AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾನ್ ಬ್ಯುಸಿನೆಸ್​ಮ್ಯಾನ್​ಗಳಾಗಿದ್ದ ಭಾರತೀಯರನ್ನು ಬ್ರಿಟಿಷರು ಸಂಬಳದ ಗುಲಾಮರನ್ನಾಗಿ ಮಾಡಿದ ಕಥೆ..!

Know how British killed Indian businesses: ಭಾರತದಲ್ಲಿ ಯಾಕೆ ವಿಶ್ವಶ್ರೇಷ್ಠ ಉದ್ಯಮಗಳು ಸೃಷ್ಟಿಯಾಗಿಲ್ಲ? ಅಂಬಾನಿ, ಅದಾನಿ, ಟಾಟಾ, ಬಿರ್ಲಾರಂತಹ ಉದ್ಯಮಿಗಳ ಸಂಖ್ಯೆ ಯಾಕೆ ದೊಡ್ಡದಿಲ್ಲ? ಎಂದು ಕೇಳುವವರಿದ್ದಾರೆ. ಆದರೆ, ಇತಿಹಾಸಕಾರರ ಪ್ರಕಾರ ಬ್ರಿಟಿಷರು ಬರುವ ಮುನ್ನ ಭಾರತ ಉದ್ಯಮಿಗಳ ಸ್ವರ್ಗವಾಗಿತ್ತು. ಬ್ರಿಟಿಷರು ಹಂತಹಂತವಾಗಿ ಅವರನ್ನು ಮುಗಿಸಿದರು.

ಮಹಾನ್ ಬ್ಯುಸಿನೆಸ್​ಮ್ಯಾನ್​ಗಳಾಗಿದ್ದ ಭಾರತೀಯರನ್ನು ಬ್ರಿಟಿಷರು ಸಂಬಳದ ಗುಲಾಮರನ್ನಾಗಿ ಮಾಡಿದ ಕಥೆ..!
ಬ್ರಿಟಿಷರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 15, 2025 | 4:19 PM

Share

ಇವತ್ತು ಸ್ವಾತಂತ್ರ್ಯ ದಿನೋತ್ಸವ (Indian independence day). ಭಾರತಕ್ಕೆ ಸ್ವಾತಂತ್ರ್ಯ ಬರದೆ ಬ್ರಿಟಿಷರ ಆಳ್ವಿಕೆಯೇ ಇದ್ದಿದ್ದರೆ ಬಹಳ ಚೆನ್ನಾಗಿತ್ತು ಎಂದು ಹೇಳುವವರು ಈಗಲೂ ಬಹಳ ಮಂದಿ ಇದ್ದಾರೆ. ಸ್ವಾತಂತ್ರ್ಯಾನಂತರ ಬಂದ ಸರ್ಕಾರಗಳ ನಿರ್ಲಕ್​ಷ್ಯತನದಿಂದ ಭಾರತದ ಅಭಿವೃದ್ಧಿಪಥ ಮಂದವಾಗಿ ಸಾಗಿದ್ದು ನಿಜ. ಭಾರತದಲ್ಲಿ ಯಾಕೆ ಜಾಗತಿಕ ಮಟ್ಟದ ಉದ್ಯಮಗಳು ತಯಾರಾಗಲಿಲ್ಲ? ವಿಶ್ವದ ಮೇಲೆ ಪ್ರಭಾವ ಬೀರಬಲ್ಲ ಉದ್ಯಮಿಗಳು ಯಾಕೆ ನಿರ್ಮಾಣವಾಗಲಿಲ್ಲ ಎಂದು ಈಗ ಬಹಳ ಜನರು ಕೇಳುತ್ತಾರೆ. ಆದರೆ, ಬ್ರಿಟಿಷರು ಬರುವ ಮುನ್ನ ಭಾರತದಲ್ಲಿ ಅದ್ಭುತವಾದ ಉದ್ಯಮಿಗಳಿದ್ದರು, ಉದ್ದಿಮೆಗಳಿದ್ದುವು ಎಂದರೆ ಬಹಳ ಮಂದಿಗೆ ಆಶ್ಚರ್ಯ ಆಗುತ್ತದೆ. ಇತಿಹಾಸಕಾರ ಸೌರಭ್ ಮುಖರ್ಜಿಯಾ ಅವರ ಪ್ರಕಾರ, ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದಲ್ಲಿ ಬ್ಯುಸಿನೆಸ್ ಪ್ರತಿಭೆಗಳನ್ನು ಹಂತ ಹಂತವಾಗಿ ನಾಶ ಮಾಡುತ್ತಾ ಬರಲಾಗಿತ್ತಂತೆ.

ಒಡೆದು ಆಳುವ ನೀತಿ ಜಾರಿ ತಂದಿದ್ದ ಬ್ರಿಟಿಷರು…

ಬ್ರಿಟಿಷರು ಭಾರತದಂತಹ ಬೃಹತ್ ದೇಶವನ್ನು ಆಳಲು ಕಂಡುಕೊಂಡ ಸುಲಭ ಮಾರ್ಗ ಎಂದರೆ ಅದು ಒಡೆದು ಆಳುವ ನೀತಿ. ಭಾರತದ ಅದಮ್ಯ ಶಕ್ತಿಯನ್ನು ಆಂತರಿಕವಾಗಿ ವ್ಯವಸ್ಥಿತವಾಗಿ ಕುಂದಿಸುತ್ತಾ ಹೋದರು. ಇಂಗ್ಲೀಷನ್ನು ಇಟ್ಟುಕೊಂಡು ಜನರಲ್ಲಿ ಕೀಳರಿಮೆ ತಂದು ಗುಲಾಮಗಿರಿ ಇಂಗ್ಲೀಷ್ ಕ್ಲರ್ಕ್​ಗಳನ್ನು ಸೃಷ್ಟಿಸಿದರು. ತಾವು ಈ ನಾಡಿಗೆ ಕಾಲಿಡುವ ಮುನ್ನ ಭಾರತ ಹಾವಾಡಿಗರ ದೇಶ, ನಿರಕ್ಷರಕುಕ್ಷಿಗಳ ನಾಡು ಇತ್ಯಾದಿ ಅಪಖ್ಯಾತಿ ಹೊಂದಿತ್ತು ಎಂಬಂತೆ ಬ್ರಿಟಿಷರು ಬಿಂಬಿಸಿದ್ದರು. ಭಾರತೀಯರಿಗೆ ಆಡಳಿತ ಆಗದು, ನೌಕರರಾಗಲು ಲಾಯಕ್ಕು ಎಂದು ಬ್ರೇನ್​ವಾಶ್ ಮಾಡಿದ್ದರು. ಇಂಗ್ಲೀಷ್ ಭಾಷೆಯನ್ನು ಇಟ್ಟುಕೊಂಡು ಭಾರತೀಯರಲ್ಲಿ ಕೀಳರಿಮೆ ಮೂಡಿಸಿದ್ದರು. ಇಂಗ್ಲೀಷ್ ಮಾತನಾಡುವ ಕ್ಲರ್ಕ್​ಗಳನ್ನು ಸೃಷ್ಟಿಸಿದ್ದರು. ಇಡೀ ಶಿಕ್ಷಣ ವ್ಯವಸ್ಥೆಯೇ ಇಂಥ ಗುಲಾಮೀ ಕ್ಲರ್ಕ್​ಗಳ ಸೃಷ್ಟಿಯ ಕಾರ್ಖಾನೆಯಂತಾಗಿತ್ತು. ಆದರೆ, ಬ್ರಿಟಿಷರು ಬರುವ ಮುನ್ನ ಭಾರತ ನಿಜವಾಗಿಯೂ ಹೇಗಿತ್ತು ಎಂಬ ಪ್ರಶ್ನೆಗೆ ಕೆಲ ಇತಿಹಾಸಕಾರರು ಉತ್ತರ ಕೊಟ್ಟಿದ್ದಾರೆ.

ವೀರ್​ಜಿ ವೋರಾ, ಶಾಂತಿ ದಾಸ್ ಝಾವಿರಿ, ಜಗತ್ ಶೇಠ್, ಮುಲ್ಲಾ ಅಬ್ದುಲ್ ಗಫಾರ್ ಮೊದಲಾದ ದೊಡ್ಡ ಉದ್ಯಮಿಗಳು 16ರಿಂದ 18ನೇ ಶತಮಾನದಲ್ಲಿ ಇದ್ದರು. ಹಡಗು, ಹತ್ತಿ, ಹಣಕಾಸು, ವ್ಯಾಪಾರ ಇತ್ಯಾದಿ ಕ್ಷೇತ್ರದಲ್ಲಿ ಭಾರತೀಯರು ಪಾರಮ್ಯ ಸಾಧಿಸಿದ್ದರು. ಆ ಕಾಲಘಟ್ಟದಲ್ಲಿ ಭಾರತದಲ್ಲಿ ಹಲವಾರು ಯೂನಿಕಾರ್ನ್ ಬ್ಯುಸಿನೆಸ್ ಸಂಸ್ಥೆಗಳಿದ್ದುವಂತೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್​ನಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣದವರೆಗೆ, ಭಾರತದ ಶಕ್ತಿ ಸಾಮರ್ಥ್ಯ, ಗುರಿ ತೆರೆದಿಟ್ಟ ಪ್ರಧಾನಿ

ವರ್ತಕರ ಬಗ್ಗೆ ಅಪಾರ್ಥ ಮೂಡಿಸಿದ್ದ ಬ್ರಿಟಿಷರು

ಭಾರತೀಯ ಉದ್ಯಮಿಗಳ ಸಾಮರ್ಥ್ಯ ಕಂಡು ದಂಗಾಗಿದ್ದ ಬ್ರಿಟಿಷರು, ಕ್ರಮೇಣವಾಗಿ ಈ ಬ್ಯುಸಿನೆಸ್​ಮ್ಯಾನ್​ಗಳನ್ನು ಕಡೆಗಣಿಸುತ್ತಾ ಬಂದರು. ಬಾಂಬೆಯ ಪಾರ್ಸಿ ವರ್ತಕರನ್ನು ಟಾರ್ಗೆಟ್ ಮಾಡಿ ಮುಗಿಸಿದರು. ಪಾರ್ಸಿಗಳಲ್ಲದೇ ಗುಜರಾತಿ, ಮಾರ್ವಾಡಿ, ಸಿಂಧಿ ಬ್ಯುಸಿನೆಸ್​ಮ್ಯಾನ್​ಗಳು ಬಹಳ ಮೋಸಗಾರರು ಎಂದು ಬಿಂಬಿಸಿ ಸಮಾಜದಲ್ಲಿ ಅವರ ಸ್ಥಾನಮಾನ ಕುಂದುವಂತೆ ಮಾಡಿದರು ಬ್ರಿಟಿಷರು ಎಂದು ಹೇಳುತ್ತಾರೆ ಸೌರಭ್ ಮುಖರ್ಜಿ.

ಭಾರತೀಯ ವರ್ತಕರು ನಾಲಾಯಕ್ಕು. ವಿದೇಶಿಗರು ಶ್ರೇಷ್ಠರು ಎನ್ನುವ ಮಾನಸಿಕತೆ ಬ್ರಿಟಿಷರ ಅವಧಿಯಲ್ಲಿ ಸೃಷ್ಟಿಯಾಗದ್ದು, ಸ್ವಾತಂತ್ರ್ಯಾನಂತರವೂ ಮುಂದುವರಿದಿದೆ. ಭಾರತದ ಔದ್ಯಮಿಕ ಶಕ್ತಿ ಹೆಚ್ಚು ಜಾಗೃತಗೊಂಡಿದ್ದು 1991ರ ನಂತರವೇ ಎಂಬುದು ಅವರ ವಾದ.

ಮೊಘಲರ ಮುಂಚಿನ ದಿನಗಳು ಇನ್ನೂ ಉತ್ತಮವಿದ್ದುವು…

ಭಾರತದ ಇತಿಹಾಸವನ್ನು ಇವತ್ತು ಮೂರೇ ಭಾಗದಲ್ಲಿ ಹೇಳುತ್ತಾರೆ. ಬ್ರಿಟಿಷರ ಅವಧಿ, ಮೊಘಲರ ಅವಧಿ ಮತ್ತು ಆರಂಭಿಕ ಅವಧಿ. ಇತಿಹಾಸ ಪುಸ್ತಕಗಳಲ್ಲಿ ಬ್ರಿಟಿಷರು ಮತ್ತು ಮೊಘಲರ ಆಡಳಿತದ ಬಗ್ಗೆಯೇ ಹೆಚ್ಚಿನ ವಿವರಣೆ ಇರುತ್ತದೆ. ಅಶೋಕ, ಸಮುದ್ರಗುಪ್ತ, ಹರ್ಷವರ್ಧನ ಇತ್ಯಾದಿ ರಾಜರು, ಹಾಗೂ ಗುಪ್ತರು, ಶಾತವಾಹನರು, ಮಗಧರು, ಚೋಳರು ಇತ್ಯಾದಿ ರಾಜವಂಶಗಳ ಉಲ್ಲೇಖಗಳು ಮತ್ತು ಸಣ್ಣ ವಿವರಣೆಗಳು ಮಾತ್ರ ಸಿಗುತ್ತವೆ.

ಇದನ್ನೂ ಓದಿ: ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ; ಭಾರತವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ: ಪ್ರಧಾನಿ ಮೋದಿ

ಮೊಘಲರ ಕಾಲದಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಆರ್ಥಿಕತೆ ಎನಿಸಿತ್ತು ಎನ್ನಲಾಗುತ್ತದೆ. ಅದಕ್ಕಿಂತ ಮುಂಚೆಯೂ ಭಾರತವು ವಿಶ್ವಶ್ರೇಷ್ಠ ವ್ಯಾಪಾರಿಗಳ ನಾಡಾಗಿತ್ತು. ಭಾರತದ ನೌಕಾ ಕ್ಷೇತ್ರ ಅಮೋಘವಾಗಿತ್ತು. ಭಾರತದ ರಾಜ ಸಾಮ್ರಾಜ್ಯಗಳು ಹಲವು ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದವು. ಸಮುದ್ರ ಮಾರ್ಗದಲ್ಲಿ ಸರಕುಗಳ ಸಾಗಣೆ ಮಾಡಲಾಗುತ್ತಿತ್ತು.

ಬಹಳ ಶ್ರೇಷ್ಠ ಇತಿಹಾಸ ಇರುವ ಭಾರತದ ಬಗ್ಗೆ ಕೀಳರಿಮೆ ಮೂಡಿಸುವ ಪಠ್ಯವನ್ನು ಓದಿ ಬೆಳೆದಿರುವ ಜನರಲ್ಲಿ ಈಗಲೂ ವಿದೇಶೀ ಕಂಪನಿಗಳೇ ಶ್ರೇಷ್ಠ ಎನ್ನುವ ಭಾವನೆ ಸಹಜವಾಗಿ ನೆಲಸಿರುತ್ತದೆ. ಭಾರತೀಯರು ಉದ್ಯಮ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಬಲ್ಲರು ಎಂಬುದಕ್ಕೆ ಸಾಕ್ಷಿ ಇತ್ತು ಜಾಗತಿಕ ದೈತ್ಯ ಕಂಪನಿಗಳ ಸಿಇಒಗಳ ಸ್ಥಾನದಲ್ಲಿ ಭಾರತೀಯರು ಇರುವುದು. ಭಾರತದಲ್ಲಿ ಉದ್ಯಮಗಳ ಬೆಳವಣಿಗೆಗೆ ಇನ್ನೂ ಪೂರಕವಾದ ಪರಿಸರ ಮೂಡಿದಲ್ಲಿ ಇಲ್ಲೂ ಕೂಡ ವಿಶ್ವಶ್ರೇಷ್ಠ ಕಂಪನಿಗಳು ಹುಟ್ಟಬಲ್ಲುವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್