಾಸ್​ಟ್ಯಾಗ್ ವಾರ್ಷಿಕ ಪಾಸ್

ಹೆದ್ದಾರಿಗಳನ್ನು ಸಾಕಷ್ಟು ಬಳಸುವವರಿಗೆ, ಅಂದರೆ ನಿಯಮಿತವಾಗಿ ಹೆದ್ದಾರಿ ಬಳಸುವವರಿಗೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನುಕೂಲವಾಗಲಿದೆ. ಖಾಸಗಿ ಕಾರುಗಳಿಗೆ ಈ ವಾರ್ಷಿಕ ಪಾಸ್ ನೀಡಲಾಗುತ್ತದೆ. ವರ್ಷದಲ್ಲಿ 200 ಟೋಲ್ ಕ್ರಾಸಿಂಗ್ ಮಾಡಬಹುದು. ಈ ಪಾಸ್ ಬೆಲೆ 3,000 ರೂ ಇದ್ದದ್ದು 3,075ಕ್ಕೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ