Gold Rate Today Bangalore: ವಾರದಲ್ಲಿ ಗ್ರಾಮ್​ಗೆ 195 ರೂ ಇಳಿದೆ ಚಿನ್ನದ ಬೆಲೆ

Bullion Market 2025 August 17th: ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 195 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 80 ಪೈಸೆ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,280 ರೂನಿಂದ 9,275 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 10,118 ರೂಗೆ ಇಳಿದಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ 116.20 ರೂಗೆ ಏರಿದರೆ, ಚೆನ್ನೈ ಇತ್ಯಾದಿ ಕಡೆ ಬೆಲೆ 126.20 ರೂ ಆಗಿದೆ.

Gold Rate Today Bangalore: ವಾರದಲ್ಲಿ ಗ್ರಾಮ್​ಗೆ 195 ರೂ ಇಳಿದೆ ಚಿನ್ನದ ಬೆಲೆ
ಚಿನ್ನ

Updated on: Aug 17, 2025 | 10:51 AM

ಬೆಂಗಳೂರು, ಆಗಸ್ಟ್ 17: ಕಳೆದ ವಾರಾಂತ್ಯದಲ್ಲಿ ಶುರುವಾದ ಚಿನ್ನದ ಬೆಲೆ (gold rate) ಇಳಿಕೆ ಈ ವಾರಾಂತ್ಯದವರೆಗೂ ಮುಂದುವರಿದಿದೆ. ಒಂದು ವಾರದಲ್ಲಿ ಗ್ರಾಮ್​ಗೆ ಬಹುತೇಕ 200 ರೂನಷ್ಟು ಕಡಿಮೆ ಆಗಿದೆ. 9,470 ರೂ ಇದ್ದ ಅದರ ಬೆಲೆ 9,275 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಈ ವಾರಾಂತ್ಯದಲ್ಲಿ ಗ್ರಾಮ್​ಗೆ 20 ಪೈಸೆ ಏರಿಕೆಯಾದರೂ ಕಳೆದ ಹತ್ತು ದಿನದಲ್ಲಿ ಅದರ ಬೆಲೆ ಗ್ರಾಮ್​ಗೆ 80 ಪೈಸೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,620 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,620 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 17ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,180 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,890 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,180 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,160 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,750 ರೂ
  • ಚೆನ್ನೈ: 92,750 ರೂ
  • ಮುಂಬೈ: 92,750 ರೂ
  • ದೆಹಲಿ: 92,900 ರೂ
  • ಕೋಲ್ಕತಾ: 92,750 ರೂ
  • ಕೇರಳ: 92,750 ರೂ
  • ಅಹ್ಮದಾಬಾದ್: 92,800 ರೂ
  • ಜೈಪುರ್: 92,900 ರೂ
  • ಲಕ್ನೋ: 92,900 ರೂ
  • ಭುವನೇಶ್ವರ್: 92,750 ರೂ

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದಂದು ಎಚ್​ಡಿಎಫ್​ಸಿ ಎಂಎಫ್​ನಿಂದ ದೊಡ್ಡ ಹೆಜ್ಜೆ; ‘ಬರ್ನಿ ಸೆ ಆಜಾದಿ’ 5ನೇ ಆವೃತ್ತಿಗೆ ಚಾಲನೆ

ಇದನ್ನೂ ಓದಿ
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,370 ರಿಂಗಿಟ್ (90,770 ರುಪಾಯಿ)
  • ದುಬೈ: 3,722.50 ಡಿರಾಮ್ (88,690 ರುಪಾಯಿ)
  • ಅಮೆರಿಕ: 1,035 ಡಾಲರ್ (90,580 ರುಪಾಯಿ)
  • ಸಿಂಗಾಪುರ: 1,333 ಸಿಂಗಾಪುರ್ ಡಾಲರ್ (90,940 ರುಪಾಯಿ)
  • ಕತಾರ್: 3,745 ಕತಾರಿ ರಿಯಾಲ್ (89,920 ರೂ)
  • ಸೌದಿ ಅರೇಬಿಯಾ: 3,800 ಸೌದಿ ರಿಯಾಲ್ (88,620 ರುಪಾಯಿ)
  • ಓಮನ್: 395 ಒಮಾನಿ ರಿಯಾಲ್ (89,780 ರುಪಾಯಿ)
  • ಕುವೇತ್: 302.90 ಕುವೇತಿ ದಿನಾರ್ (86,760 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,620 ರೂ
  • ಚೆನ್ನೈ: 12,620 ರೂ
  • ಮುಂಬೈ: 11,620 ರೂ
  • ದೆಹಲಿ: 11,620 ರೂ
  • ಕೋಲ್ಕತಾ: 11,620 ರೂ
  • ಕೇರಳ: 12,620 ರೂ
  • ಅಹ್ಮದಾಬಾದ್: 11,620 ರೂ
  • ಜೈಪುರ್: 11,620 ರೂ
  • ಲಕ್ನೋ: 11,620 ರೂ
  • ಭುವನೇಶ್ವರ್: 12,620 ರೂ
  • ಪುಣೆ: 11,620

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us