Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳ ದಾಖಲೆ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2025 October 14th: ಚಿನ್ನದ ಬೆಲೆ ಇಂದು ಮಂಗಳವಾರ ಗ್ರಾಮ್​ಗೆ 300 ರೂ ಹೆಚ್ಚಿದೆ. ಬೆಳ್ಳಿ ಬೆಲೆ 4 ರೂ ಏರಿಕೆ ಆಗಿದೆ. ಆಭರಣ ಚಿನ್ನದ ಬೆಲೆ 11,495 ರೂನಿಂದ 11,795 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,868 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ದಾಖಲೆಯ 189 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ ಬರೋಬ್ಬರಿ 206 ರೂ ಏರಿಕೆ ಆಗಿದೆ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳ ದಾಖಲೆ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Oct 14, 2025 | 10:08 AM

ಬೆಂಗಳೂರು, ಅಕ್ಟೋಬರ್ 14: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಪೈಪೋಟಿ ನಿಲ್ಲುತ್ತಲೇ ಇಲ್ಲ. ದೇಶದಲ್ಲಿ ಚಿನ್ನದ ಬೆಲೆ ಒಂದು ಗ್ರಾಮ್​ಗೆ ಬರೋಬ್ಬರಿ 300 ರೂಗಳಷ್ಟು ಹೆಚ್ಚಾಗಿದೆ. ಆಭರಣ ಚಿನ್ನದ ಬೆಲೆ (gold rate) ಇದೇ ಮೊದಲ ಬಾರಿಗೆ 11,800 ರೂ ಗಡಿಯತ್ತ ಸಾಗುತ್ತಿದೆ. ಅಪರಂಜಿ ಚಿನ್ನದ ಬೆಲೆ 12,800 ರೂ ಗಡಿ ದಾಟಿದೆ. ವಿದೇಶಗಳಿಗಿಂತ ಭಾರತದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಬೆಳ್ಳಿಯಂತೂ ಸಿಕ್ಕಾಪಟ್ಟೆ ವೇಗದಲ್ಲಿ ಏರುವುದು ಮುಂದುವರಿದಿದೆ. ಇಂದೂ ಕೂಡ ಗ್ರಾಮ್​ಗೆ 4 ರೂ ಹೆಚ್ಚಿದೆ. ಚೆನ್ನೈ ಮೊದಲಾದ ಕಡೆ ಬೆಲೆ 200 ರೂ ಗಡಿ ದಾಟಿ ಹೊಸ ಇತಿಹಾಸ ಸೃಷ್ಟಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,17,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,28,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,17,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 18,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 20,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,868 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,795 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,651 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 189 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,868 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,795 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 189 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,795 ರೂ
  • ಚೆನ್ನೈ: 11,795 ರೂ
  • ಮುಂಬೈ: 11,795 ರೂ
  • ದೆಹಲಿ: 11,810 ರೂ
  • ಕೋಲ್ಕತಾ: 11,795 ರೂ
  • ಕೇರಳ: 11,795 ರೂ
  • ಅಹ್ಮದಾಬಾದ್: 11,800 ರೂ
  • ಜೈಪುರ್: 11,810 ರೂ
  • ಲಕ್ನೋ: 11,810 ರೂ
  • ಭುವನೇಶ್ವರ್: 11,795 ರೂ

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಹಣದುಬ್ಬರ ಕೇವಲ ಶೇ 1.54; ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆ ಮಟ್ಟ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 534 ರಿಂಗಿಟ್ (11,218 ರುಪಾಯಿ)
  • ದುಬೈ: 456.75 ಡಿರಾಮ್ (11,040 ರುಪಾಯಿ)
  • ಅಮೆರಿಕ: 127.50 ಡಾಲರ್ (11,318 ರುಪಾಯಿ)
  • ಸಿಂಗಾಪುರ: 167.40 ಸಿಂಗಾಪುರ್ ಡಾಲರ್ (11,040 ರುಪಾಯಿ)
  • ಕತಾರ್: 456.50 ಕತಾರಿ ರಿಯಾಲ್ (11,117 ರೂ)
  • ಸೌದಿ ಅರೇಬಿಯಾ: 465 ಸೌದಿ ರಿಯಾಲ್ (11,006 ರುಪಾಯಿ)
  • ಓಮನ್: 48.35 ಒಮಾನಿ ರಿಯಾಲ್ (11,148 ರುಪಾಯಿ)
  • ಕುವೇತ್: 37.46 ಕುವೇತಿ ದಿನಾರ್ (10,836 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 189 ರೂ
  • ಚೆನ್ನೈ: 206 ರೂ
  • ಮುಂಬೈ: 189 ರೂ
  • ದೆಹಲಿ: 189 ರೂ
  • ಕೋಲ್ಕತಾ: 189 ರೂ
  • ಕೇರಳ: 206 ರೂ
  • ಅಹ್ಮದಾಬಾದ್: 189 ರೂ
  • ಜೈಪುರ್: 189 ರೂ
  • ಲಕ್ನೋ: 189 ರೂ
  • ಭುವನೇಶ್ವರ್: 206 ರೂ
  • ಪುಣೆ: 189

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us