Gold Rate Today Bangalore: 8,805 ರೂ ಮುಟ್ಟಿದ ಆಭರಣ ಚಿನ್ನದ ಬೆಲೆ

Bullion Market 2025 May 14th: ನಿನ್ನೆ, ಮೊನ್ನೆ ಇಳಿದಿದ್ದ ಚಿನ್ನದ ಬೆಲೆ ಇವತ್ತು ಬುಧವಾರ ತುಸು ಏರಿಕೆ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,805 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 9,606 ರೂ ತಲುಪಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದ ಕಡೆ ಗ್ರಾಮ್​​ಗೆ 97.90 ರೂ ಇದೆ. ಚೆನ್ನೈ ಮೊದಲಾದ ಕಡೆ 109 ರೂ ಇದೆ.

Gold Rate Today Bangalore: 8,805 ರೂ ಮುಟ್ಟಿದ ಆಭರಣ ಚಿನ್ನದ ಬೆಲೆ
ಚಿನ್ನ

Updated on: May 14, 2025 | 10:33 AM

ಬೆಂಗಳೂರು, ಮೇ 14: ಚಿನ್ನದ ಬೆಲೆ ಏರಿಳಿತಗಳು ನಿರಂತರವಾಗಿ ನಡೆಯುತ್ತಿದೆ. ಇವತ್ತು ಬುಧವಾರ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,800 ರೂ ಗಡಿ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ (Gold rate today) 9,600 ರೂ ಗಡಿಯಲ್ಲಿದೆ. ಆದರೆ, ಚಿನಿವಾರಪೇಟೆಯಲ್ಲಿ ಮುಂದಿನ ದಿನಗಳಲ್ಲಿ ಏರಿಕೆ ಅಥವಾ ಇಳಿಕೆಯ ನಿರ್ದಿಷ್ಟ ಟ್ರೆಂಡ್ ಕಂಡುಬಂದಿಲ್ಲ. ವಿದೇಶಗಳಲ್ಲೂ ಚಿನ್ನ, ಬೆಳ್ಳಿ ಬೆಲೆಯಲ್ಲಿ ಅಂತಹ ವ್ಯತ್ಯಯಗಳಾಗಿಲ್ಲ. ಸಹಜ ಸ್ಥಿತಿಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಚಿನ್ನದ ಬೆಲೆಯಲ್ಲಿ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 88,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 96,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,790 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 88,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,790 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 88,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 96,060 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,040 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 979 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 88,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 96,060 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 979 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 88,050 ರೂ
  • ಚೆನ್ನೈ: 88,050 ರೂ
  • ಮುಂಬೈ: 88,050 ರೂ
  • ದೆಹಲಿ: 88,200 ರೂ
  • ಕೋಲ್ಕತಾ: 88,050 ರೂ
  • ಕೇರಳ: 88,050 ರೂ
  • ಅಹ್ಮದಾಬಾದ್: 88,100 ರೂ
  • ಜೈಪುರ್: 88,200 ರೂ
  • ಲಕ್ನೋ: 88,200 ರೂ
  • ಭುವನೇಶ್ವರ್: 88,050 ರೂ

ಇದನ್ನೂ ಓದಿ: ಭಾರತದ ರೀಟೇಲ್ ಹಣದುಬ್ಬರ ಏಪ್ರಿಲ್​​ನಲ್ಲಿ ಶೇ. 3.16; ಇದು 6 ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ದರ

ಇದನ್ನೂ ಓದಿ
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,400 ರಿಂಗಿಟ್ (86,890 ರುಪಾಯಿ)
  • ದುಬೈ: 3,602.50 ಡಿರಾಮ್ (83,550 ರುಪಾಯಿ)
  • ಅಮೆರಿಕ: 980 ಡಾಲರ್ (83,520 ರುಪಾಯಿ)
  • ಸಿಂಗಾಪುರ: 1,319 ಸಿಂಗಾಪುರ್ ಡಾಲರ್ (86,380 ರುಪಾಯಿ)
  • ಕತಾರ್: 3,655 ಕತಾರಿ ರಿಯಾಲ್ (85,430 ರೂ)
  • ಸೌದಿ ಅರೇಬಿಯಾ: 3,700 ಸೌದಿ ರಿಯಾಲ್ (84,050 ರುಪಾಯಿ)
  • ಓಮನ್: 383.50 ಒಮಾನಿ ರಿಯಾಲ್ (84,870 ರುಪಾಯಿ)
  • ಕುವೇತ್: 298.90 ಕುವೇತಿ ದಿನಾರ್ (82,870 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,790 ರೂ
  • ಚೆನ್ನೈ: 10,900 ರೂ
  • ಮುಂಬೈ: 9,790 ರೂ
  • ದೆಹಲಿ: 9,790 ರೂ
  • ಕೋಲ್ಕತಾ: 9,790 ರೂ
  • ಕೇರಳ: 10,900 ರೂ
  • ಅಹ್ಮದಾಬಾದ್: 9,790 ರೂ
  • ಜೈಪುರ್: 9,790 ರೂ
  • ಲಕ್ನೋ: 9,790 ರೂ
  • ಭುವನೇಶ್ವರ್: 10,900 ರೂ
  • ಪುಣೆ: 9,790

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us