Gold Rate Today Bangalore: ಮತ್ತೆ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ

Bullion Market 2025 December 15th: ಇಂದು ಸೋಮವಾರ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏರಿವೆ. ಚಿನ್ನದ ಬೆಲೆ 75 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 3 ರೂ ಹಿಗ್ಗಿದೆ. ಆಭರಣ ಚಿನ್ನದ ಬೆಲೆ 12,275 ರೂನಿಂದ 12,350 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 13,473 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 201 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 213 ರೂ ಆಗಿದೆ.

Gold Rate Today Bangalore: ಮತ್ತೆ ಏರಿದ ಚಿನ್ನ, ಬೆಳ್ಳಿ ಬೆಲೆಗಳು; ಇಲ್ಲಿದೆ ದರಪಟ್ಟಿ
ಚಿನ್ನ

Updated on: Dec 15, 2025 | 10:23 AM

ಬೆಂಗಳೂರು, ಡಿಸೆಂಬರ್ 15: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಏರಿಕೆ ಕಂಡಿವೆ. ಚಿನ್ನದ ಬೆಲೆ (gold rate) ಸೋಮವಾರ ಗ್ರಾಮ್​ಗೆ 75 ರೂಗಳಷ್ಟು ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ಬೆಲೆ 13,400 ರೂ ಗಡಿ ದಾಟಿ ಈಗ 13,500 ರೂ ಗಡಿ ಸಮೀಪಕ್ಕೆ ದೌಡಾಯಿಸಿದೆ. ಆಭರಣ ಚಿನ್ನದ ಬೆಲೆಯೂ 12,350 ರೂ ಮುಟ್ಟಿದೆ. ವಿದೇಶಗಳಲ್ಲೂ ಹಲವೆಡೆ ಬೆಲೆ ಏರಿದೆ. ಇನ್ನು, ಬೆಳ್ಳಿ ಬೆಲೆಯೂ ಮೂರು ರೂ ಹೆಚ್ಚಳಗೊಂಡು, ಬೆಂಗಳೂರಿನಲ್ಲಿ ಇದರ ಬೆಲೆ 200 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,23,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,34,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,23,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 20,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 21,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,473 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,350 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,105 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 201 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,473 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,350 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 201 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,350 ರೂ
  • ಚೆನ್ನೈ: 12,460 ರೂ
  • ಮುಂಬೈ: 12,350 ರೂ
  • ದೆಹಲಿ: 12,365 ರೂ
  • ಕೋಲ್ಕತಾ: 12,350 ರೂ
  • ಕೇರಳ: 12,350 ರೂ
  • ಅಹ್ಮದಾಬಾದ್: 12,355 ರೂ
  • ಜೈಪುರ್: 12,365 ರೂ
  • ಲಕ್ನೋ: 12,365 ರೂ
  • ಭುವನೇಶ್ವರ್: 12,350 ರೂ

ಇದನ್ನೂ ಓದಿ: ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 553 ರಿಂಗಿಟ್ (12,253 ರುಪಾಯಿ)
  • ದುಬೈ: 479.75 ಡಿರಾಮ್ (11,835 ರುಪಾಯಿ)
  • ಅಮೆರಿಕ: 133.50 ಡಾಲರ್ (12,097 ರುಪಾಯಿ)
  • ಸಿಂಗಾಪುರ: 173.90 ಸಿಂಗಾಪುರ್ ಡಾಲರ್ (12,200 ರುಪಾಯಿ)
  • ಕತಾರ್: 478 ಕತಾರಿ ರಿಯಾಲ್ (11,885 ರೂ)
  • ಸೌದಿ ಅರೇಬಿಯಾ: 487 ಸೌದಿ ರಿಯಾಲ್ (11,760 ರುಪಾಯಿ)
  • ಓಮನ್: 50.50 ಒಮಾನಿ ರಿಯಾಲ್ (11,886 ರುಪಾಯಿ)
  • ಕುವೇತ್: 39.11 ಕುವೇತಿ ದಿನಾರ್ (11,600 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 201 ರೂ
  • ಚೆನ್ನೈ: 213 ರೂ
  • ಮುಂಬೈ: 201 ರೂ
  • ದೆಹಲಿ: 201 ರೂ
  • ಕೋಲ್ಕತಾ: 201 ರೂ
  • ಕೇರಳ: 213 ರೂ
  • ಅಹ್ಮದಾಬಾದ್: 201 ರೂ
  • ಜೈಪುರ್: 201 ರೂ
  • ಲಕ್ನೋ: 201 ರೂ
  • ಭುವನೇಶ್ವರ್: 213 ರೂ
  • ಪುಣೆ: 201

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us