Digital India: ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಎಷ್ಟು ಬೆಳವಣಿಗೆ ಸಾಧಿಸಿದೆ? ಇಲ್ಲಿದೆ ಕೆಲ ಹೈಲೈಟ್ಸ್
Empowering Governance through Digital Infrastructure: ಭಾರತದ ಡಿಜಿಟಲ್ ಆರ್ಥಿಕತೆ ಅಗಾಧವಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಆದಾಯದ ಶೇ. 11.74ರಷ್ಟು ಕೊಡುಗೆ ಡಿಜಿಟಲ್ ಆರ್ಥಿಕತೆಯಿಂದ ಆಗುತ್ತಿದೆ. ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಭಾರತ ಪ್ರಮುಖ ಆಟಗಾರನಾಗಿದೆ. ಹತ್ತು ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ಸರಕುಗಳ ಮ್ಯಾನುಫ್ಯಾಕ್ಚರಿಂಗ್ 1.9 ಲಕ್ಷ ಕೋಟಿ ರೂನಿಂದ 11.3 ಲಕ್ಷ ಕೋಟಿ ರೂಗೆ ಹೆಚ್ಚಿದೆ.

ಡಿಜಿಟಲ್ ಸೌಕರ್ಯ ವ್ಯವಸ್ಥೆಯಲ್ಲಿ ಭಾರತ ದಿನೇ ದಿನೇ ಪ್ರಗತಿ ಕಾಣುತ್ತಿದೆ. ಅದರ ವ್ಯವಸ್ಥೆ ಗಟ್ಟಿಗೊಳ್ಳುತ್ತಿದೆ. ಆಡಳಿತ ಹಾಗೂ ನಾಗರಿಕರ ನಡುವೆ ಡಿಜಿಟಲ್ ಇಂಡಿಯಾ ಸೇತುವಾಗಿದೆ. ಸವಾಲುಗಳನ್ನು ಪರಿಹಾರವಾಗಿ ಪರಿವರ್ತಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. 79ನೇ ಸ್ವಾತಂತ್ರ್ಯೋತ್ಸವ ದಿನದಂದು ಅವರು ದೇಶದ ಅಭ್ಯುದಯಕ್ಕೆ ಡಿಜಿಟಲ್ ಇಂಡಿಯಾ ಹೇಗೆ ದಾರಿ ತೋರುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಭಾರತವು ಡಿಜಿಟಲ್ ಕ್ಷೇತ್ರದಲ್ಲಿ ಏನೆಲ್ಲಾ ಪ್ರಗತಿ ಕಂಡಿದೆ ಎಂಬ ಮುಖ್ಯಾಂಶಗಳು ಇಲ್ಲಿವೆ.
ಡಿಜಿಟಲ್ ಇಂಡಿಯಾ ಸಾಧನೆಯ ಹೈಲೈಟ್ಸ್
- 2022-23ರಲ್ಲಿ ರಾಷ್ಟ್ರೀಯ ಆದಾಯಕ್ಕೆ ಡಿಜಿಟಲ್ ಆರ್ಥಿಕತೆಯ ಕೊಡುಗೆ ಶೇ. 11.74 ಇದೆ. ಇದು 2024-25ರಲ್ಲಿ ಶೇ. 13.42ಕ್ಕೆ ಏರುವ ನಿರೀಕ್ಷೆ ಇದೆ. 2030ರೊಳಗೆ ಡಿಜಿಟಲ್ ಆರ್ಥಿಕತೆ ಜಿಡಿಪಿಯ ಶೇ. 20ರಷ್ಟಾಗುವ ಅಂದಾಜಿದೆ.
- ಡಿಜಿಟಲೀಕರಣದಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ.
- 2014-15ರಲ್ಲಿ ಎಲೆಕ್ಟ್ರಾನಿಕ್ಸ್ ಸರಕುಗಳ ತಯಾರಿಕೆ 1.9 ಲಕ್ಷ ಕೋಟಿ ರೂ ಇತ್ತು. 2024-25ರಲ್ಲಿ ಅದು 11.3 ಲಕ್ಷ ಕೋಟಿ ರೂ ಆಗಿದೆ. ಅವುಗಳ ರಫ್ತು ಇದೇ ಅವಧಿಯಲ್ಲಿ 38,000 ಕೋಟಿ ರೂನಿಂದ 3.27 ಲಕ್ಷ ಕೋಟಿ ರೂಗೆ ಏರಿದೆ.
ಇದನ್ನೂ ಓದಿ: ಮಹಾನ್ ಬ್ಯುಸಿನೆಸ್ಮ್ಯಾನ್ಗಳಾಗಿದ್ದ ಭಾರತೀಯರನ್ನು ಬ್ರಿಟಿಷರು ಸಂಬಳದ ಗುಲಾಮರನ್ನಾಗಿ ಮಾಡಿದ ಕಥೆ..!
- ಮೊಬೈಲ್ ತಯಾರಿಕಾ ಘಟಕಗಳು 2014-15ರಲ್ಲಿ 2 ಇದ್ದುವು. ಈ ಸಂಖ್ಯೆ 2024-25ರಲ್ಲಿ 300ಕ್ಕೆ ಏರಿದೆ. ಮೊಬೈಲ್ ಫೋನ್ ತಯಾರಿಕೆ ಮೌಲ್ಯ 18,000 ಕೋಟಿ ರೂನಿಂದ 5.45 ಲಕ್ಷ ಕೋಟಿ ರೂಗೆ ಏರಿದೆ. ರಫ್ತು 1,500 ಕೋಟಿ ರುನಿಂದ 2 ಲಕ್ಷ ಕೋಟಿ ರೂಗೆ ಏರಿದೆ.
- 2014ರಲ್ಲಿ ಟೆಲಿಫೋನ್ ಕನೆಕ್ಷನ್ 93.3 ಕೋಟಿ ಇತ್ತು. 2025ರಲ್ಲಿ 120 ಕೋಟಿಗೂ ಅಧಿಕವಾಗಿದೆ.
- ಇಂಟರ್ನೆಟ್ ಸಂಪರ್ಕ 2014ರಲ್ಲಿ 25.15 ಕೋಟಿ ಇತ್ತು. 2024ರಲ್ಲಿ ಅದು 96.96 ಕೋಟಿಗೆ ಏರಿದೆ. ಭಾರತದ ಶೇ. 97.65 ಗ್ರಾಮಗಳಿಗೆ ಮೊಬೈಲ್ ಕನೆಕ್ಟಿವಿಟಿ ಇದೆ.
- 2022ರಲ್ಲಿ 5ಜಿ ಆರಂಭವಾದಾಗಿನಿಂದ ಶೇ. 99.6 ಜಿಲ್ಲೆಗಳಾದ್ಯಂತ 4.74 ಲಕ್ಷ 5ಜಿ ಟವರ್ಗಳು ಸ್ಥಾಪನೆಯಾಗಿವೆ.
- ಪಿಎಂ ವಾಣಿ ಯೋಜನೆ ಅಡಿ 3,33,300 ಪಬ್ಲಿಕ್ ವೈಫೈ ಹಾಟ್ಸ್ಪಾಟ್ಗಳನ್ನು ನೀಡಲಾಗಿದೆ.
- ತ್ವರಿತ ಪೇಮೆಂಟ್ ವಿಚಾರದಲ್ಲಿ ಜಾಗತಿಕವಾಗಿ ಯುಪಿಐ ನಂಬರ್ ಒನ್ ಎನಿಸಿದೆ ಎಂದು ಐಎಂಎಫ್ ಹೇಳಿದೆ.
- ಭಾರತದ ಶೇ. 85ರಷ್ಟು ಡಿಜಿಟಲ್ ಪೇಮೆಂಟ್ಗಳು ಯುಪಿಐ ಮೂಲಕ ಆಗುತ್ತಿವೆ. ಜಾಗತಕವಾಗಿ ರಿಯಲ್ ಟೈಮ್ ಡಿಜಿಟಲ್ ಪೇಮೆಂಟ್ಗಳಲ್ಲಿ ಶೇ. 50ರಷ್ಟು ಯುಪಿಐ ಮೂಲಕ ಆಗುತ್ತಿವೆ.
ಇದನ್ನೂ ಓದಿ: ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ: ಪ್ರಧಾನಿ ಮೋದಿ
- ಯುಪಿಐ ನಿತ್ಯ 64 ಕೋಟಿಗೂ ಅಧಿಕ ಟ್ರಾನ್ಸಾಕ್ಷನ್ಗಳನ್ನು ನಿರ್ವಹಿಸುತ್ತದೆ. ಇದು ವೀಸಾ ಸಿಸ್ಟಂಗಿಂತಲೂ ಹೆಚ್ಚು.
- ಸರ್ಕಾರಿ ಇ-ಮಾರುಕಟ್ಟೆ (GeM- Government e-Marketplace) 5 ಲಕ್ಷ ಕೋಟಿ ರೂ ಸರಕು ಮೌಲ್ಯ ಹೊಂದಿದ್ದು, 1.6 ಲಕ್ಷ ಸರ್ಕಾರಿ ಖರೀದಿದಾರರು ಇದನ್ನು ಬಳಸುತ್ತಾರೆ. ಇದರಲ್ಲಿ ಎಂಎಸ್ಎಂಇಗಳು, ಸ್ಟಾರ್ಟಪ್ಗಳು ಸೇರಿ ಒಟ್ಟು 22 ಲಕ್ಷಕ್ಕೂ ಅಧಿಕ ಮಾರಾಟಗಾರರು ನೊಂದಾಯಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




