Gold Rate Today Bangalore: ಚಿನ್ನದ ಬೆಲೆ ಗ್ರಾಮ್​ಗೆ 15 ರೂ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2025 July 14th: ಇಂದು ಸೋಮವಾರ ಚಿನ್ನದ ಬೆಲೆ ಏರಿಕೆ ಆದರೆ, ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 9,140 ರೂ ಇದ್ದದ್ದು 9,155 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 9,988 ರೂ ಮುಟ್ಟಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಇತ್ಯಾದಿ ಕಡೆ 115 ರೂ ಇದ್ದರೆ, ಚೆನ್ನೈ, ಕೇರಳ ಮೊದಲಾದೆಡೆ ದಾಖಲೆಯ 125 ರೂ ಇದೆ.

Gold Rate Today Bangalore: ಚಿನ್ನದ ಬೆಲೆ ಗ್ರಾಮ್​ಗೆ 15 ರೂ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Jul 14, 2025 | 10:56 AM

ಬೆಂಗಳೂರು, ಜುಲೈ 14: ಚಿನ್ನದ ಬೆಲೆಯು ಈ ವಾರ ಏರಿಕೆಯೊಂದಿಗೆ ಆರಂಭವಿಸಿದೆ. ಆಭರಣ ಚಿನ್ನದ ಬೆಲೆ ಇವತ್ತು ಸೋಮವಾರ ಗ್ರಾಮ್​​ಗೆ 15 ರೂನಷ್ಟು ಹೆಚ್ಚಳ ಆಗಿದೆ. ಬೆಳ್ಳಿ ಬೆಲೆಯಲ್ಲಿ (silver rates) ಬದಲಾವಣೆ ಆಗಿಲ್ಲ. ದಾಖಲೆಯ 115 ರೂನಲ್ಲಿ ಮುಂದುವರಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 91,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,880 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 91,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,550 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,880 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,910 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,150 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,550 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,880 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,150 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 91,550 ರೂ
  • ಚೆನ್ನೈ: 91,550 ರೂ
  • ಮುಂಬೈ: 91,550 ರೂ
  • ದೆಹಲಿ: 91,700 ರೂ
  • ಕೋಲ್ಕತಾ: 91,550 ರೂ
  • ಕೇರಳ: 91,550 ರೂ
  • ಅಹ್ಮದಾಬಾದ್: 91,600 ರೂ
  • ಜೈಪುರ್: 91,700 ರೂ
  • ಲಕ್ನೋ: 91,700 ರೂ
  • ಭುವನೇಶ್ವರ್: 91,550 ರೂ

ಇದನ್ನೂ ಓದಿ: ಆರ್​ಬಿಐನ ಗೋಲ್ಡ್ ಸ್ಕೀಮ್; ಐದು ವರ್ಷದಲ್ಲಿ ಹಣ ಡಬಲ್; 2020ರ ಸರಣಿಯಲ್ಲಿ ಹೂಡಿಕೆ ಮಾಡಿದವರಿಗೆ ಅರ್ಲಿ ರಿಡೆಂಪ್ಷನ್ ಅವಕಾಶ

ಇದನ್ನೂ ಓದಿ
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,500 ರಿಂಗಿಟ್ (90,970 ರುಪಾಯಿ)
  • ದುಬೈ: 3,745 ಡಿರಾಮ್ (87,720 ರುಪಾಯಿ)
  • ಅಮೆರಿಕ: 1,045 ಡಾಲರ್ (89,890 ರುಪಾಯಿ)
  • ಸಿಂಗಾಪುರ: 1,348 ಸಿಂಗಾಪುರ್ ಡಾಲರ್ (90,480 ರುಪಾಯಿ)
  • ಕತಾರ್: 3,765 ಕತಾರಿ ರಿಯಾಲ್ (88,840 ರೂ)
  • ಸೌದಿ ಅರೇಬಿಯಾ: 3,830 ಸೌದಿ ರಿಯಾಲ್ (87,840 ರುಪಾಯಿ)
  • ಓಮನ್: 397 ಒಮಾನಿ ರಿಯಾಲ್ (88,720 ರುಪಾಯಿ)
  • ಕುವೇತ್: 304.60 ಕುವೇತಿ ದಿನಾರ್ (85,730 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,500 ರೂ
  • ಚೆನ್ನೈ: 12,500 ರೂ
  • ಮುಂಬೈ: 11,500 ರೂ
  • ದೆಹಲಿ: 11,500 ರೂ
  • ಕೋಲ್ಕತಾ: 11,500 ರೂ
  • ಕೇರಳ: 12,500 ರೂ
  • ಅಹ್ಮದಾಬಾದ್: 11,500 ರೂ
  • ಜೈಪುರ್: 11,500 ರೂ
  • ಲಕ್ನೋ: 11,500 ರೂ
  • ಭುವನೇಶ್ವರ್: 12,500 ರೂ
  • ಪುಣೆ: 11,500

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us