Gold Rate Today Bangalore: ಏರಿಕೆ ನಿಲ್ಲದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ

Bullion Market 2025 October 13th: ಇಂದು ಸೋಮವಾರ ಚಿನ್ನದ ಬೆಲೆ 100 ರೂ ಏರಿದರೆ, ಬೆಳ್ಳಿ ಬೆಲೆ ಬರೋಬ್ಬರಿ 8 ರೂಗಳಷ್ಟು ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 11,390 ರೂನಿಂದ 11,495 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 12,540 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ದಾಖಲೆಯ 185 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ 195 ರೂ ಆಗಿದೆ.

Gold Rate Today Bangalore: ಏರಿಕೆ ನಿಲ್ಲದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ
ಚಿನ್ನ

Updated on: Oct 13, 2025 | 12:00 PM

ಬೆಂಗಳೂರು, ಅಕ್ಟೋಬರ್ 13: ಅಮೂಲ್ಯ ಲೋಹಗಳಿಗೆ ಬೇಡಿಕೆ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ಚಿನ್ನದ ಬೆಲೆ ನಾಗಾಲೋಟ ಮುಂದುವರಿದಿದೆ. ಬೆಳ್ಳಿ ಬೆಲೆಯಂತೂ ಅತೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಚೆನ್ನೈನಂತಹ ನಗರಗಳಲ್ಲಿ ಅದರ ಬೆಲೆ 200 ರೂ ಮೈಲಿಗಲ್ಲು ಮುಟ್ಟುವತ್ತ ಸಾಗುತ್ತಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ (gold rate) ಇಂದು ಸೋಮವಾರ ಸ್ವಲ್ಪ ಹೆಚ್ಚಳವಾಗಿದೆ. ಭಾರತದಲ್ಲಿ 100 ರೂನಷ್ಟು ಬೆಲೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,14,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,14,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 18,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,540 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,495 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,405 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 185 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,540 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,495 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 185 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,495 ರೂ
  • ಚೆನ್ನೈ: 11,495 ರೂ
  • ಮುಂಬೈ: 11,495 ರೂ
  • ದೆಹಲಿ: 11,510 ರೂ
  • ಕೋಲ್ಕತಾ: 11,495 ರೂ
  • ಕೇರಳ: 11,495 ರೂ
  • ಅಹ್ಮದಾಬಾದ್: 11,500 ರೂ
  • ಜೈಪುರ್: 11,510 ರೂ
  • ಲಕ್ನೋ: 11,510 ರೂ
  • ಭುವನೇಶ್ವರ್: 11,495 ರೂ

ಇದನ್ನೂ ಓದಿ: ದೇಶದ ಆರ್ಥಿಕ ಗಾತ್ರಕ್ಕೆ ಸಮನಾಗಿದೆ ಭಾರತೀಯರ ಬಳಿ ಇರುವ ಚಿನ್ನದ ಮೌಲ್ಯ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 534 ರಿಂಗಿಟ್ (11,220 ರುಪಾಯಿ)
  • ದುಬೈ: 448.25 ಡಿರಾಮ್ (10,831 ರುಪಾಯಿ)
  • ಅಮೆರಿಕ: 125 ಡಾಲರ್ (11,094 ರುಪಾಯಿ)
  • ಸಿಂಗಾಪುರ: 163.10 ಸಿಂಗಾಪುರ್ ಡಾಲರ್ (11,164 ರುಪಾಯಿ)
  • ಕತಾರ್: 448 ಕತಾರಿ ರಿಯಾಲ್ (10,908 ರೂ)
  • ಸೌದಿ ಅರೇಬಿಯಾ: 456 ಸೌದಿ ರಿಯಾಲ್ (10,790 ರುಪಾಯಿ)
  • ಓಮನ್: 47.25 ಒಮಾನಿ ರಿಯಾಲ್ (10,892 ರುಪಾಯಿ)
  • ಕುವೇತ್: 36.62 ಕುವೇತಿ ದಿನಾರ್ (10,591 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 185 ರೂ
  • ಚೆನ್ನೈ: 195 ರೂ
  • ಮುಂಬೈ: 185 ರೂ
  • ದೆಹಲಿ: 185 ರೂ
  • ಕೋಲ್ಕತಾ: 185 ರೂ
  • ಕೇರಳ: 195 ರೂ
  • ಅಹ್ಮದಾಬಾದ್: 185 ರೂ
  • ಜೈಪುರ್: 185 ರೂ
  • ಲಕ್ನೋ: 185 ರೂ
  • ಭುವನೇಶ್ವರ್: 195 ರೂ
  • ಪುಣೆ: 185

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us