AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC MF: ಸ್ವಾತಂತ್ರ್ಯೋತ್ಸವದಂದು ಎಚ್​ಡಿಎಫ್​ಸಿ ಎಂಎಫ್​ನಿಂದ ದೊಡ್ಡ ಹೆಜ್ಜೆ; ‘ಬರ್ನಿ ಸೆ ಆಜಾದಿ’ 5ನೇ ಆವೃತ್ತಿಗೆ ಚಾಲನೆ

HDFC Mutual Fund lauches 5th edition of Barni Se Azadi campaign: HDFC ಮ್ಯೂಚುವಲ್ ಫಂಡ್ ಸಂಸ್ಥೆ ಸ್ವಾತಂತ್ರ್ಯ ದಿನದಂದು 'BarniSeAzadi' ಅಭಿಯಾನದ 5 ನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಇದು ಸಾಂಪ್ರದಾಯಿಕ ಉಳಿತಾಯವನ್ನು ಮೀರಿ ಹೂಡಿಕೆಗಳತ್ತ ಸಾಗುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಗುರಿಯನ್ನು ಹೊಂದಿದೆ. "ಸಪ್ನೆ ಕರೋ ಆಜಾದ್" ಅಭಿಯಾನದ ಚಲನಚಿತ್ರವು SIP ಮೂಲಕ ತನ್ನ ತಾಯಿಯ ಅತೃಪ್ತ ಕನಸುಗಳನ್ನು ನನಸಾಗಿಸುವ ಯುವತಿಯ ಸ್ಪೂರ್ತಿದಾಯಕ ಕಥೆಯನ್ನು ಚಿತ್ರಿಸುತ್ತದೆ.

HDFC MF: ಸ್ವಾತಂತ್ರ್ಯೋತ್ಸವದಂದು ಎಚ್​ಡಿಎಫ್​ಸಿ ಎಂಎಫ್​ನಿಂದ ದೊಡ್ಡ ಹೆಜ್ಜೆ; ‘ಬರ್ನಿ ಸೆ ಆಜಾದಿ’ 5ನೇ ಆವೃತ್ತಿಗೆ ಚಾಲನೆ
ಎಚ್​ಡಿಎಫ್​ಸಿ ಮ್ಯುಚುವಲ್ ಫಂಡ್ ಬರ್ನಿ ಸೆ ಆಜಾದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 15, 2025 | 7:25 PM

Share

Barni Se Azadi 5th Edition: ಭಾರತದ ಪ್ರಮುಖ ಮ್ಯೂಚುವಲ್ ಫಂಡ್ (Mutual Fund) ಸಂಸ್ಥೆಗಳಲ್ಲಿ ಒಂದಾದ HDFC ಮ್ಯೂಚುವಲ್ ಫಂಡ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಜನರಿಗೆ ಭರ್ಜರಿ ಉಡುಗೊರೆ ನೀಡಿದೆ. HDFC ಮ್ಯೂಚುವಲ್ ಫಂಡ್‌ನ ಇನ್ವೆಸ್ಟ್ಮೆಂಟ್ ಮ್ಯಾನೇಜರ್ ಆಗಿರುವ HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ಬರ್ನಿ ಸೆ ಆಜಾದಿ’ ಅಭಿಯಾನದ 5 ನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಈ ಉಪಕ್ರಮವು ಮಹಿಳೆಯರು ಸಾಂಪ್ರದಾಯಿಕ ಉಳಿತಾಯ ವಿಧಾನಗಳನ್ನು ಮೀರಿ ಹೂಡಿಕೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಪ್ರೇರೇಪಿಸುತ್ತದೆ.

ಈ ವರ್ಷದ “ಸಪ್ನೆ ಕರೋ ಆಜಾದ್” ಪ್ರಚಾರ ಚಿತ್ರ

ಈ ವರ್ಷದ ಪ್ರಚಾರ ಚಿತ್ರ “ಸಪ್ನೆ ಕರೋ ಆಜಾದ್” (Sapne Karo Aazad). ಕುಟುಂಬದ ಅಗತ್ಯಗಳನ್ನು ಪೂರೈಸಲು ತನ್ನ ತಾಯಿಯು ಡಬ್ಬವೊಂದರಲ್ಲಿ ಹಣ ಬಚ್ಚಿಡುವುದನ್ನು ನೋಡುವ ಯುವತಿಯೊಬ್ಬಳ ಸ್ಪೂರ್ತಿದಾಯಕ ಕಥೆ ಇದು. ತಾಯಿಯ ಕಠಿಣ ಪರಿಶ್ರಮ ಮತ್ತು ತ್ಯಾಗದಿಂದ ಪ್ರೇರಿತಳಾಗಿ, ಅವಳು ಹೊಸ ಮಾರ್ಗವನ್ನು ಆರಿಸಿಕೊಳ್ಳುತ್ತಾಳೆ.

ವಿಡಿಯೋ ನೋಡಿ

ಆ ಯುವತಿ SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್) ಮೂಲಕ ಹೂಡಿಕೆ ಮಾಡುತ್ತಾಳೆ. ಇದರಿಂದ ಬರುವ ರಿಟರ್ನ್ಸ್ ಬಳಸಿ ತನ್ನ ತಾಯಿಯ ಅಂಗಡಿ ತೆರೆಯುವ ಕನಸನ್ನು ನನಸಾಗಿಸುತ್ತಾಳೆ. ನಿಜವಾದ ಸ್ವಾತಂತ್ರ್ಯವು ಕೇವಲ ಹಣವನ್ನು ಉಳಿಸುವುದರಿಂದಲ್ಲ, ಬದಲಾಗಿ ಸ್ಟ್ರಾಟಿಜಿಕ್ ಇನ್ವೆಸ್ಟ್​ಮೆಂಟ್ ಮೂಲಕ ಕನಸುಗಳನ್ನು ಸಾಕಾರಗೊಳಿಸುವುದರಿಂದ ಸಿಗುತ್ತದೆ ಎಂಬುದನ್ನು ಈ ಕಥೆ ಒತ್ತಿಹೇಳುತ್ತದೆ.

ಸಾಮಾಜಿಕ ಚಳುವಳಿಯಾಗಿ ಮಾರ್ಪಟ್ಟ ಈ ಅಭಿಯಾನ

ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ MD ಮತ್ತು CEO ನವನೀತ್ ಮುನೋಟ್, “ಕಳೆದ ನಾಲ್ಕು ವರ್ಷಗಳಲ್ಲಿ, ‘ಬರ್ನಿ ಸೆ ಆಜಾದಿ’ ಅಭಿಯಾನವು, ಸಂಪತ್ತು ಸೃಷ್ಟಿಯನ್ನು ಸೀಮಿತಗೊಳಿಸುವ ಸಾಂಪ್ರದಾಯಿಕವಾದ ಸೇವಿಂಗ್ಸ್ ಅಭ್ಯಾಸಗಳಿಂದ ಮುಕ್ತಗೊಳಿಸುವ ಒಂದು ಸಾಮಾಜಿಕ ಚಳವಳಿಯಾಗಿ ವಿಕಾಸಗೊಂಡಿದೆ.

ಇದನ್ನೂ ಓದಿ: ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಎಷ್ಟು ಬೆಳವಣಿಗೆ ಸಾಧಿಸಿದೆ? ಇಲ್ಲಿದೆ ಕೆಲ ಹೈಲೈಟ್ಸ್

ಆಜಾದಿ ಕಾ ಅಮೃತ್ ಮಹೋತ್ಸವ ವರ್ಷದಲ್ಲಿ ಪ್ರಾರಂಭಿಸಲಾದ ಈ ಅಭಿಯಾನದಲ್ಲಿ, ನಾವು ಬರ್ನಿ (ಡಬ್ಬ) ಅನ್ನು ಬದಲಾವಣೆಯ ಪ್ರಬಲ ಸಂಕೇತವಾಗಿ ಮರು ವ್ಯಾಖ್ಯಾನಿಸಿದ್ದೇವೆ. ಭಾರತದಾದ್ಯಂತ ಮಹಿಳೆಯರು ಮಾಹಿತಿಯುಕ್ತ, ದೀರ್ಘಾವಧಿಯ ಹೂಡಿಕೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಪ್ರೇರೇಪಿಸುತ್ತೇವೆ ಎಂದು ಅವರು ಹೇಳಿದರು. ನಿಮ್ಮ ಹಣವು ನಿಮ್ಮಂತೆಯೇ ಶ್ರಮಿಸಿದಾಗ ನಿಜವಾದ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲಾಗುತ್ತದೆ ಎಂದು ಹೇಳಬೇಕಾಗಿಲ್ಲ.

79 ಬೀದಿ ನಾಟಕಗಳ ಮೂಲಕ ಸಂದೇಶ

79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಮಹಿಳೆಯರಿಗೆ ಹೂಡಿಕೆಯ ಮಹತ್ವವನ್ನು ಸಾರಲು HDFC ಮ್ಯೂಚುವಲ್ ಫಂಡ್ ದೇಶಾದ್ಯಂತ 79 ಸ್ಥಳಗಳಲ್ಲಿ ಬೀದಿ ನಾಟಕಗಳನ್ನು ಆಯೋಜಿಸಿದೆ. ‘ಬರ್ನಿ ಸೆ ಆಜಾದಿ’ಯ ಆವೇಗವನ್ನು ಮುಂದುವರಿಸುತ್ತಾ, HDFC ಮ್ಯೂಚುವಲ್ ಫಂಡ್ ಪ್ರತಿಯೊಬ್ಬ ಮಹಿಳೆ ಕಲಿಯಬಹುದಾದ, ಬೆಳೆಯಬಹುದಾದ ಮತ್ತು ಸಮೃದ್ಧಿಯಾಗಬಹುದಾದ ಹೂಡಿಕೆ ಭೂದೃಶ್ಯದ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ